rtgh

ಇನ್ಮುಂದೆ ಇವರಿಗೆ ಸರ್ಕಾರದ ಯಾವುದೇ ಬೆನಿಫಿಟ್ ಸಿಗಲ್ಲ!! ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ


Spread the love

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ಅನ್ನು ವಿತರಣೆ ಮಾಡಲಾಗಿದೆ. ಆದರೆ ಇನ್ಮುಂದೆ ಈ ಲಿಸ್ಟ್‌ ನಲ್ಲಿ ಹೆಸರಿದ್ದರವ ಕಾರ್ಡ್‌ಗಳು ರದ್ದಾಗಲಿದೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

BPL Ration card Kannada

ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಕೂಡ ಹಸಿವಿನಿಂದ ಸಾಯಬಾರದು ಎನ್ನುವ ಕಾರಣಕ್ಕಾಗಿ ಉಚಿತವಾಗಿ ಪಡಿತರ ವಸ್ತುಗಳನ್ನು ನೀಡುವ ಸಲುವಾಗಿ BPL ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಹಾಗೆಯೇ ಇದರ ಜೊತೆಗೆ ಸರ್ಕಾರದ ಕೆಲವುವೊಂದು ಪ್ರಯೋಜನಗಳನ್ನು ಸಹ ಪಡೆದುಕೊಳ್ಳಲು ಹಾಗೂ ಪ್ರಮುಖ ಗುರುತಿನ ಚೀಟಿಯಾಗಿ ಈ ಎಪಿಎಲ್ ಕಾರ್ಡ್ಗಳನ್ನು ಸಹ ವಿತರಣೆ ಮಾಡಲಾಗುತ್ತಿದೆ.

BPL ಕಾರ್ಡ್ ಅನ್ನು ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಬೆನಿಫಿಟ್ ಸಿಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನಗಳನ್ನು BPL ಕಾರ್ಡ್ ಹೊಂದಿರುವವರು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ನಮ್ಮ ರಾಜ್ಯದಲ್ಲಿ ಸುಮಾರು 1.27 ಕೋಟಿ BPl ಕಾರ್ಡ್ ಹೋಲ್ಡರ್ ಗಳು ಇದ್ದಾರೆ. 4.36 ಕೋಟಿ ಕುಟುಂಬಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ದೂರದೃಷ್ಟವಶಾತ್ ಸರ್ಕಾರ ಇಲ್ಲಿಯವರೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು BPL ಕಾರ್ಡ್ಗಳನ್ನು ರದ್ದು ಮಾಡಿದೆ.

ಇದನ್ನೂ ಸಹ ಓದಿ: LPG ಸಿಲಿಂಡರ್ ಭರ್ಜರಿ ಇಳಿಕೆ!! ಮಹಿಳಾ ದಿನಾಚರಣೆಯಂದು ಗೃಹಿಣಿಯರಿಗೆ ಮೋದಿ ಗಿಫ್ಟ್

ಈ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು!

ಸಾರ್ವಜನಿಕರ ಅನುಕೂಲಕ್ಕಾಗಿ BPL ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರೇ ಹೆಚ್ಚು. ನಿಜಕ್ಕೂ ಅನುಕೂಲ ಇರುವವರು ಹಾಗೂ BPL ಕಾರ್ಡ್ ಅಗತ್ಯ ಇಲ್ಲದೆ ಇರುವವರು ಸಹ ಇಂದು ಅಕ್ರಮವಾಗಿ BPL ಕಾರ್ಡ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಕಳೆದ 6 ತಿಂಗಳಿನಿಂದ BPL ಕಾರ್ಡ್ ಹೊಂದಿರುವ ಲಕ್ಷಾಂತರ ಜನರು ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿಲ್ಲ. ನ್ಯಾಯ ಬೆಲೆಯ ಅಂಗಡಿಗಳಿಗೆ ಕಳೆದ 6 ತಿಂಗಳಿನಿಂದ ಭೇಟಿ ಕೊಟ್ಟಿಲ್ಲ. ಆದರೆ ಸರ್ಕಾರದಿಂದ ಸಿಗುವಂತಹ ಇತರ ಯೋಜನೆಯ ಪ್ರಯೋಜನಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಪ್ರತಿಫಲವನ್ನು ಕೂಡ ಈ ಅಕ್ರಮ BPL ಫಲಾನುಭವಿಗಳಿಗೆ ಸಿಗುತ್ತಿದೆ.

ಸರ್ಕಾರ ಇದನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಕಳೆದ ವರ್ಷ ಸುಮಾರು 4 ಲಕ್ಷ ಅಕ್ರಮ BPL ಕಾರ್ಡ್ ಅನ್ನು ರದ್ದು ಮಾಡಿದೆ. ಈ ಕಾರ್ಯವು ಈ ವರ್ಷ ಸಹ ಮುಂದುವರೆದಿದ್ದು ಈಗಾಗಲೇ ಹಲವಾರು ಜನರು ಬಿಪಿಎಲ್ ಪಡಿತರ ಚೀಟಿಗಳನ್ನು ಕಳೆದುಕೊಂಡಿದ್ದಾರೆ.

ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಹೇಗೆ?

  • ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ.
  • ಎಡ ಭಾಗದಲ್ಲಿ 3 ಲೈನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಇ – ಪಡಿತರ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮ್ಮ ತಾಲೂಕು, ಜಿಲ್ಲೆ ಆಯ್ಕೆ ಮಾಡಿ ಭರ್ತಿ ಮಾಡಿದರೆ ರದ್ದಾಗಿರುವ ಪಡಿತರ ಚೀಟಿಯ ಲಿಸ್ಟ್ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಹೆಸರು ಇದ್ರೆ ಇನ್ಮುಂದೆ ನಿಮಗೆ ಗ್ಯಾರಂಟಿ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ.

ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ! ಹೊಸ ರೂಲ್ಸ್‌ ಜಾರಿಗೆ ತಂದ ಸರ್ಕಾರ

ಇನ್ನು ವಿದ್ಯುತ್ ಚಿಂತೆ ಬಿಡಿ: ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಶೇ. 50% ಸಹಾಯಧನ ಘೋಷಣೆ!

Sharath Kumar M

Spread the love

Leave a Reply

Your email address will not be published. Required fields are marked *