rtgh

Amazon: ಅಮೆಜಾನ್ ಕ್ರಿಸ್‌ಮಸ್ ಸೇಲ್ 2023: ಈ LED ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್!


Amazon

Amazon: ರಜಾದಿನವು ತನ್ನ ಉತ್ತುಂಗವನ್ನು ತಲುಪುತ್ತಿದ್ದಂತೆ, Amazon ತನ್ನ ಅತ್ಯಂತ ನಿರೀಕ್ಷಿತ ಕ್ರಿಸ್ಮಸ್ ಸೇಲ್ 2023 ನೊಂದಿಗೆ ಉಲ್ಲಾಸ ಮತ್ತು ಉಳಿತಾಯವನ್ನು ಹರಡುತ್ತಿದೆ. ಈ ವರ್ಷದ ಹಬ್ಬದ ಸಂಭ್ರಮ ಎಂದಿಗಿಂತಲೂ ದೊಡ್ಡದಾಗಿದೆ ಮತ್ತು ಉತ್ತಮವಾಗಿರುತ್ತದೆ ಎಂದು ಭರವಸೆ ನೀಡುತ್ತದೆ, ಶಾಪರ್‌ಗಳಿಗೆ ಅಜೇಯ ಡೀಲ್‌ಗಳು, ವಿಶೇಷ ರಿಯಾಯಿತಿಗಳು ಮತ್ತು ಒಂದು ಜಾರುಬಂಡಿಯನ್ನು ನೀಡುತ್ತದೆ. ನಿಮ್ಮ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಉಡುಗೊರೆ ಕಲ್ಪನೆಗಳ ನಿಧಿ.

Amazon Christmas Sale 2023
Amazon Christmas Sale 2023

ಸ್ಮಾರ್ಟ್‌ಟಿವಿಗಳು ಹಾಗೂ ಸ್ಮಾರ್ಟ್‌ಫೋನ್‌ಗಳು (Smart TVs, Smartphones) ಇಂದು ಭಿನ್ನ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿವೆ. ಅದರಲ್ಲೂ ಬಜೆಟ್‌ ಬೆಲೆಯಿಂದ ದುಬಾರಿ ಬೆಲೆಯ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಇದೀಗ ಅಮೆಜಾನ್‌ ಪ್ರಮುಖ ಪ್ರೀಮಿಯಂ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಹೌದು, ಅಮೆಜಾನ್ ಕ್ರಿಸ್‌ಮಸ್ ಸೇಲ್ 2023 (Amazon Christmas Sale 2023) ಮೂಲಕ ಸ್ಯಾಮ್‌ಸಂಗ್‌, ಅಪಲ್‌ ಸೇರಿದಂತೆ ಪ್ರಮುಖ ಟಾಪ್‌ ಕಂಪೆನಿಗಳ ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಅಮೆಜಾನ್‌ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಇದರೊಂದಿಗೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಇವುಗಳನ್ನು ಕೊಂಡುಕೊಳ್ಳಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಹಾಗೂ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಡಿವೈಸ್‌ಗಳು ಏನೆಲ್ಲಾ ಆಫರ್ ಪಡೆದಿವೆ ನೋಡೋಣ ಬನ್ನಿ.

Amazon Christmas Sale 2023
Amazon Christmas Sale 2023

ಆಫರ್ ವಿವರಗಳು

ಸ್ಯಾಮ್‌ಸಂಗ್‌ 43 ಇಂಚಿನ ಕ್ರಿಸ್ಟಲ್ ಐ ಸ್ಮಾರ್ಟ್‌ 4K ಅಲ್ಟ್ರಾ HD ಸ್ಮಾರ್ಟ್ LED TV: ಈ ಸ್ಮಾರ್ಟ್‌ಟಿವಿಯನ್ನು ಗೇಮ್‌ ಆಡಲು ಸಹ ಬಳಕೆ ಮಾಡಬಹುದಾಗಿದೆ. ಈ ಕಾರಣಕ್ಕಾಗಿಯೇ ಮೂರು ಹೆಚ್‌ಡಿಎಮ್‌ಐ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಯೂಟ್ಯೂಬ್‌ ಮತ್ತು ಇತರ ಸೇವೆಗಳನ್ನು ಈ ಸ್ಮಾರ್ಟ್‌ಟಿವಿ ಬೆಂಬಲಿಸಲಿದೆ. ಇದನ್ನು ಈ ವಿಶೇಷ ಸೇಲ್‌ನಲ್ಲಿ 30,990 ರೂ.ಗೆ ಖರೀದಿ ಮಾಡಬಹುದಾಗಿದೆ.

ಇನ್ನು ಓದಿ: ವಸತಿ ಶಾಲೆಗಳ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ.

ರೆಡ್ಮಿ 32 ಇಂಚಿನ F ಸರಣಿ HD ರೆಡಿ ಸ್ಮಾರ್ಟ್ LED ಫೈರ್ ಟಿವಿ: ಸಾಕಷ್ಟು ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್‌ಟಿವಿ ಉತ್ತಮ ಮನರಂಜನೆಗೆ ಯೋಗ್ಯವಾಗಿದೆ. ಇದರ ಸೊಗಸಾದ ನೋಟ ಮತ್ತು ಹೆಚ್‌ಡಿಎಮ್‌ಐ ಮತ್ತು ಯುಎಸ್‌ಬಿ ಪೋರ್ಟ್‌ಗಳಂತಹ ಹಲವಾರು ಕನೆಕ್ಟಿವಿಟಿ ಕಾರಣದಿಂದಾಗಿ ಯಾವುದೇ ಪ್ರದೇಶಕ್ಕೆ ಹೊಂದಿಕೊಳ್ಳುವ ಸ್ಮಾರ್ಟ್‌ಟಿವಿಯಾಗಿದೆ. ಇದನ್ನು ನೀವು ಈ ವಿಶೇಷ ಸೇಲ್‌ನಲ್ಲಿ 11,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಆಪಲ್‌ ಐಫೋನ್‌ 13: ಆಪಲ್‌ ಫೋನ್‌ (Apple iPhone 13) ಖರೀದಿ ಮಾಡುವವರಿಗೆ ಇದು ಬೆಸ್ಟ್‌ ಟೈಮ್‌ ಆಗಿದೆ. ಯಾವುದೇ ಹೊಸ ಸರಣಿಯ ಐಫೋನ್‌ ಬಂದರೂ ಸಹ ಈ ಫೋನ್‌ಗೆ ಭಾರೀ ಬೇಡಿಕೆ ಇದ್ದೇ ಇದೆ. ಯಾಕೆಂದರೆ ಈ ಫೋನ್‌ ಉತ್ತಮ ಕ್ಯಾಮೆರಾ ಫೀಚರ್ಸ್‌ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು, ಇದರಲ್ಲಿನ ಅತ್ಯಾಧುನಿಕ ಡ್ಯುಯಲ್ ಕ್ಯಾಮೆರಾ ಮೂಲಕ 4K ಚಲನಚಿತ್ರಗಳು ಮತ್ತು ಬೆರಗುಗೊಳಿಸುವ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದನ್ನು ನೀವು 52,999 ರೂ.ಗಳಿಗೆ ಖರೀದಿ ಮಾಡಬಹುದು.

ಅಲೆಕ್ಸಾ ವಾಯ್ಸ್ ಫೈರ್ ಟಿವಿ ಸ್ಟಿಕ್: ಈ ಡಿವೈಸ್‌ನೊಂದಿಗೆ (Fire TV Stick with Alexa Voice Remote) ಉತ್ತಮವಾದ ಸ್ಟ್ರೀಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಇದು ಡಾಲ್ಬಿ ಅಟ್ಮಾಸ್ ಸೌಂಡ್‌ನೊಂದಿಗೆ ನೆಚ್ಚಿನ ಹಾಲಿಡೇ ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಜೊತೆಗೆ 12,000 ಕ್ಕೂ ಹೆಚ್ಚು ಆಪ್‌ಗಳನ್ನು ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಹಾಗೆಯೇ ಲಕ್ಷಾಂತರ ಚಲನಚಿತ್ರಗಳು ಮತ್ತು ಟಿವಿ ಸರಣಿ ಸಂಚಿಕೆಗಳನ್ನು ಸುಲಭವಾಗಿ ಸ್ಟ್ರೀಮ್ ಮಾಡಬಹುದಾಗಿದ್ದು, ಅಲೆಕ್ಸಾ ವಾಯ್ಸ್ ರಿಮೋಟ್ ಅನ್ನು ಬಳಸಿಕೊಂಡು ಕಂಟೆಂಟ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಈ ಡಿವೈಸ್‌ಗೆ 4,499 ರೂ.ಗಳ ಆಫರ್ ಬೆಲೆ ನಿಗದಿ ಮಾಡಲಾಗಿದೆ.

ಆಲ್-ನ್ಯೂ ಎಕೋ ಡಾಟ್ : ಎಕೋ ಡಾಟ್‌ನ ಐದನೇ ಆವೃತ್ತಿ ಇದಾಗಿದ್ದು( all-new Echo Dot), ಇದರ ಮೋಷನ್ ಡಿಟೆಕ್ಟರ್‌ಗಳು ಮತ್ತು ತಾಪಮಾನ ಸೆನ್ಸರ್‌ನೊಂದಿಗೆ ಇನ್ನಷ್ಟು ಸ್ಮಾರ್ಟ್ ಹೋಮ್ ಕಾರ್ಯಗಳನ್ನು ಮಾಡುತ್ತದೆ. ಅಲೆಕ್ಸಾ ಜೊತೆಗೆ ನಿಮ್ಮ ಕ್ರಿಸ್ಮಸ್ ದೀಪಗಳನ್ನು ಬೆಳಗಿಸುವ ಮೂಲಕ ಸಂಭ್ರಮ ಪಡೆಯಬಹುದು. ಹಾಗೆಯೇ ವಾಯ್ಸ್‌ ಕಂಟ್ರೋಲ್‌ ಬಳಕೆ ಮಾಡಿಕೊಂಡು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ನಿರ್ವಹಿಸಲು ಅನುಮತಿಸುತ್ತದೆ. ಇದರ ಬೆಲೆ 5,499 ರೂ.ಗಳಾಗಿದೆ.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G: ಈ ಸ್ಮಾರ್ಟ್‌ಫೋನ್‌ (OnePlus Nord CE 3 Lite) ಅನ್ನು ಈ ವೇಳೆ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 8GB RAM ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 24 ಗಂಟೆಗಳಿಗಿಂತ ಹೆಚ್ಚು ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಅನ್ನು ಈ ಫೋನ್‌ ಹೊಂದಿದೆ. ಈ ವಿಶೇಷ ಸೇಲ್‌ನಲ್ಲಿ 19,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.


Leave a Reply

Your email address will not be published. Required fields are marked *