rtgh

Darshan and Pavitra: ದರ್ಶನ್ ಹಾಗು ಪವಿತ್ರ ಗೌಡ ವಿಡಿಯೋ ವೈರಲ್, ಪವಿತ್ರ ಗೌಡ ವಿರುದ್ಧ ದರ್ಶನ್ ಪತ್ನಿ ಗರಂ.


Darshan and Pavitra Gowda’s video goes viral

Darshan and Pavitra: ಕನ್ನಡದ ನಟಿ ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅವರು ಈಗ ಒಂದು ದಶಕದಿಂದ ಸಂಬಂಧದಲ್ಲಿದ್ದಾರೆ ಎಂದು ಸೂಚಿಸುತ್ತದೆ.

Darshan and Pavitra Gowda's video goes viral
Darshan and Pavitra Gowda’s video goes viral

ಇದರಿಂದಾಗಿ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಸ್ಯಾಂಡಲ್‌ವುಡ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಆದಾಗ್ಯೂ, ಅವರ ಪೋಸ್ಟ್‌ಗೆ ಗರಿಗಳನ್ನು ಉದುರಿಸುವುದು ಇದು ಮೊದಲ ಬಾರಿಗೆ ಅಲ್ಲ. 2017 ರಲ್ಲಿ, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ನಟಿಯ ಪ್ರೊಫೈಲ್ ಫೋಟೋದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ರೀತಿಯ ವಿವಾದವನ್ನು ಹುಟ್ಟುಹಾಕಿತ್ತು. ದರ್ಶನ್ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪವಿತ್ರಾ ಅದನ್ನು ತೆಗೆದು ಹಾಕಿದ್ದರು.

ಇನ್ನು ಓದಿ: EPFO ವೆಬ್‌ಸೈಟ್‌ಗೆ ಭೇಟಿ ನೀಡದೆಯೇ ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಿ. UMANG ಅಪ್ಲಿಕೇಶನ್ ಹಂತ-ಹಂತದ ಮಾರ್ಗದರ್ಶಿ.

ನವೆಂಬರ್ 2024 ರಲ್ಲಿ, ಅವರು ತಮ್ಮ ಮಗಳು ಖುಷಿಯ ಹುಟ್ಟುಹಬ್ಬದ ಆಚರಣೆಯ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ದರ್ಶನ್ ಅವರೊಂದಿಗೆ ಕೇಕ್ ಕತ್ತರಿಸುವುದು ಮತ್ತು ಅವರೊಂದಿಗೆ ನೃತ್ಯ ಮಾಡುವುದು ಕಂಡುಬಂದಿದೆ. ಪವಿತ್ರಾ ಗೌಡ ಅವರು ‘ಚತ್ರಿಗಳು ಸರ್ ಚತ್ರಿಗಳು’ ಮತ್ತು ‘ಬಥಾಸ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ Darshan ಇದೀಗ ಸಿನಿಮಾ ವಿಚಾರದ ಹೊರತಾಗಿ ಮತ್ತೆ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೆ. ಹೌದು, ಕೆಲವು ವರ್ಷಗಳ ಹಿಂದೆ ದರ್ಶನ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ನಡುವೆ ಜಗಳ ಉಂಟಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಎಲ್ಲ ಜಗಳಗಳು ಸರಿಪಡಿಸಿಕೊಂಡು ದಂಪತಿಗಳು ಆನಂದದಿಂದ ಇದ್ದಾರೆ ಎನ್ನಬಹುದು.

ಸಾಮಾಜಿಕ ಜಾಲತಾಣದಲ್ಲಿ ಆಗಿದೆ ಪವಿತ್ರ ಗೌಡ ಪೋಸ್ಟ್

ಇನ್ನು ದರ್ಶನ್ ಅವರ ಕಾಟೇರ ಚಿತ್ರ ಡಿಸೇಂಬರ್ 29 ರಂದು ಬಿಡುಗಡೆಗೊಂಡಿದ್ದು ಈಗಲೂ ಕೂಡ ಹೌಸ್ ಫುಲ್ ಪ್ರದರ್ಶನಗೊಳ್ಳುತ್ತಿದೆ. ದರ್ಶನ್ ಅವರು ಸದ್ಯ ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ ಎನ್ನಬಹುದು. ಇದರ ನಡುವೆಯೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಎರಡನೇ ಮದುವೆ ಆಗಿದ್ದಾರೆ..? ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಳ್ಳುತ್ತಿದೆ.

ಈ ಸುದ್ದಿ ವೈರಲ್ ಆಗಲು ಕಾರಣ ಪವಿತ್ರ ಗೌಡ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನು ಎಡಿಟ್ ಮಾಡಿ ವಿಡಿಯೋವನ್ನು ಹಂಚಿಕೊಂಡು, ಅದಕ್ಕೆ ನಮ್ಮ ಸಂಬಂಧಕ್ಕೆ 10 ವರ್ಷವಾಯಿತು ಎನ್ನುವ ಕ್ಯಾಪ್ಷನ್ ಅನ್ನು ನೀಡಿದ್ದಾರೆ. ಇದನ್ನು ನೋಡಿದವರು ದರ್ಶನ್ ಎರಡು ಮದುವೆಯಾಗಿದ್ದಾರಾ ಎಂದು ಅಚ್ಚರಿ ಪಡುವಂತಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದರ್ಶನ್ ಹಾಗು ಪವಿತ್ರ ಗೌಡ ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗು ಪವಿತ್ರ ಗೌಡ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಅವರ ಪತ್ನಿ ಪವಿತ್ರ ಗೌಡ ಅವರ ವಿರುದ್ದ ಕಿಡಿಕಾರಿದ್ದಾರೆ. ಪವಿತ್ರ ಗೌಡ ವಿಡಿಯೋ ಹಂಚಿಕೊಳ್ಳುವ ಮೊದಲು ವಿಜಯಲಕ್ಷ್ಮಿ ಅವರು ದರ್ಶನ್ ಹಾಗು ತಮ್ಮ ಮಗ ವಿನೀಶ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದು, ‘This is us♥️ with our one and only #familyovereverything ‘ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಪವಿತ್ರ ಗೌಡ ವಿಡಿಯೋವನ್ನು ಹಂಚಿಕೊಂಡಿದ್ದರು.

ಪವಿತ್ರ ಗೌಡ ವಿರುದ್ಧ ದರ್ಶನ್ ಪತ್ನಿ ಗರಂ

ಸದ್ಯ ವಿಜಯಲಕ್ಷ್ಮಿ ಅವರು ಪವಿತ್ರ ಗೌಡ ಹಾಗೂ ಅವರ ಗಂಡ ಸಂಜಯ್ ಹಾಗೂ ಮಗಳು ಖುಷಿ ಜೊತೆಗಿನ ಫೋಟೋ ಹಂಚಿಕೊಂಡು ಪವಿತ್ರ ಗೌಡ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. “ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಫೋಟೋ ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ ಮತ್ತು ಆದರ್ಶ ಎಂತಹದ್ದು ಎಂದು ತೋರಿಸುತ್ತದೆ.

ಖುಷಿ ಗೌಡ, ಪವಿತ್ರ ಹಾಗೂ ಸಂಜಯ್ ಸಿಂಗ್ ಅವರ ಮಗಳು ಎನ್ನುವುದನ್ನು ಈ ಫೋಟೋಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ನಾವು ಸಾಮಾನ್ಯವಾಗಿ ವೈಯಕ್ತಿಕ ವಿಷಯದ ಕುರಿತು ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನಾನಾ ಕುಟುಂಬದ ಹಿತದೃಷ್ಟಿಯಿಂದಾಗಿ ದ್ವನಿ ಎತ್ತುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ . ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ವಿಜಯಲಕ್ಷ್ಮಿ ದರ್ಶನ್ ಪವಿತ್ರ ಗೌಡ ಅವರಿಗೆ ಎಚ್ಚರಿಕೆ ನೀಡಿದ್ದಾರೆ.


Leave a Reply

Your email address will not be published. Required fields are marked *