rtgh

ಕೇವಲ ₹600 ಕ್ಕೆ ಗ್ಯಾಸ್‌ ನೀಡುವ ಯೋಜನೆ!! BPL ಕುಟುಂಬಗಳಿಗೆ ಭರ್ಜರಿ ಆಫರ್

Gas Rate Updates

Spread the love

ಹಲೋ ಸ್ನೇಹಿತರೆ, ಹಲವಾರು ಕುಟುಂಬಗಳು ಪ್ರಸ್ತುತ ಯಾವುದೇ ತೊಂದರೆ ಇಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ತಮ್ಮ ಮನೆಯನ್ನು ನಡೆಸುತ್ತಿದ್ದಾರೆ. PM ಉಜ್ವಲ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ, ದೇಶದಲ್ಲಿನ BPL ಕುಟುಂಬಗಳಿಗೆ LPG ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಒಂದು ಯೋಜನೆಯಿಂದ ಅನೇಕ ಮಹಿಳೆಯರಿಗೆ ಉಜ್ವಲ ಭವಿಷ್ಯ ಸಿಕ್ಕಂತಾಗಿದೆ. ನೀವು ಈ ಯೋಜನೆಯ ಲಾಭ ಪಡೆಯಲು ಈ ಲೇಖನವನ್ನು ಕೊನೆವರೆಗೂ ಓದಿ.

Gas Rate Updates

ಪ್ರಧಾನ ಮಂತ್ರಿ ಉಜ್ವಲ ಯೋಜನೆ :

ಇಂದಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ನೀಡಲಾಗುತ್ತಿದೆ. ಇಂದು ಬಡ ಕುಟುಂಬಗಳಿಗೆ ಮತ್ತು ಅದೆಷ್ಟೋ ಮಹಿಳೆಯರಿಗೆ ಒಂದು ಉತ್ತಮ ಯೋಜನೆಯಾಗಿ ತುಂಬಾ ಪ್ರಯೋಜನಕಾರಿಯಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್:

ಅದೆಷ್ಟೋ ಬಡ ಕುಟುಂಬಗಳು ಗ್ಯಾಸ್ ಕೊಂಡು ಕೊಳ್ಳಲು ಬಯಸಿದರೂ ಕೂಡ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಗ್ಯಾಸ್ ಸಿಲಿಂಡರ್ ಆದ ಬೆಲೆ ಏರಿಕೆಯ ಪರಿಣಾಮ. ಅದಕ್ಕಾಗಿ ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಫ್ರಿ ಗ್ಯಾಸ್ ಕನೆಕ್ಷನ್ ನೀಡುವುದು ಮಾತ್ರವಲ್ಲದೆ ವರ್ಷದ 12 ತಿಂಗಳು 12 ಸಿಲಿಂಡ‌ರ್ ಪಡೆದುಕೊಳ್ಳಲು ಸಬ್ಸಿಡಿಯನ್ನು ಸಹ ಘೋಷಿಸಲಾಗಿದೆ.

ಕೇವಲ 600 ಕ್ಕೆ ಸಿಗುತ್ತದೆ ಗ್ಯಾಸ್ ಸಿಲಿಂಡರ್:

ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 2.0 ವರ್ಷನ್ ಶುರುವಾಗಿದೆ. ಅನೇಕ ಕುಟುಂಬಗಳಿಗೆ ಈಗಾಗಲೇ ಉಚಿತ ಗ್ಯಾಸ್ ನ ಲಾಭ ದೊರೆತಿದೆ. ಪ್ರಧಾನಮಂತ್ರಿಯ ಉಜ್ವಲ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವುದು ಮಾತ್ರವಲ್ಲದೆ 300 ರೂ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಹಾಗಾಗಿ 14.2 ಕೆಜಿ ಸಿಲಿಂಡರ್ ಇಂದು ದೆಹಲಿಯಲ್ಲಿ 600 ರೂಗಳಿಗೆ ಲಭ್ಯವಿದೆ. ಸಿಲಿಂಡರ್ ಖರೀದಿ ಮಾಡುವಾಗ ಗ್ರಾಹಕರು 903 ರೂಪಾಯಿಗಳನ್ನು ಪಾವತಿಸಬೇಕು ನಂತರ 300 ರೂಪಾಯಿಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅರ್ಹರಲ್ಲದ ಫಲಾನುಭವಿಗಳಿಗೆ ದೊರಕುವ ಗ್ಯಾಸ್ ಸಿಲಿಂಡರ್ :

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಯಾರು ಅರ್ಹರಲ್ಲವೋ ಅಂತಹ ಗ್ರಾಹಕರಿಗೆ ₹903 ಕೊಟ್ಟು ಗ್ಯಾಸ್ ಸಿಲಿಂಡ‌ರ್ ಖರೀದಿ ಮಾಡಬೇಕಾಗುತ್ತದೆ.

ಇದನ್ನು ಓದಿ: ಬಡತನ ತೊಡೆದುಹಾಕಲು ಹೊಸ ಯೋಜನೆ! ಸರ್ಕಾರದಿಂದ ಸಂಪೂರ್ಣ ಸೌಕರ್ಯ

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ವಿವರ :

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಆಗ ಮಾತ್ರ ಅರ್ಜಿದಾರರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕೆಳಗಿನವು ಎಲ್ಲಾ ಅಗತ್ಯ ದಾಖಲೆಗಳ ಪಟ್ಟಿಯಾಗಿದೆ.

  • ಅರ್ಜಿದಾರರ ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ವಿಳಾಸ ಪುರಾವೆ
  • ಬಿಪಿಎಲ್ ಪಡಿತರ ಚೀಟಿ
  • ಮೊಬೈಲ್ ನಂಬರ್
  • ಪಾಸ್ಪೋರ್ಟ್ ಗಾತ್ರದ ಫೋಟೋ

ಉಚಿತ ಗ್ಯಾಸ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:

ಹಂತ 1 : ಮೊದಲು https://www.pmuy.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಹಂತ 2 : ನಂತರ ಹೊಸ ಪುಟದಲ್ಲಿ ಅನ್ವಯಿಸು ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3 : ಗ್ಯಾಸ್ ಖರೀದಿ ಮಾಡಲು ಬಯಸಿದರೆ, ಗ್ಯಾಸ್‌ ಸಿಲಿಂಡ‌ರ್ ಕಂಪನಿಯನ್ನು ಆಯ್ಕೆ ಮಾಡಬೇಕು.
ಹಂತ 4 : ಅಲ್ಲಿ ಮೂರು ಗ್ಯಾಸ್ ಕಂಪನಿಗಳ ( Bharath, HP, Indian ) ಹೆಸರನ್ನು ನೀಡಲಾಗಿದೆ.
ಹಂತ 5 : ಅಲ್ಲಿ ನಿಮಗೆ ಬೇಕಾದ ಗ್ಯಾಸ್ ಕಂಪನಿ ಮೇಲೆ ಕ್ಲಿಕ್ ಮಾಡಬೇಕು.
ಹಂತ 6 : ಯಾವುದಾದರೂ ಒಂದು ಏಜೆನ್ಸಿ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಆ ಏಜೆನ್ಸಿ ತೆಗೆದುಕೊಳ್ಳುತ್ತದೆ.
ಹಂತ 7 : ನಂತರ ಅಲ್ಲಿ ನಿಮ್ಮ ಅಗತ್ಯ ಮಾಹಿತಿಗಳನ್ನು ನೀಡುವುದರ ಮೂಲಕ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿ ಆಗುತ್ತದೆ.

ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದಲ್ಲಿ, ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಸೇವಾ ಸಿಂಧೂ ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿ ಗೆ ಹೋಗಿ, ಉಚಿತ ಗ್ಯಾಸ್ ಗಾಗಿ ಬುಕಿಂಗ್ ಮಾಡಬಹುದು.

ಇತರೆ ವಿಷಯಗಳು:

ವಾಹನ ಸವಾರರೇ ಹುಷಾರ್! ಈ ರೀತಿಯ ‘HSRP’ ನಂಬರ್ ಪ್ಲೇಟ್ ಹಾಕಿಸಿದ್ರೆ ಕ್ರಿಮಿನಲ್ ಕೇಸ್..!

CIBIL score: ಈ ಚಿಕ್ಕ ಕೆಲಸ ಮಾಡಿದ್ರೆ ಹೆಚ್ಚಾಗಲಿದೆ ಕ್ರೆಡಿಟ್ ಸ್ಕೋರ್! ಸುಲಭವಾಗಿ ಸಿಗಲಿದೆ ಬ್ಯಾಂಕ್ ಲೋನ್.

Sharath Kumar M

Spread the love

Leave a Reply

Your email address will not be published. Required fields are marked *