ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಣಕಾಸಿನ ನೆರವು ಪಡೆಯಲು ಗುರುತಿನ ಚೀಟಿಯನ್ನು ಹಾಜರುಪಡಿಸುವ ಅಗತ್ಯವಿಲ್ಲ ಎಂದು ಸರ್ಕಾರ ಇತ್ತೀಚಿನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ನಿರ್ಧಾರವು ಯೋಜನೆಯ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅನೇಕ ನಾಗರಿಕರಿಗೆ ಪರಿಹಾರವಾಗಿದೆ.

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಅರ್ಥಿಕ ನೆರವನ್ನು ಪಡೆಯಲು ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರು / ಲಿಂಗತ್ವ ಅಲ್ಪ ಸಂಖ್ಯಾತ ವ್ಯಕ್ತಿಗಳು ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ನೂತನ ಕ್ರಮ ಜಾರಿಗೆ ಅನುಮೋದನೆ ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕವಾಗಿ ಎಲ್ಲಾ ಮಹಿಳೆಯರಿಗೆ ರೂ 2,000 ನೀಡುವಂತೆ ಅಲ್ಪ ಸಂಖ್ಯಾತ ಸಮುದಾಯದವರು / ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಈ ಹಿಂದೆ ಸರ್ಕಾರ ಮಾರ್ಗಸೂಚಿಯಲ್ಲಿ ಮಾರ್ಪಡು ಮಾಡಲಾಗಿದ್ದು.
ಇದರ ಅನ್ವಯ ಈಗ ಅಲ್ಪ ಸಂಖ್ಯಾತ ಸಮುದಾಯದವರು / ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತಂತ್ರಾಶದಲ್ಲಿ ಮಾರ್ಪಡು ಮಾಡಲು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಗುರುತಿನ ಚೀಟಿ ಪರಿಗಣಿಸಲು ಅನುಮೋದನೆ ನೀಡಲಾಗಿದೆ
ಅಲ್ಪ ಸಂಖ್ಯಾತ ಸಮುದಾಯದವರು / ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಅರ್ಥಿಕ ನೆರವನ್ನು ಪಡೆಯಲು ಅನುಕೂಲವಾಗುವಂತೆ ಯೋಜನೆಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ National Portal for Transgender persons ವತಿಯಿಂದ ಪಡೆದಿರುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಪರಿಗಣಿಸಲು ಸರ್ಕಾರದಿಂದ ಅನುಮೋದನೆ ನೀಡಿ ವೆಬ್ಸೈಟ್ ನಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ?
ಅರ್ಹ ಅರ್ಜಿದಾರರು ಈ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಲು ಜುಲೈ ರಿಂದ ಅಲ್ಪ ಸಂಖ್ಯಾತ ಸಮುದಾಯದವರು ಅಥವಾ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಪ್ರಸ್ತುತ ವಾಸವಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಜಿಲ್ಲಾ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು?
1) ಟ್ರಾನ್ಸ್-ಜೆಂಡರ್ ಗುರುತಿನ ಚೀಟಿ. (transgender id card)
2) ಪಾಸ್ ಪೋರ್ಟ್ ಪೋಟೋ. (Photo)
3) ಅರ್ಜಿದಾರರ ಆಧಾರ್ ಕಾರ್ಡ್(aadhar card)
4) ಬ್ಯಾಂಕ್ ಪಾಸ್ ಬುಕ್(Passbook)
ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಯೋಜನೆ ಅಧಿಕೃತ ವೆಬ್ಸೈಟ್ ಲಿಂಕ್: Click here
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025
- ಪಿಎಂ ಕಿಸಾನ್ 20ನೇ ಕಂತು ಬಿಡುಗಡೆಗೆ ದಿನಾಂಕ ಫಿಕ್ಸ್! 20ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಜ್ಜು. - June 25, 2025
- ಶಾಲಾ ಮಕ್ಕಳಿಗೆ ಇ-ಹಾಜರಾತಿ ಕಡ್ಡಾಯ: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ನವ ಯುಗದ ಆರಂಭ! - June 25, 2025
Leave a Reply