rtgh

ರಾಷ್ಟ್ರೀಯ ಇಂಜಿನಿಯರ್ ದಿನ. ಇಂಜಿನಿಯರ್ಸ್ ದಿನದಂದು ಹೀಗೆ ಭಾಷಣ ಮಾಡಿ


engineers day speech in kannada
engineers day speech in kannada

100 words about engineering

ನನ್ನ ನೆಚ್ಚಿನ ಸಹಪಾಠಿಗಳು, ಗುರುವೃಂದದವರು ಎಲ್ಲರಿಗೂ ನಮಸ್ಕಾರಗಳು. ಸ್ನೇಹಿತರೇ ನಾವಿಂದು ‘ಅಭಿಯಂತರರ ದಿನ’ ಆಚರಣೆ ಸಲುವಾಗಿ ಒಟ್ಟಾಗಿ ಸೇರಿದ್ದೇವೆ. ಈ ದಿನದಂದು ನಾವು ನೆನೆದುಕೊಳ್ಳಬೇಕಾದ ಪ್ರಮುಖ ವಿಷಯಗಳು, ವ್ಯಕ್ತಿಯೊಬ್ಬರು ಇದ್ದಾರೆ. ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ. ಇಂಜಿನಿಯರ್ಸ್‌ ದಿನ’ವಾದ ಇಂದು ನಿಮ್ಮ ಮುಂದೆ ನಾನು ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಇಂಚ್ಛಿಸುತ್ತೇನೆ.

ಸ್ನೇಹಿತರೇ..,
ಪ್ರಪಂಚದಲ್ಲಿ ಹಲವಾರು ದೇಶಗಳು ಬೇರೆ ಬೇರೆ ದಿನಗಳಂದು ‘ಇಂಜಿನಿಯರ್‌ಗಳ ದಿನ’ ವನ್ನು ಆಚರಿಸುತ್ತವೆ. ಹಾಗೆಯೇ ನಮ್ಮ ಭಾರತದಲ್ಲಿ ಸೆಪ್ಟೆಂಬರ್ 15 ರಂದು ‘ಅಭಿಯಂತರ ದಿನ’ ಆಚರಣೆ ಮಾಡಲಾಗುತ್ತದೆ. ಈ ವರ್ಷ 53 ನೇ ‘ಇಂಜಿನಿಯರ್ಸ್‌ ಡೇ’ ಅನ್ನು ಭಾರತದಲ್ಲಿ ಆಚರಣೆ ಮಾಡಲಾಗುತ್ತಿದೆ.

ಸ್ನೇಹಿತರೇ ಭಾರತದಲ್ಲಿ ‘ಇಂಜಿನಿಯರ್‌ಗಳ ದಿನ’ವನ್ನು ದೇಶದ ಹೆಮ್ಮೆಯ ಮತ್ತು ಅತ್ಯುತ್ತಮ ಇಂಜಿನಿಯರ್‌ ಎನಿಸಿಕೊಂಡ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಹುಟ್ಟುಹಬ್ಬದ ಸ್ಮರಣಾರ್ಥ ಸೆಪ್ಟೆಂಬರ್ 15 ರಂದು ಪ್ರತಿವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಜತೆಗೆ ಇವರ ಕೊಡುಗೆ, ಇವರು ಭಾರತೀಯ ಪ್ರಜೆಗಳಿಗೆ ನೀಡಿದ ಅತ್ಯುತ್ತಮ ಸಂದೇಶಗಳನ್ನು ನೆನೆಸಕೊಳ್ಳಲಾಗುತ್ತದೆ. ಹಾಗೆಯೇ ಇವರಂತೆಯೇ ಇಂಜಿನಿಯರ್‌ಗಳು ಭಾರತಕ್ಕೆ ಸೇವೆ ನೀಡಬೇಕು ಎಂಬುದು ನಮ್ಮೆಲ್ಲ ಅಭಿಲಾಷೆಗಳು ಹೌದು.

ಸರ್.ಎಂ.ವಿ ರವರ ಹುಟ್ಟುಹಬ್ಬದ ಸ್ಮರಣಾರ್ಥ ಆಚರಿಸುವ ‘ಅಭಿಯಂತರರ ದಿನ’ದಂದು ಅವರ ಬಗ್ಗೆ ನಾವು ಕೆಲವು ಅಂಶಗಳನ್ನು ಮೆಲುಕು ಹಾಕಲೇಬೇಕು.

ವಿಶ್ವೇಶ್ವರಯ್ಯ ರವರು ಸರ್ ಎಂ ವಿ ಎಂದೇ ಜನಪ್ರಿಯರಾದವರು. ವಿಶ್ವೇಶ್ವರಯ್ಯ ರವರು ಜನಿಸಿದ್ದು ಸೆಪ್ಟೆಂಬರ್ 15, 1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಅವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಅವರ ಪೂರ್ವಜ್ಜರು ಈಗಿನ ಆಂಧ್ರ ಪ್ರದೇಶದ ಮೋಕ್ಷಗುಂಡಂ ನಲ್ಲಿ ವಾಸವಾಗಿದ್ದರು. ಆದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡ ನೊಡನೆ ಸೇರಿದೆ.

ಅವರ ಜನ್ಮ ದಿನ ಸೆಪ್ಟೆಂಬರ್ 15ನೇ ತಾರೀಖು ಭಾರತ ದೇಶದಲ್ಲಿ ಇಂಜಿನಿಯರ್ ದಿನವಾಗಿ ಆಚರಣೆ ಮಾಡಲಾಗುತ್ತದೆ. ಸರ್‌ ಎಂ ವಿ ರವರು 1881 ರಲ್ಲಿ ಬಿಎ ಪದವಿ ನಂತರ ಪುಣೆ ವಿಜ್ಞಾನ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಡಿಗ್ರಿ ಪಡೆದರು.

1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ, ನಂತರ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆ ಇಂದ ಕಾರ್ಯವನ್ನು ನಿರ್ವಹಿಸುತ್ತಾ ಬಂದರು.

ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಧಾರವಾಡ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಶ್ರಮಿಸಿದವರು ಇವರೇ. ಇಂಜಿನಿಯರ್ ಆಗಿ ಇವರು ಸಲ್ಲಿಸಿದ ಸೇವೆಗೆ ಅವರಿಗೆ 1955 ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ಗೌರವವಾದ ‘ ಭಾರತ ರತ್ನ’ ಪ್ರಶಸ್ತ್ರಿ ನೀಡಲಾಯಿತು. ಈ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಸರ್‌ ಎಂ ವಿ ರವರೇ.

ವಿಶ್ವೇಶ್ವರಯ್ಯ ರವರು ಏಪ್ರಿಲ್‌ 14, 1962, ರವರೆಗೆ ಅಂದರೆ 101 ವರ್ಷ ಬದುಕಿದ್ದರು. ಸರ್‌.ಎಂ.ವಿ ತಮ್ಮ ತಂದೆಯ ಶ್ರಾದ್ಧದ ದಿನವೇ ಇಹಲೋಕ ತ್ಯಜಿಸಿದರು.

ಸ್ನೇಹಿತರೇ ಪ್ರವಾಸಿ ತಾಣ, ಮೈಸೂರಿನಿಂದ ಬೆಂಗಳೂರಿನವರೆಗೆ ಹಲವು ನಗರ, ಪಟ್ಟಣ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಪ್ರಮುಖ ಅಣೆಕಟ್ಟಾದ ಕಾವೇರಿ ನದಿ ನೀರಿಗೆ ಅಡ್ಡಲಾಗಿ ಕಟ್ಟಲಾದ ಕನ್ನಂಬಾಡಿ ಅಣೆಕಟ್ಟಿನ ವಿನ್ಯಾಸಕಾರರು ಸರ್‌.ಎಂ.ವಿ ರವರು. ಇವರು ನಡೆದು ಬಂದ ಹಾದಿ ನಮಗೆ ಆದರ್ಶವಾಗಿರವೇಕು. ಅವರು ಹೇಳಿಕೊಟ್ಟ ನಾಣ್ಣುಡಿಗಳು ನಮಗೆ ಧ್ಯೇಯವಾಕ್ಯಗಳೇ.


Leave a Reply

Your email address will not be published. Required fields are marked *