ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳೇ ನಿಮಗೆ ಈ ಲೇಖನದಲ್ಲಿ ನಾವು ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ ಈಗಾಗಲೇ ಸೆಕೆಂಡ್ ಪಿಯುಸಿ ರಿಸಲ್ಟ್ ಪಿಯುಸಿ ನಂತರ ಏನು ಮಾಡಬೇಕೆಂದು ಮಕ್ಕಳು ಯೋಚಿಸುತ್ತಿದ್ದಾರೆ ಹಾಗೂ ಸೆಕೆಂಡ್ ಪಿಯುಸಿಯಲ್ಲಿ 50% ಪರ್ಸೆಂಟ್ ತೆಗೆದವರು ಇಂಜಿನಿಯರಿಂಗ್ ಅನ್ನು ತಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ನೀಡಿದ್ದೇವೆ.
ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈಗಾಗಲೇ ಎರಡು ಬಾರಿ ನಡೆಸಿದ್ದು, ಎರಡು ಬಾರಿಯ ಪರೀಕ್ಷೆಯ ಫಲಿತಾಂಶವು ಹೊರಬಿದ್ದಿದೆ. ಈಗ ಮೂರನೇ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಲದೇ ಸಿಬಿಎಸ್‌ಇ, ಐಎಸ್‌ಸಿ 12ನೇ ತರಗತಿ ರಿಸಲ್ಟ್ ಸಹ ಬಂದಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಓದಿದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕ ಸಿಇಟಿ, ಜೆಇಇ ಮೇನ್ ಪರೀಕ್ಷೆ, ಕಾಮೆಡ್‌ಕೆ ಯುಜಿಇಟಿ ಬರೆಯುವ ಮೂಲಕ ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಇದು ವಿದ್ಯಾರ್ಥಿಗಳಿಗೆ ಗೊತ್ತಿರುವ ವಿಷಯ. ಈಗಾಗಲೇ ಜೆಇಇ ಮೇನ್ ರಿಸಲ್ಟ್ ಬಂದಿದೆ. ಈ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದವರು ದೇಶದ ಐಐಟಿಗಳು, ಎನ್‌ಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಹಾಗೆಯೇ ಕಾಮೆಡ್‌ಕೆ ರಿಸಲ್ಟ್ ಸಹ ಬಂದಿದೆ.
ಈಗ ಬಿಡುಗಡೆ ಆಗಬೇಕಾಗಿರುವುದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ – ಯುಜಿಸಿಇಟಿ 2024 ಫಲಿತಾಂಶ ಮಾತ್ರ. ರಾಜ್ಯದ ಸರ್ಕಾರಿ ಅನುದಾನಿತ, ಅನುದಾನರಹಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯಲು ಈ ರಿಸಲ್ಟ್ ಈಗ ಕರ್ನಾಟಕದ ಬಹುಸಂಖ್ಯಾತ ಬಿಇ ಆಕಾಂಕ್ಷಿಗಳಿಗೆ ಬಹುಮುಖ್ಯವಾಗಿದೆ. ಈ ರಿಸಲ್ಟ್ ಅನ್ನು ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಪರೀಕ್ಷೆಯ ಶೇಕಡ.50 ಅಂಕಗಳ್ನು ಯುಜಿಸಿಇಟಿ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸಿಯೇ Rank ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು Rank ಆಧಾರದ ಮೇಲೆ ಪ್ರವೇಶಾತಿ ಕೌನ್ಸಿಲಿಂಗ್‌ಗೆ ಪಾಲ್ಗೊಂಡು ಸೀಟು ಪಡೆಯಬೇಕಿದೆ.
ಈ ನಡುವೆ ಕೆಲವು ವಿದ್ಯಾರ್ಥಿಗಳ ಪ್ರಶ್ನೆ ‘ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಶೇಕಡ.50 ಅಂಕಗಳನ್ನು ಪಡೆದವರು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದೇ’ ಎಂಬಹುದಾಗಿದೆ? ಇದಕ್ಕೆ ಉತ್ತರ ಕೆಳಗಿನಂತೆ ನೀಡಲಾಗಿದೆ.
ನೀವು ದ್ವಿತೀಯ ಪಿಯುಸಿ’ಯಲ್ಲಿ ಎಷ್ಟೇ ಅಂಕಗಳನ್ನು ಪಡೆದಿರಿ ಅಥವಾ ಜಸ್ಟ್ ಪಾಸಾಗಿರಿ. ಪರವಾಗಿಲ್ಲ. ಆದರೆ ನೀವು ಇಂಜಿನಿಯರಿಂಗ್ ಸೀಟು ಪಡೆಯಲು ಕೆಸಿಇಟಿ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದಿದ್ದಲ್ಲಿ ನಿಮಗೆ ಸೀಟು ಸಿಗುವ ಅವಕಾಶಗಳು ಇರುತ್ತವೆ. ನಿಮ್ಮ ದ್ವಿತೀಯ ಪಿಯುಸಿ’ಯ ಒಟ್ಟು ಅಂಕಗಳ ಪೈಕಿ ಶೇಕಡ.50 ಅಂಕಗಳನ್ನು ಕೆಸಿಇಟಿ ಅಂಕಗಳೊಂದಿಗೆ ಸೇರಿಸಿ Rank ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ನೀವು ಇಂಜಿನಿಯರಿಂಗ್ ಸೀಟು ಪಡೆಯಲು ಕೆಸಿಇಟಿ ಕೌನ್ಸಿಲಿಂಗ್‌ಗೆ 3-5 ಸುತ್ತಿನವರೆಗೆ ಭಾಗವಹಿಸುವ ಅವಕಾಶ ಸಾಧ್ಯತೆ ಇರುತ್ತದೆ. ನೀವು ಸರ್ಕಾರಿ ಕೋಟಾದಲ್ಲಿ, ಮೀಸಲಾತಿಯಡಿಯಲ್ಲಿ ಪ್ರವೇಶಕ್ಕೆ ಅರ್ಹರಾಗದಿದ್ದಲ್ಲಿ, ಸೀಟು ಪಡೆಯಲು ಆಗದಿದ್ದಲ್ಲಿ, ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶಕ್ಕೆ ಮುಂದಾಗಬಹುದು.
ಕೆಸಿಇಟಿ ಬರೆಯದವರು ಸಹ ಇಂಜಿನಿಯರಿಂಗ್’ಗೆ ಪ್ರವೇಶ ಪಡೆಯಬಹುದು
ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಶೇಕಡ.50 ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರೂ, ಒಂದು ವೇಳೆ ನೀವು ಕರ್ನಾಟಕ ಸಿಇಟಿ ಬರೆಯದಿದ್ದಲ್ಲಿ ಕಾಮೆಡ್‌ಕೆ ಯುಜಿಇಟಿ ಅಥವಾ ಜೆಇಇ ಮೇನ್ ಪರೀಕ್ಷೆ ಎರಡರಲ್ಲಿ ಯಾವುದನ್ನೇ ಬರೆದಿದ್ದರೂ, ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು. ಕಡಿಮೆ ಅಂಕಗಳನ್ನು ಗಳಿಸಿದ್ದರೂ, ಯುಜಿಸಿಇಟಿ, ಕಾಮೆಡ್‌ಕೆ, ಜೆಇಇ ಯಾವುದಾದರೂ ಒಂದನ್ನು ಬರೆದಿದ್ದರೂ ಸಹ ಮ್ಯಾನೇಜ್ಮೆಂಟ್ ಕೋಟಾದಡಿ ಇಂಜಿನಿಯರಿಂಗ್‌ಗೆ ಸೀಟು ಲಭ್ಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
ವಿಜ್ಞಾನ ಪಿಯು ಅಂಕಗಳು ಕಡಿಮೆ ಇದ್ದಲ್ಲಿ ನಿಮಗೆ ಎರಡು ಆಯ್ಕೆಗಳಿವೆ. ಅವುಗಳೆಂದರೆ..
ಸರಾಸರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಇ’ಗೆ ಪ್ರವೇಶ
ನೀವು ಕಡಿಮೆ ಅಂಕಗಳನ್ನು ಗಳಿಸಿದ್ದರೂ ಬಿಇ ಪ್ರವೇಶ ಸಾಧ್ಯ. ಆದರೆ ಸರಾಸರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿದ್ಧರಿರಬೇಕು. ಇಲ್ಲಿ ಎರಡು ಅಂಶಗಳು ಪ್ರಮುಖವಾಗಿರುತ್ತವೆ. ನೀವು ಉತ್ತಮ ಇಂಜಿನಿಯರಿಂಗ್ ಕಾಲೇಜು ಸೇರಬೇಕು ಎಂಬ ಆಸೆಯಲ್ಲಿ ಸಡಿಲಿಕೆ ಮಾಡಿಕೊಳ್ಳಬೇಕು. ಹಾಗೆಯೇ ಅತ್ಯಧಿಕ ಡೊನೇಷನ್, ಪ್ರವೇಶ ಶುಲ್ಕ ನೀಡಲು ಸಿದ್ಧರಿದ್ದರೆ ಡೀಸೆಂಟ್ ಕಾಲೇಜಿಗೆ ಪ್ರವೇಶ ಪಡೆಯಬಹುದು.
ಯಾವುದೇ ಬಿಇ ಕಾಲೇಜಿಗೆ ಸೇರಲು ಆಗದಿದ್ದಲ್ಲಿ ಮುಂದೇನು?
ಒಂದು ವೇಳೆ ಕಡಿಮೆ ಅಂಕದಿಂದ, ಯಾವುದೇ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಾಗದಿದ್ದವರು ದ್ವಿತೀಯ ಪಿಯುಸಿ ವಿಜ್ಞಾನ ಓದಿದ ಆಧಾರದಲ್ಲಿ ಡಿಪ್ಲೊಮ ಎರಡನೇ ವರ್ಷದ / ಮೂರನೇ ಸೆಮಿಸ್ಟರ್‌ಗೆ ಸುಲಭವಾಗಿ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆಯಬಹುದು. ನಂತರ ಡಿಪ್ಲೊಮ ಮುಗಿಸಿ, ಡಿಸಿಇಟಿ ಪರೀಕ್ಷೆ ಬರೆದು ಬಿಇ ಎರಡನೇ ವರ್ಷದ / ಮೂರನೇ ಸೆಮಿಸ್ಟರ್‌ಗೆ ಅಥವಾ ಬಿ.ಟೆಕ್‌ಗೆ ಅಡ್ಮಿಷನ್ ಪಡೆಯಬಹುದು.
ಉದ್ಯೋಗಕ್ಕೆ ಅತಿಮುಖ್ಯ ಅಂಕಗಳು
ಹಲವು ಕಾಲೇಜುಗಳಲ್ಲಿ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆಯಲು ಕನಿಷ್ಠ ಶೇಕಡ.50 ಅಂಕಗಳು ಬೇಕು. ಒಂದು ವೇಳೆ ಸಿಇಟಿ ಅಂಕಗಳು ನೆರವಿಗೆ ಬರದೆ ಬಿಇ ಪ್ರವೇಶ ಸಾಧ್ಯವಾಗದವರು ಸುಲಭವಾದ ಕೋರ್ಸ್‌ಗಳಾದ ಬಿಎಸ್ಸಿ ಸ್ನಾತಕ, ಬಿ.ಕಾಂ ಸ್ನಾತಕ ಕೋರ್ಸ್‌ಗಳನ್ನು ಓದಬಹುದು. ನಂತರ ಸರ್ಕಾರಿ ಹುದ್ದೆಗೆ ಪ್ಲಾನ್ ಮಾಡಿ ಓದಬಹುದು.
ಇಂದು ಕಂಪನಿಗಳು ಸಹ ಕನಿಷ್ಠ ಶೇಕಡ.50-60 ಅಂಕಗಳನ್ನು ಡೀಸೆಂಟ್ ಜಾಬ್‌ಗೆ ಕೇಳುತ್ತವೆ.
ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ತೆಗೆದುಕೊಳ್ಳಿ
ಒಂದು ವೇಳೆ ನೀವು ಕಡಿಮೆ ಅಂಕಗಳನ್ನು ದ್ವಿತೀಯ ಪಿಯುಸಿ’ಯಲ್ಲಿ ಅದರಲ್ಲೂ ಕೋರ್ ಸಬ್ಜೆಕ್ಟ್‌ನಲ್ಲಿ ಶೇಕಡ.50 ಕ್ಕಿಂತ ಕಡಿಮೆ ಪಡೆದಿದ್ದಲ್ಲಿ ಫಲಿತಾಂಶ ಸುಧಾರಣೆಗಾಗಿಯೇ ಮತ್ತೆ ಪರೀಕ್ಷೆ ತೆಗೆದುಕೊಳ್ಳಿ.
ಕರ್ನಾಟಕ ಬೋರ್ಡ್ ವಿದ್ಯಾರ್ಥಿಗಳು ಈಗ ದ್ವಿತೀಯ ಪಿಯುಸಿ ಪರೀಕ್ಷೆ-3 ಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಎನ್‌ಡಿಎ, ಎನ್‌ಎ ಪರೀಕ್ಷೆಗೆ ಅರ್ಜಿ ಹಾಕಿ
ಕಡೆ ಪಕ್ಷ ಕನಿಷ್ಠ ಶೇಕಡ.50 ಅಂಕಗಳನ್ನು ವಿಜ್ಞಾನ ಪಿಯು ವಿದ್ಯಾರ್ಥಿಗಳು ಪಡೆದಿದ್ದಲ್ಲಿ ಯುಪಿಎಸ್‌ಸಿ ನಡೆಸುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಹಾಗೂ, ನೇವಿ ಅಕಾಡೆಮಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ. ಈ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದರೆ ನೀವು ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಬಹುದು.