rtgh

IRCTC : ಇನ್ಮುಂದೆ ರೈಲಿನಲ್ಲಿ ಈ ವಸ್ತುಗಳನ್ನ ತೆಗೆದುಕೊಂಡು ಹೋದ್ರೆ ಜೈಲು ಸೇರೋದು ಪಕ್ಕಾ!


ರೈಲು ಪ್ರಯಾಣವನ್ನು ಪ್ರಾರಂಭಿಸುವುದು ಒಂದು ಸಂತೋಷಕರ ಅನುಭವವಾಗಿದೆ, ರಮಣೀಯ ವೀಕ್ಷಣೆಗಳನ್ನು ಮತ್ತು ಶಾಂತವಾದ ಸಾರಿಗೆ ವಿಧಾನವನ್ನು ನೀಡುತ್ತದೆ. ಆದಾಗ್ಯೂ, ಎಲ್ಲಾ ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ನಿಯಮಗಳು ಮತ್ತು ನಿಬಂಧನೆಗಳು ಜಾರಿಯಲ್ಲಿವೆ. ಪೋಸ್ಟ್‌ನಲ್ಲಿ, ರೈಲಿನಲ್ಲಿ ತಂದರೆ, ನಿಮ್ಮನ್ನು ಗಂಭೀರ ಕಾನೂನು ತೊಂದರೆಗೆ ಸಿಲುಕಿಸಬಹುದಾದ ಐಟಂಗಳನ್ನು ನಾವು ಅನ್ವೇಷಿಸುತ್ತೇವೆ.

Baggage Rules in Indian Railways
Baggage Rules in Indian Railways

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ರೈಲುಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರೈಲಿನಲ್ಲಿ ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸದಂತೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖಡಕ್‌ ಸೂಚನೆ ನೀಡಿದೆ.

ಹೌದು, ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಡೀಸೆಲ್, ಸೀಮೆಎಣ್ಣೆ, ಸ್ಟವ್, ಮ್ಯಾಚ್ ಬಾಕ್ಸ್, ಸಿಗರೇಟ್ ಲೈಟರ್, ಪಟಾಕಿ ಸೇರಿದಂತೆ ಯಾವುದೇ ಸ್ಫೋಟಕ ವಸ್ತುಗಳನ್ನು ಪ್ರಯಾಣಿಕರು ತೆಗೆದುಕೊಂಡು ಹೋಗದಂತೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಶುಕ್ರವಾರ ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಈಗಾಗಲೇ ರೈಲಿನಲ್ಲಿ ಪ್ರಯಾಣಿಕರು ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಹಲವು ಘಟನೆಗಳು ನಡೆದಿದ್ದು, ಇದಕ್ಕೆ ಬ್ರೇಕ್‌ ಹಾಕಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲಿನಲ್ಲಿ ಪಟಾಕಿ ಮತ್ತು ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯಡಿ ಅಪರಾಧ ಎಂದು ಸೂಚಿಸಿದರು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಲ್ಲದೇ ಚಲಿಸುವ ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಪ್ರಯಾಣಿಕರು ಧೂಮಪಾನ ಮಾಡಬಾರದು ಎಂದು ರೈಲ್ವೆ ಇಲಾಖೆ ಈಗಾಗಲೆ ಸುತ್ತೋಲೆ ಹೊರಡಿಸಿದೆ. ಅಲ್ಲದೇ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಪಟಾಕಿ ಮತ್ತು ಸುಡುವ ವಸ್ತುಗಳನ್ನು ಸಾಗಿಸಿದ್ದಕ್ಕಾಗಿ ಐದು ಪ್ರಕರಣಗಳನ್ನು ದಾಖಲಿಸಲಾಗಿವೆ. ಚಲಿಸುವ ರೈಲಿನಲ್ಲಿ ಮತ್ತು ರೈಲ್ವೆ ಆವರಣಗಳಲ್ಲಿ ಧೂಮಪಾನ ಮಾಡಿದಕ್ಕೆ 258 ಪ್ರಕರಣಗಳು ದಾಖಲಾಗಿವೆ ಎಂದು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ತಿಳಿಸಿದರು.

ಈಗಾಗಲೇ ಅಗ್ನಿ ದುರಂತಗಳಿಂದ ಮುನ್ನೇಚ್ಚರಿಕೆ ಕ್ರಮವನ್ನ ಈ ನಿಯಮವನ್ನ ರೈಲ್ವೆ ಇಲಾಖೆ ತೆಗೆದುಕೊಂಡಿದ್ದು, ರೈಲ್ವೆ ಕಾರ್ಯಾಚರಣೆಗೆ ಸಂಬಂಧಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಅಗ್ನಿಶಾಮಕಗಳನ್ನು ಹೇಗೆ ಬಳಸಬೇಕೆಂದು ತರಬೇತಿ ನೀಡಲಾಗಿದೆ. ವಿಭಾಗದ 30 ನಿಲ್ದಾಣಗಳಲ್ಲಿ ರೈಲ್ವೆ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಅಗ್ನಿ ಸುರಕ್ಷತಾ ತಪಾಸಣೆ ನಡೆಸಿದರು. 182 ಪ್ಯಾಂಟ್ರಿ ಕಾರುಗಳನ್ನು ಸಹ ಪರಿಶೀಲಿಸಲಾಗಿದೆ ಮತ್ತು ನ್ಯೂನತೆಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ರೈಲ್ವೆಯಲ್ಲಿ ದಹನಕಾರಿ ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ 1,000 ರೂ.ವರೆಗೆ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.


Leave a Reply

Your email address will not be published. Required fields are marked *