rtgh

Asia Cup 2023: ಏಷ್ಯಾಕಪ್​ಗೆ ಬಲಿಷ್ಠ ಭಾರತ ತಂಡ‌ ಪ್ರಕಟ; ಅಯ್ಯರ್-ರಾಹುಲ್ ವಾಪಸ್, ಸಂಜು-ಚಹಲ್​ಗಿಲ್ಲ ಚಾನ್ಸ್, ತಿಲಕ್​ಗೆ ಚೊಚ್ಚಲ ಕರೆ


ಬಹುನಿರೀಕ್ಷಿತ ಏಷ್ಯಾಕಪ್​ ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಗಸ್ಟ್​ 30 ರಿಂದ ಶುರುವಾಗುವ ಏಕದಿನ ಮಾದರಿಯ ಈ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯು ಬಲಿಷ್ಠ 17 ಸದಸ್ಯರ ತಂಡವನ್ನು ಘೋಷಿಸಿದೆ. ನಾಯಕ ರೋಹಿತ್​ ಶರ್ಮಾ ಮತ್ತು ಹೆಡ್​ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಈ ಟೂರ್ನಿಗೆ ಅಳೆದು ತೂಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

asia cup 2023 squad india team list
asia cup 2023 squad india team list

asia cup 2023 india squad bcci players list

ಮಧ್ಯಾಹ್ನ 12 ಗಂಟೆಗೆ ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್, ಆಯ್ಕೆ ಸಮಿತಿ ಸದಸ್ಯರು, ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಸೇರಿ ಸಭೆ ನಡೆಸಿದರು. ಒಂದೂವರೆ ಗಂಟೆಗಳ ಸುದೀರ್ಘ ಚರ್ಚೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಅಜಿತ್ ಅಗರ್ಕರ್​, ತಂಡವನ್ನು ಪ್ರಕಟಿಸಿದರು. ತಂಡಕ್ಕೆ ಕೆಲವು ಅಚ್ಚರಿಯ ಹೆಸರುಗಳು ಬಂದಿವೆ. ಕೆಲವರು ಗಾಯದಿಂದ ತಂಡಕ್ಕೆ ಮರಳಿದ್ದು, ಬಲ ಹೆಚ್ಚಿಸಿದೆ. ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಆಘಾತವಾಗಿದೆ.

ರಾಹುಲ್​​​-ಅಯ್ಯರ್​ ತಂಡಕ್ಕೆ ವಾಪಸ್

ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್​ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಟೀಮ್ ಮ್ಯಾನೇಜ್​ಮೆಂಟ್ ಮತ್ತು ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಮಧ್ಯಮ ಕ್ರಮಾಂಕದ ಆಧಾರ ಸ್ಥಂಭಗಳಾಗಿದ್ದ ಇವರು, ಇನ್ನೂ ಫಿಟ್​ ಆಗಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಅಲ್ಲದೆ, ಅವರ ಸ್ಥಾನಕ್ಕೆ ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಆದರೆ ಅವರು ಫಿಟ್​ ಆಗಿರುವುದು ತಂಡದ ಬಲ ಹೆಚ್ಚಿಸಿದೆ. ಅಲ್ಲದೆ, ಗಾಯಗೊಂಡಿದ್ದ ಜಸ್​ಪ್ರೀತ್​ ಬೂಮ್ರಾ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಫುಲ್​ ಫಿಟ್​ ಆಗಿದ್ದು, ಹಲವು ತಿಂಗಳ ನಂತರ ಏಕದಿನ ಕ್ರಿಕೆಟ್​ಗೆ ಮರಳಿದ್ದಾರೆ. ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂದುವರೆದಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಅಜಿತ್ ಅಗರ್ಕರ್​. 

ತಿಲಕ್ ವರ್ಮಾಗೆ ಅಚ್ಚರಿ, ಸಂಜುಗೆ ಕೊಕ್

ಹೌದು, ಅನಿರೀಕ್ಷಿತ ಎಂಬಂತೆ ಪ್ರಕಟಗೊಂಡ ತಂಡದಲ್ಲಿ ತಿಲಕ್​ ವರ್ಮಾ ಅವರಿಗೆ ಅವಕಾಶ ಸಿಕ್ಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕೇವಲ 7 ಟಿ20 ಪಂದ್ಯಗಳನ್ನಾಡಿರುವ ತಿಲಕ್​​ಗೆ ಅವಕಾಶ ನೀಡಿರುವುದು ಅಚ್ಚರಿ ಮೂಡಿಸಿದೆ. ಆದರೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ಸಂಜು ಸ್ಯಾಮ್ಸನ್​ಗೆ ಈ ಬಾರಿಯೂ ಅನ್ಯಾಯವಾಗಿದೆ. ಏಕದಿನ ಕ್ರಿಕೆಟ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರ ಹೊರತಾಗಿಯೂ ತಂಡದಲ್ಲಿ ಅವಕಾಶ ನೀಡದೆ, ಮೀಸಲು ಆಟಗಾರನ ಸ್ಥಾನಕ್ಕೆ ಅವಕಾಶ ನೀಡಿದ್ದಾರೆ. ನಿರೀಕ್ಷೆಯಂತೆ ಯುಜ್ವೇಂದ್ರ ಚಹಲ್, ಶಿಖರ್​ ಧವನ್, ಭುವನೇಶ್ವರ್​ ಕುಮಾರ್ ಅವರನ್ನು ಕೈಬಿಡಲಾಗಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ಇನ್ನು ಓದಿ:ಏಷ್ಯಾ ಕಪ್ 2023 ವೇಳಾಪಟ್ಟಿ: ಗ್ರೂಪ್ ವೈಸ್ ಟೀಮ್ ಟೈಮ್ ಟೇಬಲ್, ಸ್ಥಳ, ತಂಡಗಳು

ಸಂಜು ಸ್ಯಾಮ್ಸನ್​ ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ.

asia cup 2023 squad india team list
asia cup 2023 squad india team list

ತಿಲಕ್ ಅಚ್ಚರಿ ಆಯ್ಕೆ

ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿದ್ದು, ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರೆಯಲ್ಲಿದ್ದಾರೆ. ಆದರೆ ವರದಿಗಳ ಪ್ರಕಾರ ಹಾರ್ದಿಕ್​ಗೆ ಉಪನಾಯಕತ್ವ ಕೈತಪ್ಪಲಿದೆ ಎನ್ನಲಾಗಿತ್ತು. ಇನ್ನು ಐಪಿಎಲ್​ನಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್ ಹಾಗೂ ಮತ್ತೊಬ್ಬ ಗಾಯಾಳು ಶ್ರೇಯಸ್ ಅಯ್ಯರ್ ಫುಲ್ ಫಿಟ್​ ಆಗಿದ್ದು, ಏಷ್ಯಾಕಪ್ ಮೂಲಕ ಭಾರತ ತಂಡಕ್ಕೆ ಮರಳಿದ್ದಾರೆ.

ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ನಡೆಯುತ್ತಿರುವ ಕಾರಣ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಗೆ ಆತಿಥ್ಯ ನೀಡುತ್ತಿವೆ. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ತಂಡಗಳು ಪ್ರಕಟವಾಗಿದ್ದವು. ಆಗಸ್ಟ್​ 30ರಿಂದ ಈ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 17ಕ್ಕೆ ಟೂರ್ನಿ ಮುಕ್ತಾಯಗೊಳ್ಳಲಿದೆ.

ವಿಶ್ವಕಪ್​ಗೂ ಇದೇ ತಂಡ?

ಏಕದಿನ ವಿಶ್ವಕಪ್​​ ದೃಷ್ಟಿಯನ್ನು ಮುಂದಿಟ್ಟುಕೊಂಡೇ ತಂಡವನ್ನು ಕಟ್ಟಲಾಗಿದೆ. ಇದೇ ತಂಡವನ್ನು ಮೆಗಾ ಟೂರ್ನಿಯಲ್ಲೂ ಕಣಕ್ಕಿಳಿಸಲು ಚಿಂತನೆ ನಡೆದಿದೆ. ಸೆಪ್ಟೆಂಬರ್​​ 5ರ ಒಳಗೆ ಏಕದಿನ ವಿಶ್ವಕಪ್ ಟೂರ್ನಿಗೂ ತಂಡವನ್ನು ಪ್ರಕಟಿಸಬೇಕಿದೆ. ಹಾಗಾಗಿ, ಬಹುತೇಕ ಇದೇ ತಂಡವನ್ನು ಅಂತಿಮಗೊಳಿಸುವ ನಿರ್ಧಾರಕ್ಕೆ ಆಯ್ಕೆ ಸಮಿತಿ ಬಂದಿದೆ. ಒಂದೆರಡು ಬದಲಾವಣೆಗಳಾದರೂ ಅಚ್ಚರಿ ಇಲ್ಲ. ಆದರೆ ಮೆಗಾ ಟೂರ್ನಿಗೆ 15 ಸದಸ್ಯರ ತಂಡವನ್ನು ಮಾತ್ರ ಪ್ರಕಟಿಸಬೇಕಿದೆ. ಹಾಗಾಗಿ, ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ತೀವ್ರ ಗೊಂದಲ ಸೃಷ್ಟಿಸಿದೆ.

ಇನ್ನು ಓದಿ:ಏಷ್ಯಾ ಕಪ್ 2023 ವೇಳಾಪಟ್ಟಿ: ಗ್ರೂಪ್ ವೈಸ್ ಟೀಮ್ ಟೈಮ್ ಟೇಬಲ್, ಸ್ಥಳ, ತಂಡಗಳು


Leave a Reply

Your email address will not be published. Required fields are marked *