rtgh

ತಿರುಪತಿ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ.! ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ ಆರಂಭ, ಇಲ್ಲಿದೆ ದರ, ಸಮಯ


Spread the love

Hello ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ ಆರಂಭ ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Bangalore to Tirupati Helicopter Service
Bangalore to Tirupati Helicopter Service

ತಿರುಪತಿ (Tirupati) ದೇವಸ್ಥಾನದ ಭಕ್ತರಿಗೆ ಪ್ಲೈಬ್ಲೇಡ್‌ ಇಂಡಿಯಾ ಸಂಸ್ಥೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭಕ್ತರು ಪ್ರತಿನಿತ್ಯ ಭೇಟಿ ನೀಡುತ್ತಲೇ ಇರುತ್ತಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಬೆಂಗಳೂರಿನಿಂದಲೂ ಲಕ್ಷಾಂತರ ಭಕ್ತರು ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಆದರೆ ಇದೀಗ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇದೆ. ಫ್ಲೆಬ್ಲೇಡ್‌ ಇಂಡಿಯಾ ಸಂಸ್ಥೆಯು ಬೆಂಗಳೂರಿನಿಂದ ತಿರುಪತಿಗೆ (Bengaluru-Tirupati Helicopter) ತೆರಳುವ ಭಕ್ತರಿಗಾಗಿ ಹೆಲಿಕಾಪ್ಟರ್‌ ಸೇವೆ ಆರಂಭಿಸಿದೆ.

ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್

ಈ ಹೆಲಿಕಾಪ್ಟರ್‌ನಲ್ಲಿ ಭಕ್ತಾಧಿಗಳು ಬೆಂಗಳೂರಿನಿಂದ ತಿರುಪತಿ, ಮರಳಿ ತಿರುಪತಿಯಿಂದ ಬೆಂಗಳೂರಿಗೆ ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ. ಹಂಚ್‌ ವೆಂಚರ್ಸ್‌ ಮತ್ತು ಬೇಡ್‌ ಏರ್‌ ಮೊಬಿಲಿಟಿ ಜಂಟಿಯಾಗಿ ಸ್ಥಾಪಿಸಿದ ಈ ಕಂಪನಿ ಬೆಂಗಳೂರು-ತಿರುಪತಿ ನಡುವೆ ಹೆಲಿಕಾಪ್ಟರ್‌ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ಯಾತ್ರಾರ್ಥಿಗಳು ಯಾವಾಗ ಬೇಕಾದರೂ ಬಳಸಬಹುದು ಎಂದು ಕಂಪನಿ ಹೇಳಿದೆ. ಈ ಸೇವೆಗೆ ಕಂಪನಿಯು 3,50,000 ಬೆಲೆ ನಿಗದಿಪಡಿಸಿದೆ. ಪ್ರತಿ ಹೆಲಿಕಾಪ್ಟರ್‌ ಪ್ರಯಾಣದಲ್ಲಿ ಗರಿಷ್ಟ ಐದು ಜನ ಪ್ರಯಾಣ ಮಾಡಬಹುದು. ಹಾಗೆನೇ ಪ್ರಯಾಣಿಕರು ಸಂಪೂರ್ಣ ಹೆಲಿಕಾಪ್ಟರ್‌ ಬುಕ್‌ ಮಾಡಬಹುದು, ಅಥವಾ ಇತರರೊಂದಿಗೆ ಹಂಚಿಕೊಂಡು ಪ್ರಯಾಣ ಮಾಡಬಹುದು ಎಂದು ಸಂಸ್ಥೆ ಹೇಳಿದೆ.

ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್ ಸಮಯ

ಬೆಳಿಗ್ಗೆ 9.15-9.30 ಕ್ಕೆ ಹೆಲಿಕಾಪ್ಟರ್‌ ಪ್ರಯಾಣ ಬೆಂಗಳೂರಿನ HAL ವಿಮಾನ ನಿಲ್ದಾಣದಿಂದ ಪ್ರಾರಂಭವಾಗುತ್ತದೆ. ತಿರುಪತಿಯಿಂದ ಬೆಂಗಳೂರಿಗೆ ಹಿಂತಿರುಗುವ ಹೆಲಿಕಾಪ್ಟರ್‌ಗಳು ಸಂಜೆ 4.00 ರಿಂದ 4.15ರವರೆಗೆ ಹೊರಡುತ್ತವೆ. ಈ ಪ್ರಯಾಣ ವಯಸ್ಸಾದವರಿಗೆ ಅನುಕೂಲವಾಗಲಿದೆ. ಒಂದೇ ದಿನದಲ್ಲಿ ಹೋಗಿ ಬರಲು ಬೇಡ್ ಇಂಡಿಯಾ ಹೆಲಿಕಾಪ್ಟರ್​ ಸೇವೆ ಆರಂಭಿಸಿದೆ ಎಂದರೆ ತಪ್ಪಾಗಲಾರದು.


Spread the love

Leave a Reply

Your email address will not be published. Required fields are marked *