rtgh

ಈ 8 ಆಹಾರಗಳನ್ನು ಈಗ ನಿಷೇಧಿಸಲಾಗಿದೆ.! ಸಂಪೂರ್ಣ ವಿವರಗಳನ್ನು ಇಲ್ಲಿ ನೋಡಿ ಯಾವ್ಯಾವ ದೇಶದಲ್ಲಿ ಯಾವುದಕ್ಕೆಲ್ಲಾ ನಿಷೇಧ ?


Banned Foods From Around The World
Banned Foods From Around The World

ಕೆಲವೊಬ್ರು ಇರ್ತಾರೆ  ಯಾವ ಊರಿಗೇ ಹೋಗಲಿ, ಯಾವ ಜಾಗಕ್ಕೆ ಹೋಗಲಿ, ತಮಗೆ ಇಷ್ಟ ಆಗುವಂತ ಆಹಾರವನ್ನೇ ಕೇಳ್ತಾರೆ. ಬೇಕಾದಂತಹ ಫುಡ್‌ಗಳನ್ನ (Food) ಸುತ್ತಾಡಿಕೊಂಡು ತಿಂದು ಬರ್ತಾರೆ. ಆದರೆ, ಇಲ್ಲೊಂದಷ್ಟು ದೇಶಗಳಲ್ಲಿ ಕೆಲ ಆಹಾರ ತಿನಿಸುಗಳನ್ನ ನೀವು ಎಷ್ಟೇ ಹುಡುಕಿದ್ರೂ ಸಿಗಲ್ಲ. ಕಬಾಬ್‌ನಿಂದ ಹಿಡಿದು ಮಿಡಿಯಂ ರೇಂಜ್‌ನ ಬರ್ಗರ್ ಮೇಲೂ ಕೆಲವೊಂದು ದೇಶಗಳು ನಿರ್ಬಂಧವನ್ನ ವಿಧಿಸಿವೆ. ಇವಾಗಲೇ ಫಾಸ್ಟ್ ದುನಿಯಾ ಫಟಾಪಟ್ ಅಂತ ಕೆಲಸ ಮುಗೀಬೇಕು.. ಫಟಾಪಟ್ ಅಂತ ಹೋಗ್ತಾ ಇರಬೇಕು. ಊಟ, ತಿಂಡಿ ಕೂಡ ಫಟಾಫಟ್ ಅಂತ ತಿಂದು ಮುಗಿಬೇಕು. ಐದು ನಿಮಿಷದಲ್ಲಿ ಅಡುಗೆ (Cook) ಮಾಡಿ, ಎರಡು ನಿಮಿಷದಲ್ಲಿ ತಿನ್ನಬೇಕು ಅಂತಾರೆ.  ಆದರೆ, ಇಲ್ಲೊಂದಷ್ಟು ದೇಶಗಳಲ್ಲಿ ಆಹಾರಗಳನ್ನ ಐದು ನಿಮಿಷದಲ್ಲಿ (5 minuts) ತಿನ್ನೋದಿರಲಿ, ನೀವು ನೋಡೋದು ಕೂಡ ಕಷ್ಟ. ಯಾಕಂದ್ರೆ, ಆರೋಗ್ಯ, ಸ್ವಚ್ಚತೆ, ಸಂಸ್ಕೃತಿ ಸೇರಿದಂತೆ ಅನೇಕ ದೃಷ್ಟಿಯಿಂದ ಕೆಲವೊಂದು ಆಹಾರಗಳಿಗೆ ಶಾಶ್ವತವಾಗಿ ನಿರ್ಬಂಧ ವಿಧಿಸಲಾಗಿದೆ. ಯಾವ್ಯಾವ ದೇಶಗಳಲ್ಲಿ ಯಾವ್ಯಾವ ಫುಡ್‌ಗಳನ್ನ ಬ್ಯಾನ್ ಮಾಡಿದ್ದಾರೆ. ಯಾವ್ಯಾವ ದೇಶದಲ್ಲಿ ಯಾವುದಕ್ಕೆಲ್ಲಾ ನಿಷೇಧ ಅಂತ ನೋಡೋಣ ಬನ್ನಿ.

ಹಸುವಿನ ಹಾಲನ್ನು ಸಹ ನಿಷೇಧಿಸಲಾಗಿದೆ ಯಾಕೆ? ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

ಸಿಂಗಾಪುರದಲ್ಲಿ ಚ್ಯುಯಿಂಗ್ ಗಮ್‌ಗೆ ನಿಷೇಧ:

ಕೆಲ ಯುವಕರು ಟೈಮ್ ಪಾಸ್‌ಗೆ, ಕೆಲವರು ಸ್ಟಲ್ಗೆ, ಕಲವರು ಬಾಯಿಯಲ್ಲಿರುವ ದುರ್ವಾಸನೆ ತೊಲಗಿಸೋದಕ್ಕೆ ಚ್ಯುಯಿಂಗ್ ಗಮ್ ಮೊರೆ ಹೋಗ್ತಾರೆ. ನಮ್ಮ ದೇಶದಲ್ಲಂತೂ ಪುಟಾಣಿ ಮಕ್ಕಳಿಗೆ ಚ್ಯುಯಿಂಗ್ ಮಾದರಿಯ ಆಹಾರಗಳು ಸಿಕ್ಕಾಪಟ್ಟೆ ಫೇವರಿಟ್.

ಕಬಾಬ್ ಅನ್ನು ಸಹ ನಿಷೇಧಿಸಲಾಗಿದೆ ಯಾಕೆ? ಸಂಕ್ಷಿಪ್ತ ಮಾಹಿತಿಯಾಗಿದೆ ಇಲ್ಲಿ ಕ್ಲಿಕ್ ಮಾಡಿ

ಆದರೆ, ಸಿಂಗಾಪುರದಲ್ಲಿ ಚ್ಯುಯಿಂಗ್‌ಗಮ್‌ಗೆ 1992ರಲ್ಲೇ ಶಾಶ್ವತ ನಿರ್ಬಂಧ ಹೇರಲಾಗಿದೆ. ಕಾರಣ ಇಷ್ಟೇ. ಬಾಯಿಯಿಂದ ಜಿಗಿದು ಉಗಿದ, ಅಲ್ಲಲ್ಲಿ ಅಂಟಿಸಿ ಪರಾರಿಯಾದ ಚ್ಯುಯಿಂಗ್‌ ಗಮ್‌ನಿಂದ ಸಿಂಗಾಪುರದಲ್ಲಿ ದೊಡ್ಡ ದೊಡ್ಡ ದುರಂತಗಳೇ ನಡೆದು ಹೋಗಿವೆ.

ಒಮ್ಮೆ ಟ್ರೈನ್ವೊಂದರ ಬಾಗಿಲಿಗೆ ಚ್ಯುಯಿಂಗ್ ಗಮ್ ಅಂಟಿಕೊಂಡಿತ್ತು. ಇದ್ರಿಂದಾಗಿ ಬಾಗಿಲಿನ ಸೆನ್ಸರ್ ವರ್ಕ್ಆಗದೆ ರೈಲು ಸಂಚಾರವೇ ಬಂದ್ ಆಗಿತ್ತು.. ರೈಲು ಸಂಚಾರ ವ್ಯವಸ್ಥೆಯನ್ನೇ ಚ್ಯುಯಿಂಗ್ ಗಮ್ ಹಾಳು ಮಾಡಿತ್ತು. ಇಷ್ಟೇ ಅಲ್ಲ, ಸಿಂಗಾಪುರದ ಗೃಹ ಅಭಿವೃದ್ಧಿ ಬೋರ್ಡ್ನವರು, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿರುವ ಚ್ಯುಯಿಂಗ್ ಗಮ್ ಸ್ವಚ್ಛಗೊಳಿಸೋದಕ್ಕಾಗಿ ಅಂತಾನೇ ಸಿಕ್ಕಾಪಟ್ಟೆ ಖರ್ಚು ಮಾಡ್ತಿದ್ರು.

ಇದ್ರಿಂದಾಗಿ ಕೊನೆಗೆ ಚ್ಯುಯಿಂಗ್ ಗಮ್‌ಗೆ ನಿಷೇಧ ವಿಧಿಸಲಾಗಿದೆ. ಸದ್ಯ ಸಿಂಗಾಪುರದಲ್ಲಿ ಚ್ಯುಯಿಂಗ್ ಕಾನೂನು ಬಾಹಿರ. ಇದರ ಮೇಲೂ ಏನಾದ್ರೂ ಚ್ಯುಯಿಂಗ್ ಗಮ್ ಜಿಗಿದು ಉಗಿದ್ರೆ, ಒಂದು ಲಕ್ಷದ 23 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಇದರ ಜತೆಗೆ ಶಿಕ್ಷೆಯೂ ಇರುತ್ತದೆ. ಮಾರಾಟ ಮಾಡೋರಿಗಂತೂ ಉಗ್ರ ಶಿಕ್ಷೆಯೇ ಕಾದಿದೆ.

ಇಟಲಿಯ ವೆನ್ನಿಸ್‌ನಲ್ಲಿ ಕಬಾಬ್ ಬ್ಯಾನ್:

ನಾನ್ ವೆಜ್ ಪ್ರಿಯರಿಗೆ ಎಲ್ಲಿ ಬೇಕಾದ್ರೂ ಕಬಾಬ್ ಸಿಗುತ್ತೆ ಅಂದ್ಕೊಂಡ್ರೆ ತಪ್ಪು. ಯಾಕಂದ್ರೆ, ಇಟಲಿಯ ವೆನ್ನಿಸ್‌ನಲ್ಲಿ 2017ರಿಂದ ಎಲ್ಲ ರೀತಿಯ ಕಬಾಬ್‌ಗೆ ನಿಷೇಧ ವಿಧಿಸಲಾಗಿದೆ. ನಗರದ ಸಂಸ್ಕೃತಿಯ ಕಾರಣಕ್ಕಾಗಿ ಕಬಾಬ್‌ಗೆ ನಿರ್ಬಂಧವನ್ನ ಮೇಯರ್ ವಿಧಿಸಿದ್ದಾರೆ. ಸ್ಥಳೀಯ ವಸ್ತುಗಳನ್ನ ಪ್ರವಾಸಿಗರು ಖರೀದಿಸಬೇಕು. ಸ್ಥಳೀಯ ರುಚಿಯನ್ನೇ ಆಹ್ಲಾದಿಸಬೇಕು.

ಇದು ಹೇರಿಕೆ ಅಂತ ಅನಿಸಿದ್ರೂ, ನಮ್ಮ ದೇಶಿಯತನ ಉಳಿಸಿಕೊಳ್ಳಲು ಅವಶ್ಯಕತೆ ಇದೆ ಅಂತ ಈ ಅದೇಶ ಹೊರಡಿಸಿದ್ದಾರೆ. ಹೀಗಾಗಿ, ಇಟಲಿಯ ವೆನ್ನಿಸ್‌ನಲ್ಲಿ ನೀವೇನಾದ್ರೂ ಟೂರ್ ಹೋದ್ರೆ, ಅಲ್ಲಿ ಕಬಾಬ್ ಅಂತ ಹುಡುಕೋದಕ್ಕೆ ಹೋಗ್ಬೇಡಿ.

ಹೆಬ್ಬಲಸಿಗೆ ಸಿಂಗಾಪುರ, ಜಪಾನ್, ಥೈಲ್ಯಾಂಡ್‌ನಲ್ಲಿ ಜಾಗವಿಲ್ಲ;

ಹಲಸಿನಂತೆ ಕಾಣುವ ಹಣ್ಣು ಇದು.. ಹೆಬ್ಬಲಸು ಅಂತ ಕರೆಯುವ ಈ ಹಣ್ಣಿಗೆ ದ್ಯುರೆನ್ ಅನ್ನೋ ಹೆಸರಿದೆ. ಹಲಸು ಅಂತ ಅಪ್ಪಿತಪ್ಪಿ ಇದನ್ನ ನೀವು ಬಾಯಿಗೆ ಇಟ್ರೆ, ಮೂರು ದಿನ ಬಾಯಿ ತೊಳೆದರೂ ಅದರ ವಾಸನೆ ಹೋಗಲ್ಲ. ಯಾಕಂದ್ರೆ, ಅಷ್ಟರ ಮಟ್ಟಿಗೆ ದುರ್ಗಂಧ ಬೀರುವ ಹಣ್ಣಿದು. ಅತ್ಯಂತ ಪೌಷ್ಟಿಕಾಂಶ ಹೊಂದಿದ್ರೂ ದ್ಯುರೆನ್ ಹಣ್ಣು, ತನ್ನ ದುರ್ಗಂಧದಿಂದ ಕುಖ್ಯಾತಿ ಪಡೆದಿದೆ.

ಹೀಗಾಗಿ, ಸಿಂಗಾಪುರ, ಥೈಲ್ಯಾಂಡ್, ಜಪಾನ್, ಹಾಂಗ್‌ಕಾಂಗ್ ದೇಶಗಳಲ್ಲಿ ಈ ಹಣ್ಣಿಗೆ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ವ್ಯಾಪಾರ ವಹಿವಾಟು ಮಾತ್ರವಲ್ಲ, ಸಾರ್ವಜನಿಕ ಸಾರಿಗೆಯಿಂದಲ್ಲೂ ಇದನ್ನ ತೆಗೆದು ಹಾಕಲಾಗಿದೆ.

ಗಸಗಸೆ ಬೀಜಕ್ಕೂ ಈ ದೇಶಗಳಲ್ಲಿ ಪ್ರವೇಶವಿಲ್ಲ:

ನಮ್ಮ ದೇಶದಲ್ಲಿ ಸಿಹಿ ಪದಾರ್ಥಗಳಿಗೆ, ಪಾಯಸ, ಕೀರಿಗೆ ಗಸಗಸೆ ಬೀಜವನ್ನ ಹಾಕೇ ಹಾಕ್ತೀವಿ. ಆದರೆ, ಯುಎಇ, ತೈವಾನ್, ಸಿಂಗಾಪುರ ಸೇರಿದಂತೆ ಕೆಲ ದೇಶಗಳಲ್ಲಿ ಗಸಗಸೆ ಬೀಜಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾಕಂದ್ರೆ, ಈ ಗಸಗಸೆ ಬೀಜವನ್ನ ಮಾದಕವಸ್ತುಗಳ ಪಟ್ಟಿಗೆ ಸೇರಿಸಿದ್ದಾರೆ. ಇದ್ರಲ್ಲಿ ಮಾದಕದ ಅಂಶವಿದೆ. ಹೀಗಾಗಿ ಗಸಗಸೆ ಬೀಜಕ್ಕೆ ನಿಷೇಧ ಹೇರಲಾಗಿದೆ.

ಸೌದಿ ಅರೆಬೀಯಾದಲ್ಲಿ ಸಂಸ್ಕೃತಿ ಮತ್ತು ಮಾದಕ ಸೇವನೆ ತಡೆಯುವ ನಿಟ್ಟಿನಲ್ಲಿ ಗಸಗಸೆ ಬೀಜಕ್ಕೆ ನಿಷೇಧ ಹೇರಲಾಗಿದೆ. ಇನ್ನು ರಷ್ಯಾದಲ್ಲಿ ಗಸಗಸೆ ಮೇಲೆ ಕೆಲವೊಂದು ಕಟ್ಟುಪಾಡುಗಳನ್ನ ವಿಧಿಸಲಾಗಿದೆ.

ಇನ್ನು ಓದಿ : ಕೇವಲ 999 ಕ್ಕೆ ‌68 ಕಿ.ಮೀ ಮೈಲೇಜ್‌ ನೀಡುವ ಹೊಸ ಬೈಕ್! ಯಾವುದೇ ನೊಂದಣಿಯ ಅಗತ್ಯವಿಲ್ಲ

ಅಮೆರಿಕದಲ್ಲಿ ಕುದುರೆ ಮಾಂಸ ನಿಷೇಧ:

ಭಾರತದಲ್ಲಿ ಹಸುಗಳನ್ನು ಹೇಗೆ ನೋಡ್ತಾರೋ, ಹಾಗೇ, ಅಮೆರಿಕದಲ್ಲಿ ಕುದುರೆಗಳ ಮೇಲೆ ಜನರಿಗೆ ಪ್ರೀತಿ ಜಾಸ್ತಿ. ಹೀಗಾಗಿ ಅಲ್ಲಿ ಕುದುರೆಗಳ ವಧೆಗೆ ನಿಷೇಧ ಹೇರಲಾಗಿದೆ.

2007 ರಿಂದಲೂ ಕುದುರೆ ಮಾಂಸಕ್ಕೆ ಅಮೆರಿಕದಲ್ಲಿ ನಿರ್ಬಂಧವಿದೆ. ನ್ಯೂಯಾರ್ಕ್, ನ್ಯೂ ಜೆರ್ಸಿ, ಪ್ಲೋರಿಡಾ, ಒಕ್ಲಾಮಾ ಸೇರಿದಂತೆ ಅನೇಕ ರಾಜ್ಯಗಳು ಕುದುರೆಗಳ ಮಾಂಸದ ಮಾರಾಟ ಮತ್ತು ಖರೀದಿಯ ಮೇಲೆ ನಿರ್ಬಂಧ ವಿಧಿಸಿವೆ.. ಶಿಕ್ಷೆ ಪ್ರಮಾಣ ಒಂದು ರಾಜ್ಯಕ್ಕೆ ಒಂದೊಂದು ರೀತಿ ಇದೆ.

ಕುದುರೆಗಳ ರಕ್ಷಣೆಗಾಗಿಯೇ ಅಮೆರಿಕದಲ್ಲಿ ಅನೇಕ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕುದುರೆಗಳನ್ನ ಅಲ್ಲಿನ ಜನರು ನಮ್ಮ ದೇಶದಲ್ಲಿ ಪುಣ್ಯಕೋಟಿಗಳನ್ನ ನೋಡುವ ರೀತಿಯಲ್ಲಿ ನೋಡುತ್ತಾರೆ.

ಪ್ರತಿ ಕುಟುಂಬಸ್ಥರು ಕೂಡ ಕುದುರೆಗಳ ಜೊತೆ ಒಂದಿಲ್ಲೊಂದು ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಹೀಗಾಗಿ, ಕುದುರೆಗಳ ಮಾಂಸ ಸೇವನೆಯಲ್ಲಿ ಅಲ್ಲಿನ ಜನರ ಮೌಲ್ಯ, ನಂಬಿಕೆ, ಪ್ರೀತಿಯ ಮೇಲೆ ಪೆಟ್ಟು ಬೀಳುವಂತದ್ದು. ಹೀಗಾಗಿ ಕುದುರೆ ಮಾಂಸಕ್ಕೆ ಅಮೆರಿಕದಲ್ಲಿ ನಿರ್ಬಂಧ ವಿಧಿಸಲಾಗಿದೆ.

ಇನ್ನು ಓದಿ : ಡೀಸೆಲ್‌ ವಾಹನಗಳಿಗೆ ಬಂತು ಕಂಟಕ.! ಇನ್ಮುಂದೆ ಎಲ್ಲ ಡೀಸೆಲ್‌ ವಾಹನಗಳು ಬಂದ್ ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದಲ್ಲಿ ಫ್ರೆಂಜ್‌ನ ಫ್ರೂಯ್ ಗ್ರಾಸ್ ಬ್ಯಾನ್:

ಫ್ರೆಂಚ್‌ನಲ್ಲಿ ಅತ್ಯಂತ ಸುಪ್ರಸಿದ್ಧ ಮತ್ತು ದುಬಾರಿಯಾದ ಫುಡ್ ಅಂದ್ರೆ ಪ್ರೂಯ್ ಗ್ರಾಸ್. ಈ ಆಹಾರದ ತಯಾರಿಕೆಯಲ್ಲಿ ಬಾತುಕೋಳಿಯ ಲಿವರ್ ಬಳಸಲಾಗುತ್ತೆ. ಹೀಗಾಗಿ ಈ ಫುಡ್‌ಗೆ ಭಾರತವೂ ಸೇರಿದಂತೆ ಅನೇಕ ದೇಶಗಳು ಬ್ಯಾನ್ ಮಾಡಿವೆ.

ಮೀಡಿಯಂ ಬರ್ಗರ್‌ಗೆ ನ್ಯೂಜಿಲೆಂಡ್‌ನಲ್ಲಿ ನಿಷೇಧ:

2017ರಲ್ಲಿ ನ್ಯೂಜಿಲೆಂಡ್‌ನಲ್ಲಿ ಮಧ್ಯಮ ಗಾತ್ರದ ಬರ್ಗರ್‌ಗೆ ನಿಷೇಧ ಹೇರಲಾಯ್ತು. ಇದಕ್ಕೆ ಕಾರಣ ಏನಂದ್ರೆ, ಯಾವುದೇ ರೀತಿಯ ಮಾಂಸವನ್ನ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಬೇಕು.

ಇಲ್ಲದಿದ್ರೆ, ಅದು ದೇಹಕ್ಕೆ ಮಾರಕವಾಗುತ್ತದೆ. ಹೀಗಾಗೆ, ಅರೆಬೆಂದ ಮಾಂಸ ದೇಹಕ್ಕೆ ಆರೋಗ್ಯಕರವಲ್ಲ ಅಂತ ಸರ್ಕಾರ ಈ ಕ್ರಮವನ್ನ ತೆಗೆದುಕೊಳ್ತು.ಆದರೆ ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ರು. ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ಯಮದವರು ಬೇಸರ ವ್ಯಕ್ತಪಡಿಸಿದ್ರು.

ಇನ್ನು ಓದಿ : ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ.! ಸರ್ಕಾರದ ಹೊಸ ಯೋಜನೆ ಕೂಡಲೇ ಇದಕ್ಕೆ ಅರ್ಜಿ ಸಲ್ಲಿಸಿ.

ಹಸುವಿನ ಹಾಲಿಗೂ ನಿರ್ಬಂಧ!!!

ನಮ್ಮ ದೇಶದಲ್ಲಿ ಹಾಲಿಲ್ಲದೇ ಏನೊಂದು ನಡೆಯೋದಿಲ್ಲ. ಆದ್ರೆ, ಹಾಲನ್ನ ಕಾಯಿಸಿ ಕುಡಿಯಬೇಕು. ಹಸುವಿನಿಂದ ನೇರವಾಗಿ ಪಡೆದ ಹಸಿ ಹಾಲು ಸೇವನೆ ಒಳ್ಳೆಯದಲ್ಲ ಅಂತ ಇಲ್ಲಿ ಕೆಲವೊಂದು ದೇಶಗಳು ಹೇಳ್ತಿವೆ.

ಕಚ್ಚಾ ಹಾಲಿಗೆ ನಿಷೇಧವನ್ನೇ ವಿಧಿಸಿವೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ಕೆಲ ರಾಜ್ಯಗಳಲ್ಲಿ ಹಸಿಹಾಲಿಗೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಏನಂದ್ರೆ, ಹಸುವಿನಿಂದ ಪಡೆದ ಹಾಲನ್ನು ನೇರವಾಗಿ ಜನರು ಸೇವಿಸೋದ್ರಿಂದ, ರೋಗಗ್ರಸ್ಥ ಹಸುವಿನಿಂದ ಇರುವ ಅನೇಕ ಕೀಟಾಣುಗಳು ಮನುಷ್ಯರನ್ನ ಸೇರುತ್ತವೆ. ಬ್ರುಸೆಲ್ಲಾಸ್, ಸಾಲ್ಮೊನೆಲೊಸಿಸ್ ಸೇರಿದಂತೆ ಫುಡ್‌ಪಾಯಿಸನ್ ಆಗುತ್ತದೆ. ಹೀಗಾಗಿ ಹಸುವಿನಿಂದ ನೇರವಾಗಿ ಹಸಿಹಾಲು ಸೇವಿಸಬಾರದು ಅಂತ ನಿಷೇಧ ಹೇರಲಾಗಿದೆ.


Leave a Reply

Your email address will not be published. Required fields are marked *