rtgh

ಅಕ್ಟೋಬರ್ 1ರಿಂದ ಜನನ ಪ್ರಮಾಣ ಪತ್ರ ಕಡ್ಡಾಯ! ಈ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ 1 ತಿಂಗಳೊಳಗೆ ಪಡೆಯಿರಿ.


ಆತ್ಮೀಯರೇ ನಿಮಗೊಂದು ಸುದ್ದಿ, ಜನನ ಪ್ರಮಾಣ ಪತ್ರ ಇಲ್ಲದಿದ್ದಾಗ, ಅಥವಾ ಇಲ್ಲದಿದ್ದರೆ ಏನು ಮಾಡಬೇಕು ಎಂದು ವಿವರವಾಗಿ ತಿಳಿಸಲಾಗಿದೆ. 1989 ಕ್ಕಿಂತಲೂ ಹಿಂದಿನ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಕೆಲವು ಕ್ರಮಗಳಿವೆ ಅವೆಲ್ಲವನ್ನು ಇಲ್ಲಿ ತಿಳಿಸಲಾಗಿದೆ. ಹಾಗೆಯೇ ಜನನ ಪ್ರಮಾಣ ಪತ್ರ ಮಾಡಿಸಲು ಬೇಕಾಗುವ ದಾಖಲೆಗಳು, ಜನನ ಪ್ರಮಾಣ ಪತ್ರ ಮಾಡಿಸುವ ವಿಧಾನಗಳು, ಹೇಗೆ ಮಾಡಿಸಬೇಕು, ಇದರ ಎಲ್ಲಾ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

birth certificate is mandatory for indian citizens in kannada
birth certificate is mandatory for indian citizens in kannada

birth certificate is mandatory from October 1

ಜನನ ಪ್ರಮಾಣ ಪತ್ರ

ಹಲವು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಮಾಡುವ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ನವದೆಹಲಿ: ಹಲವು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಮಾಡುವ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ಇತ್ತಿಚಿಗೆ ಸಂಸತ್ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನೋಂದಣಿಯಂತಹ ಹಲವಾರು ಕೆಲಸಗಳು ಮತ್ತು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಹೊಸ ತಿದ್ದುಪಡಿ ಮಾಡಿದ ಕಾನೂನು ಅನುಕೂಲ ಮಾಡುತ್ತದೆ. ಈ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಸಂಸತ್ತು ಕಳೆದ ಮಾನ್ಸೂನ್ ಅಧಿವೇಶನದಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅನ್ನು ಅಂಗೀಕರಿಸಿತ್ತು. ಇದೀಗ ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 11 ರಂದು ಒಪ್ಪಿಗೆ ನೀಡಿದ್ದಾರೆ. “ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 (2023 ರ 20) ರ ವಿಭಾಗ 1 ರ ಉಪ-ವಿಭಾಗ (2) ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಕೇಂದ್ರ ಸರ್ಕಾರವು ಈ ಮೂಲಕ ಅಕ್ಟೋಬರ್ 1, 2023 ರ ದಿನಾಂಕವನ್ನು ನೇಮಿಸುತ್ತದೆ. ಸದರಿ ಕಾಯಿದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕ” ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತುಂಜಯ್ ಕುಮಾರ್ ನಾರಾಯಣ್ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಜನನ ಪ್ರಮಾಣ ಪತ್ರ ಯಾಕೆ ಮಾಡಿಸಬೇಕು :

  • ವ್ಯಕ್ತಿಯ ಜನನ ನೋಂದಣಿ ಕಡ್ಡಾಯವಾಗಿ ಬೇಕಾಗುತ್ತದೆ.
  • ಪಾಸ್ಪೋರ್ಟ್‌ ಮಾಡಿಸಲು ಬೇಕಾಗುತ್ತದೆ.
  • ಆಧಾರ್‌ ಕಾರ್ಡ್‌ ಮಾಡಿಸಲು ಮತ್ತು ಶಾಲೆಯ ಪ್ರವೇಶಕ್ಕೆ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.
  • ಜಮೀನಿನ ವಿವಾದ, ಆಸ್ತಿ ಭಾಗ ಮತ್ತು ವಂಶಾವಳಿ ಪತ್ರಕ್ಕಾಗಿ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.

ಜನನ ಪ್ರಮಾಣ ಪತ್ರ ಮಾಡಿಸಲು ದಾಖಲೆಗಳು : ಶಾಲೆಗೆ ಹೋದವರು

  • TC / ಶಾಲಾ ದೃಢೀಕರಣ ಹಾಗೂ ಅಂಕಪಟ್ಟಿ
  • ಆಧಾರ್‌ ಕಾರ್ಡ್‌ ದಾಖಲೆ
  • ಜನನ ಮರಣ ಶಾಖೆಯಿಂದ ಹಿಂಬರಹ ದೃಡೀಕರಣ ಪತ್ರಕ್ಕಾಗಿ ಅರ್ಜಿ ಹಾಕಬೇಕು.

ಜನನ ಪ್ರಮಾಣ ಪತ್ರ ಮಾಡಿಸಲು ದಾಖಲೆಗಳು : ಶಾಲೆಗೆ ಹೋಗದೇ ಇದ್ದವರು

  • ಆಧಾರ್‌ ಕಾರ್ಡ್‌
  • ಹೇಳಿಕೆ ಪತ್ರ ದಾಖಲೆ
  • ಜನನ ಮರಣ ಶಾಖೆಯಿಂದ ಹಿಂಬರಹ ದೃಡೀಕರಣ (ಜನನ – ಮರಣ ಶಾಖೆಯಿಂದ ಕೊಡಲಾಗುವ ತಿರಸ್ಕಾರ ಪತ್ರ)

ಹಿಂಬರಹ ಪತ್ರ, ಆಧಾರ್‌ ಕಾರ್ಡ್‌ ಮತ್ತು ಸಾಕ್ಷಿಗಳ ಹೇಳಿಕೆ ಪತ್ರ ದಾಖಲೆ ಸಹಾಯದಿಂದ ಕೋರ್ಟ್‌ನಿಂದ ತಡ ನೋಂದಣಿ ಪತ್ರ ತೆಗೆದುಕೊಳ್ಳಬೇಕು. ಇದನ್ನು ಅಂದರೆ ತಡ ನೋಂದಣಿ ಪತ್ರ ತೆಗೆದುಕೊಂಡು ತಾಹಶಿಲ್ದಾರ್‌ ಕಛೇರಿಯಲ್ಲಿರುವ ಜನನ ಮರಣ ಶಾಖೆಯಲ್ಲಿ ಅರ್ಜಿ ಹಾಕಿ ಜನನ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ನಂತರ ನಿಮಗೆ 2 ಅಥವಾ 1 ತಿಂಗಳೊಳಗೆ ಜನನ ಪ್ರಮಾಣ ಪತ್ರ ಪಡೆಯಬಹುದು.

ಗೊತ್ತಿರಬೇಕಾದ ಮಾಹಿತಿ :

  • ಜನನ / ಮರಣದ ನೋಂದಣಿ 1 ತಿಂಗಳು ಒಳಗೆ ಮಾಡಿಸಬೇಕು. ಒಂದು ವರ್ಷದ ಒಳಗೆ ನೋಂದಣಿ ಮಾಡಿದ್ರೆ ದಂಡ ವಿಧಿಸುತ್ತಾರೆ. ಒಂದು ವರ್ಷದ ನಂತರ ಕೋರ್ಟ್‌ ನಿಂದ ತಡ ನೋಂದಣಿ ಆದೇಶ ಪತ್ರ ತರಬೇಕಾಗುತ್ತದೆ.
  • ಜನನ ಮತ್ತು ಮರಣ ಗ್ರಾಮದಲ್ಲಿ ಆದ್ರೆ ಗ್ರಾಮ ಲೆಕ್ಕಾಧಿಕಾರಿ ಕಡೆಯಿಂದ ಪಡೆಯಬಹುದು. ನಗರಗಳಲ್ಲಿ ಆಸ್ಪತ್ರೆ, ನಗರ ಮತ್ತು ಮಹಾನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಸಿ ಈ ಪತ್ರವನ್ನು ಪಡೆಯಬಹುದು.

Leave a Reply

Your email address will not be published. Required fields are marked *