ರಾಮನಗರ: ನಮ್ಮ ತೆರಿಗೆಯ ಹಣವನ್ನು ವಾಪಸ್ ಕೊಟ್ಟರೆ ಮಹಿಳೆಯರಿಗೆ ಈಗಿರುವ ಮಾಸಿಕ 2000 ರೂ. ಜೊತೆಗೆ ಮತ್ತೆ 2 ಸಾವಿರ ರೂ. ಸೇರಿಸಿ ಒಟ್ಟು 4000 ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
![Gruhalakshmi Scheme Kannada](https://malnadsiri.in/wp-content/uploads/2024/02/Gruhalakshmi-Scheme-Kannada-1024x576.jpg)
ಕುದೂರುನಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಹೋಬಳಿ ಮಟ್ಟದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿನ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗಾದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಸಹ ಓದಿ: ರಾಜ್ಯ ಸರ್ಕಾರದ ‘ಆಶಾಕಿರಣ’ ಯೋಜನೆ: 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ.!
ನಮ್ಮ ಸರ್ಕಾರವು ಜಾರಿಗೆ ತಂದ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಮ್ಮ ತೆರಿಗೆಯ ಹಣವನ್ನು ನಮಗೆ ಕೊಡಿ ಎಂದು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡುತ್ತಾರೆ. ನೀವು ತೆರಿಗೆ ಹಣವನ್ನು ವಾಪಸ್ ಕೊಟ್ಟಲ್ಲಿ ಮಹಿಳೆಯರಿಗೆ 2 ಸಾವಿರದ ಜೊತೆಗೆ ಇನ್ನೆರಡು ಸಾವಿರ ಸೇರಿಸಿ 4 ಸಾವಿರ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ರೈತರಿಗೆ ರಾಜ್ಯ ಬಜೆಟ್ ನಿಂದ ಭರ್ಜರಿ ಕೊಡುಗೆ!! ಕೃಷಿ ಅಭಿವೃದ್ಧಿಗಾಗಿ ವಿನೂತನ ಯೋಜನೆಗಳ ಘೋಷಣೆ!
ಇನ್ಮುಂದೆ ಸರ್ಕಾರದಿಂದ ಸಿಗಲಿದೆ ವಸ್ತ್ರ ಭಾಗ್ಯ! ಬಡವರಿಗೆ ಸಿದ್ದು ನೆರವು