rtgh

ಸಾವಿರ ವರ್ಷಗಳ ಬಳಿಕ ಖಗೋಳದಲ್ಲಿ ವಿಸ್ಮಯ.! ಆಗಸ್ಟ್’ನಲ್ಲೇ ಕೆಲವು ಅದ್ಭುತ ಕೌತುಕಗಳು..! ಇವುಗಳ ವಿಕ್ಷಗೆ ಹೇಗೆ ?


ಖಗೋಳದಲ್ಲಿ ವಿಸ್ಮಯ

ಆಗಸವು ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್ ತಿಂಗಳಲ್ಲಿ ನಾಲ್ಕು ವಿಸ್ಮಯಗಳು ನಡೆಯಲಿದ್ದು, ಈ ಕುರಿತು ಇಲ್ಲಿದೆ ಮಾಹಿತಿ. ಇದೀಗ ಆಗಸ್ಟ್ ಆರಂಭವಾಗಿದ್ದು, ಇಡೀ ತಿಂಗಳು ಖಗೋಳದಲ್ಲಿ ಅಪರೂಪದ ವಿಸ್ಮಯಗಳು ನಡೆಯಲಿವೆ. ಆಕಾಶದಲ್ಲಿ ಬ್ಲೂ ಮೂನ್ ಹಾಗೂ ಸೂಪರ್ ಮೂನ್ ಆಕಾಶದಲ್ಲಿ ಬ್ಲೂ ಮೂನ್‌ಗಳನ್ನು ಕಾಣಬಹುದಾಗಿದೆ. ಶನಿ ಗ್ರಹವು ಸೂರ್ಯನ ನೇರಕ್ಕೆ ಬರಲಿದೆ. ಹಾಗೂ ಶೂನ್ಯ ನೆರಳಿನ ದಿನವು ಕೂಡ ಇದೇ ತಿಂಗಳಲ್ಲಿ ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

Astronomical Events 2023 in kannada
Astronomical Events 2023 in kannada

Astronomical Events 2023 in kannada

ಆಗಸ್ಟ್ 31 ಭೂಮಿಯ ಮೇಲೆ ಚಂದ್ರನ ಬೆಳಕು..!

ನಮ್ಮ ಗ್ರಹದ ಸುತ್ತ ದೀರ್ಘವೃತ್ತದ ಹಾದಿಯಲ್ಲಿ ಹುಣ್ಣಿಮೆಯ ಕಕ್ಷೆಯು ಭೂಮಿಗೆ ಹತ್ತಿರವಾದಾಗ ಸೂಪರ್‌ಮೂನ್ ಸಂಭವಿಸುತ್ತದೆ. ಅಂದರೆ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಇದು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಚಂದ್ರ ಭೂಮಿಯ ಸಮೀಪ ಬರುತ್ತಾನೆ. ಚಂದ್ರನು ಭೂಮಿಯ ಪರಿಧಿಯ ಶೇ. 90ರಷ್ಟು ಹತ್ತಿರ ಬಂದಾಗ ಈ ಖಗೋಳ ವಿಸ್ಮಯವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

ಈ ತಿಂಗಳಲ್ಲಿ ಕಾಣಿಸಿಕೊಳ್ಳುವ ಸೂಪರ್ ಮೂನ್’ಗಳ ಪೈಕಿ ಮೊದಲ ಸೂಪರ್ ಮೂನ್ ಮಂಗಳವಾರ ರಾತ್ರಿ ಆಗಸ್ಟ್ 01ರಂದು ಗೋಚರವಾಗಿದೆ. ಭಾರತದ ಹಲವು ಪ್ರದೇಶಗಳಲ್ಲಿ ಬೆಳದಿಂಗಳ ಚಂದಿರ ಕಾಣಿಸಿಕೊಂಡಿದ್ದಾನೆ.

ಎರಡನೇ ಬ್ಲೂ ಮೂನ್ ಆಗಸ್ಟ್ 31 ರಂದು ಗೋಚರಿಸುತ್ತದೆ. ಬೆಳಿಗ್ಗೆ 7:05 ಕ್ಕೆ ಇದು ಸ್ಪಷ್ಟವಾಗಿ ಕಾಣಿಸಲಿದ್ದು, ಈ ನಿರ್ದಿಷ್ಟ ಬ್ಲೂಮೂನ್ ಕೂಡ ಸೂಪರ್‌ಮೂನ್ ಆಗಿರುತ್ತದೆ. ಇದು ಇಡೀ ವರ್ಷದಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸುವ ಹುಣ್ಣಿಮೆಯಾಗಿದೆ.

ಆಗಸ್ಟ್ 18 ಶೂನ್ಯ ನೆರಳಿನ ದಿನ

ಪ್ರತಿವರ್ಷ ಎಪ್ರಿಲ್, ಮೇ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಶೂನ್ಯ ನೆರಳು ಎಂಬ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತಿದ್ದು, ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಅಂತ ಕರೆಯಲಾಗುತ್ತದೆ.

ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ ನಮ್ಮ ನೆರಳು ನೇರವಾಗಿ ಕಾಲ ಕೆಳಗಿರುತ್ತದೆ. ನಾವು ನಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ಗೋಚರಿಸುವುದಿಲ್ಲ. ಇದನ್ನು ಖಗೋಳ ವಿಜ್ಞಾನದಲ್ಲಿ ‘ಶೂನ್ಯ ನೆರಳು’ ಎನ್ನಲಾಗುತ್ತದೆ. ಇದೇ ತಿಂಗಳ 18 ರಂದು ಶೂನ್ಯ ನೆರಳಿನ ದಿನವಾಗಿದ್ದು, ಆ ದಿನ ನಮ್ಮ ನೆರಳು ಗೋಚರ ಆಗಲ್ಲ.

ಆಗಸ್ಟ್ 27ರಂದು ಸೂರ್ಯನ ನೇರಕ್ಕೆ ಶನಿ ಗ್ರಹ

ಇದೇ ಆಗಸ್ಟ್ 27ರಂದು ಶನಿಗ್ರಹವು ಸೂರ್ಯನ ನೇರಕ್ಕೆ ಬರಲಿದೆ. ಇದು ತುಂಬಾ ಅಪರೂಪ ಆಗಿದ್ದು, ಹಾಗೂ ಭೂಮಿಯಿಂದ ಶನಿಗ್ರಹವನ್ನು ನೋಡಬಹುದು. ಶನಿಯ ರಿಂಗ್ ಕೂಡ ಕಣ್ಣಿಗೆ ಕಾಣಲಿದೆ.

ಆಗಸ್ಟ್ 18 – κ-ಸಿಗ್ನಿಡ್ ಉಲ್ಕಾಪಾತದ ಶಿಖರ

ಆಗಸ್ಟ್ನಲ್ಲಿ ಎರಡನೇ ಉಲ್ಕಾಪಾತವು ಆಗಸ್ಟ್ 18 ರ ರಾತ್ರಿ ಸಂಭವಿಸುತ್ತದೆ. ಈ ರಾತ್ರಿಯಲ್ಲಿ, ನೀವು ಪ್ರತಿ ಗಂಟೆಗೆ ಸರಿಸುಮಾರು 3 ಉಲ್ಕೆಗಳ ದರದಲ್ಲಿ κ-ಸಿಗ್ನಿಡ್ ಉಲ್ಕಾಪಾತದ ಶಿಖರವನ್ನು ನೋಡಬಹುದು. ಈ ಉಲ್ಕಾಪಾತವು ಕೆಲವು ದಿನಗಳ ಹಿಂದೆ ಪರ್ಸೀಡ್ಸ್‌ನಂತೆ ಸ್ಫೋಟಕವಾಗಿಲ್ಲ, ಮತ್ತು ಈ ರಾತ್ರಿಯಲ್ಲಿ ಚಂದ್ರನು ಇನ್ನೂ ಸುಮಾರು 50% ಪ್ರಕಾಶಿಸುತ್ತಾನೆ.

κ-ಸಿಗ್ನಿಡ್ ಉಲ್ಕೆಗಳನ್ನು ಗುರುತಿಸಲು, ಸಿಗ್ನಸ್ ಬಳಿ (ಅದರ ವಿಶಿಷ್ಟ ಅಡ್ಡ ನಕ್ಷತ್ರ ಚಿಹ್ನೆಯೊಂದಿಗೆ) ಡ್ರಾಕೋ ನಕ್ಷತ್ರಪುಂಜಗಳನ್ನು ನೋಡಿ. 18 ರಂದು, ಈಶಾನ್ಯ ದಿಗಂತದ ಮೇಲಿರುವ ಆಕಾಶದ ಈ ಪ್ರದೇಶದಿಂದ κ-ಸಿಗ್ನಿಡ್ ಉಲ್ಕೆಗಳು ಹೊರಹೊಮ್ಮುತ್ತವೆ.

ರಾತ್ರಿ ಆಕಾಶವನ್ನು ಆನಂದಿಸಲು ಇತರರಿಗೆ ಸಹಾಯ ಮಾಡಲು ಇದನ್ನು ಹಂಚಿಕೊಳ್ಳಿ!


Leave a Reply

Your email address will not be published. Required fields are marked *