rtgh

ಹತ್ತೇ ದಿನದಲ್ಲಿ ತೂಕ ಕಳೆದುಕೊಂಡ ಡಿ ಬಾಸ್! ಜೈಲಿನಲ್ಲಿ ಕಷ್ಟ ತಾಳಲಾರದೆ ಕೋರ್ಟಿಗೆ ಮನವಿ, ಬೇಸರದಲ್ಲಿ ಫ್ಯಾನ್ಸ್


Spread the love

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ತಾವು ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುತ್ತಾ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ ಎನ್ನಬಹುದು. ಇನ್ನು ಎ2 ಆರೋಪಿಯಾಗಿರುವ ನಟ ದರ್ಶನ್ ಗೆ ಜೈಲು ವಾಸ ಹೆಚ್ಚು ಕಷ್ಟವಾಗುತ್ತಿದೆ ಎನ್ನಬಹೌದು.

darshan arrest latest update
darshan arrest latest update

ಸೆಲೆಬ್ರೆಟಿ ಜೀವನವನ್ನು ನಡೆಸುತ್ತಿದ್ದ ದರ್ಶನ್ ಇದೀಗ ದಿಢೀರ್ ಜೈಲು ಸೇರಿರುದರಿಂದ ಅಲ್ಲಿ ಇರಲು ಸಾಕಷ್ಟು ಕಷ್ಟಪಡುತ್ತಿದ್ದಾರೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಇದೀಗ ಕೆಲ ವಿಶೇಷ ಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹತ್ತೇ ದಿನದಲ್ಲಿ ತೂಕ ಕಳೆದುಕೊಂಡ ಡಿ ಬಾಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಹತ್ತೇ ದಿನದಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಅವರ ಹಠಾತ್ ತೂಕ ನಷ್ಟವು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಜೈಲಿನಲ್ಲಿ ಕೆಲವು ವಿಶೇಷ ಸೌಲಭ್ಯ ಕಲ್ಪಿಸುವಂತೆ ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ವಿಶೇಷ ಸೌಲಭ್ಯಕ್ಕಾಗಿ ಹೈಕೋರ್ಟ್ ಮೊರೆ ಹೋದ ದರ್ಶನ್

ದರ್ಶನ್ ಅವರನ್ನು ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತಿದೆ. ಜೈಲಿನ ಊಟ ಬಡಿಸಲಾಗುತ್ತಿದೆ. ಆದರೆ ಜೈಲಿನ ಆಹಾರ ಅಜೀರ್ಣವಾಗುತ್ತಿದ್ದು, ಭೇದಿ ಸಮಸ್ಯೆಯಾಗಿದೆ. ಹಾಗಾಗಿ ತೂಕ ಕಳೆದುಕೊಳ್ಳುತ್ತಿದ್ದೇನೆ. ಹೀಗಾಗಿ ಮನೆ ಊಟ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅಲ್ಲದೇ ಜೈಲಿನಲ್ಲಿ ತನಗೆ ನಿದ್ದೆ ಬರುತ್ತಿಲ್ಲ ಹಾಗಾಗಿ ಸಮಯ ಕಳೆಯಲು ಹಾಸಿಗೆಯ ವ್ಯವಸ್ಥೆ ಮಾಡಿ ಓದಲು ಪುಸ್ತಕ ಕೊಡಿ ಎಂದು ದರ್ಶನ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಈ ಎಲ್ಲ ವ್ಯವಸ್ಥೆಗಳನ್ನೂ ನೀಡಲು ಅನುಮತಿ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Sharath Kumar M

Spread the love

Leave a Reply

Your email address will not be published. Required fields are marked *