rtgh

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ, ಜ್ಞಾನಪೀಠ ಪ್ರಶಸ್ತಿ ಬಗ್ಗೆ, ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ವಿಜೇತರ ಬಗ್ಗೆ ಮಾಹಿತಿ


jnanapeeta prashasti winners in kannada
jnanapeeta prashasti winners in kannada

About Jnanpeeth Award in kannada

ಜ್ಞಾನಪೀಠ ಪ್ರಶಸ್ತಿ ಬಗ್ಗೆ

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

1982 ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ. 1982ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ. ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳಲ್
1966 : ತಾರಾಶಂಕರ ಬಂದೋಪಾಧ್ಯಾಯ – ಬೆಂಗಾಲಿ – ಗಣದೇವತಾ
1967 : ಉಮಾಶಂಕರ್ ಜೋಶಿ – ಗುಜರಾತಿ – ನಿಶಿತಾ
1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ
1968 : ಸುಮಿತ್ರಾನಂದನ ಪಂತ್ – ಹಿಂದಿ – ಚಿದಂಬರಾ
1969 : ಫಿರಾಕ್ ಗೋರಕ್ ಪುರಿ – ಉರ್ದು – ಗುಲ್-ಎ-ನಗ್ಮಾ
1970 : ವಿಶ್ವನಾಥ ಸತ್ಯನಾರಾಯಣ – ತೆಲುಗು – ರಾಮಾಯಣ ಕಲ್ಪವೃಕ್ಷಮು
1971 : ಬಿಷ್ಣು ಡೆ – ಬೆಂಗಾಲಿ – ಸ್ಮೃತಿ ಸತ್ತಾ ಭವಿಷ್ಯತ್
1972 : ರಾಮ್‌ಧಾರಿ ಸಿಂಗ್ ದಿನಕರ್ – ಹಿಂದಿ – ಊರ್ವಶಿ
1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ

1973 : ಗೋಪಿನಾಥ ಮೊಹಾಂತಿ – ಒಡಿಯಾ – ಮತಿಮತಾಲ್
1974 : ವಿ. ಎಸ್. ಖಾಂಡೇಕರ್ – ಮರಾಠಿ – ಯಯಾತಿ
1975 : ಪಿ. ವಿ. ಅಖಿಲನ್ – ತಮಿಳು – ಚಿತ್ರಪ್ಪಾವೈ
1976 : ಆಶಾಪೂರ್ಣ ದೇವಿ – ಬೆಂಗಾಲಿ – ಪ್ರಥಮ್ ಪ್ರತಿಶೃತಿ
1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು
1978 : ಸಚ್ಚಿದಾನಂದ ವಾತ್ಸಾಯನ – ಹಿಂದಿ – ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್
1979 : ಬೀರೇಂದ್ರ ಕುಮಾರ್ ಭಟ್ಟಾಚಾರ್ಯ – ಅಸ್ಸಾಮಿ – ಮೃತ್ಯುಂಜಯ್
1980 : ಎಸ್. ಕೆ. ಪೊಟ್ಟೆಕ್ಕಾಟ್ – ಮಲಯಾಳಂ – ಒರು ದೇಸದಿಂಟೆ ಕಥಾ
1981 : ಅಮೃತಾ ಪ್ರೀತಮ್ – ಪಂಜಾಬಿ – ಕಾಗಜ್ ತೆ ಕ್ಯಾನ್ವಾಸ್
1982 : ಮಹಾದೇವಿ ವರ್ಮಾ – ಹಿಂದಿ – ಸಮಗ್ರ ಸಾಹಿತ್ಯ

1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ
1984 : ತಕಳಿ ಶಿವಶಂಕರ ಪಿಳ್ಳೈ – ಮಲಯಾಳಂ – ಸಮಗ್ರ ಸಾಹಿತ್ಯ
1985 : ಪನ್ನಾಲಾಲ್ ಪಟೇಲ್ – ಗುಜರಾತಿ – ಸಮಗ್ರ ಸಾಹಿತ್ಯ
1986 : ಸಚ್ಚಿದಾನಂದ ರಾವುತರಾಯ್ – ಒಡಿಯಾ – ಸಮಗ್ರ ಸಾಹಿತ್ಯ
1987 : ವಿ. ವಿ. ಶಿರ್ವಾಡ್ಕರ್ – ಮರಾಠಿ – ಸಮಗ್ರ ಸಾಹಿತ್ಯ
1988 : ಸಿ. ನಾರಾಯಣ ರೆಡ್ಡಿ – ತೆಲುಗು – ಸಮಗ್ರ ಸಾಹಿತ್ಯ
1989 : ಕುರ್ರಾತುಲೈನ್ ಹೈದರ್ – ಉರ್ದು – ಸಮಗ್ರ ಸಾಹಿತ್ಯ
1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ
1991 : ಸುಭಾಷ್ ಮುಖ್ಯೋಪಾಧ್ಯಾಯ – ಬೆಂಗಾಲಿ – ಸಮಗ್ರ ಸಾಹಿತ್ಯ
1992 : ನರೇಶ್ ಮೆಹ್ತಾ  ಹಿಂದಿ – ಸಮಗ್ರ ಸಾಹಿತ್ಯ

1993 : ಸೀತಾಕಾಂತ್ ಮಹಾಪಾತ್ರ  ಒಡಿಯಾ  ಸಮಗ್ರ ಸಾಹಿತ್ಯ
1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ
1995 : ಎಂ. ಟಿ. ವಾಸುದೇವನ್ ನಾಯರ್  ಮಲಯಾಳಂ  ಸಮಗ್ರ ಸಾಹಿತ್ಯ
1996 : ಮಹಾಶ್ವೇತಾ ದೇವಿ  ಬೆಂಗಾಲಿ – ಸಮಗ್ರ ಸಾಹಿತ್ಯ
1997 : ಅಲಿ ಸರ್ದಾರ್ ಜಾಫ್ರಿ  ಉರ್ದು – ಸಮಗ್ರ ಸಾಹಿತ್ಯ
1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ
1999 : ನಿರ್ಮಲ್ ವರ್ಮ – ಹಿಂದಿ – ಸಮಗ್ರ ಸಾಹಿತ್ಯ
1999 : ಗುರುದಯಾಳ್ ಸಿಂಗ್  ಪಂಜಾಬಿ  ಸಮಗ್ರ ಸಾಹಿತ್ಯ
2000 : ಇಂದಿರಾ ಗೋಸ್ವಾಮಿ  ಅಸ್ಸಾಮಿ – ಸಮಗ್ರ ಸಾಹಿತ್ಯ
2001 : ರಾಜೇಂದ್ರ ಕೆ. ಶಾ  ಗುಜರಾತಿ  ಸಮಗ್ರ ಸಾಹಿತ್ಯ

2002 : ಡಿ. ಜಯಕಾಂತನ್  ತಮಿಳು  ಸಮಗ್ರ ಸಾಹಿತ್ಯ
2003 : ವಿಂದಾ ಕರಂದೀಕರ್  ಮರಾಠಿ – ಸಮಗ್ರ ಸಾಹಿತ್ಯ
2004 : ರೆಹಮಾನ್ ರಾಹಿ  ಕಾಶ್ಮೀರಿ – ಸಮಗ್ರ ಸಾಹಿತ್ಯ
2005 : ರವೀಂದ್ರ ಕೇಳೇಕರ್  ಕೊಂಕಣಿ – ಸಮಗ್ರ ಸಾಹಿತ್ಯ
2006 : ಸತ್ಯವ್ರತ ಶಾಸ್ತ್ರಿ  ಸಂಸ್ಕೃತ  ಸಮಗ್ರ ಸಾಹಿತ್ಯ
2007 : ಒ. ಎನ್. ವಿ. ಕುರುಪ್  ಮಲಯಾಳಂ  ಸಮಗ್ರ ಸಾಹಿತ್ಯ
2008 : ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್  ಉರ್ದು  ಸಮಗ್ರ ಸಾಹಿತ್ಯ
2009 : ಅಮರ್ ಕಾಂತ್  ಹಿಂದಿ – ಸಮಗ್ರ ಸಾಹಿತ್ಯ
2009 : ಶ್ರೀ ಲಾಲ್ ಶುಕ್ಲ  ಹಿಂದಿ  ಸಮಗ್ರ ಸಾಹಿತ್ಯ
2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ

2011 : ಪ್ರತಿಭಾ ರೇ  ಒಡಿಯಾ – ಸಮಗ್ರ ಸಾಹಿತ್ಯ
2012 : ರಾವೂರಿ ಭರದ್ವಾಜ  ತೆಲುಗು  ಸಮಗ್ರ ಸಾಹಿತ್ಯ
2013 : ಕೇದಾರನಾಥ್ ಸಿಂಗ್  ಹಿಂದಿ – ಸಮಗ್ರ ಸಾಹಿತ್ಯ
2014 : ಭಾಲಚಂದ್ರ ನೇಮಾಡೆ  ಮರಾಠಿ  ಸಮಗ್ರ ಸಾಹಿತ್ಯ
2015 : ರಘುವೀರ್ ಚೌಧರಿ  ಗುಜರಾತಿ  ಸಮಗ್ರ ಸಾಹಿತ್ಯ
2016 : ಶಂಖ ಘೋಷ್  ಬೆಂಗಾಲಿ  ಸಮಗ್ರ ಸಾಹಿತ್ಯ
2017 : ಕೃಷ್ಣಾ ಸೋಬ್ತಿ  ಹಿಂದಿ  ಸಮಗ್ರ ಸಾಹಿತ್ಯ
2018 : ಅಮಿತಾವ್ ಘೋಷ್  ಇಂಗ್ಲಿಷ್  ಸಮಗ್ರ ಸಾಹಿತ್ಯ
2019 : ಅಕ್ಕಿತಂ ಅಚ್ಯುತನ್ ನಂಬೂದಿರಿ – ಮಲಯಾಳಂ  ಸಮಗ್ರ ಸಾಹಿತ್ಯ

ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ವಿಜೇತರು

  1. ಕುವೆಂಪು
  2. ದ.ರಾ. ಬೇಂದ್ರೆ
  3. ಶಿವರಾಮ ಕಾರಂತ
  4. ಮಾಸ್ತಿ ವೆಂಕಟೇಶ ಅಯ್ಯಂಗಾರ್
  5. ವಿ.ಕೃ. ಗೋಕಾಕ್
  6. ಯು.ಆರ್. ಅನಂತಮೂರ್ತಿ
  7. ಗಿರೀಶ್ ಕಾರ್ನಾಡ್
  8. ಚಂದ್ರಶೇಖರ ಕಂಬಾರ
jnanapeeta prashasti winners in kannada
jnanapeeta prashasti winners in kannada

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರ ಬಗ್ಗೆ :

# ಕುವೆಂಪು:
ಕನ್ನಡಕ್ಕೆ ಮೊಟ್ಟಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕೆ.ವಿ. ಪುಟ್ಟಪ್ಪನವರು. ಇವರು ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರ “ಶ್ರೀ ರಾಮಾಯಣ ದರ್ಶನಂ” ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ 1968 ರಲ್ಲಿ ‘ಜ್ಞಾನಪೀಠ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಕುವೆಂಪುರವರು ಜಲಗಾರ, ಸ್ಮಶಾನಕುರುಕ್ಷೇತ್ರ, ಶೂದ್ರತಪಸ್ವಿ, ಬೆರಳ್‍ಗೆ ಕೊರಳ್, ಅವರು ರಚಿಸಿದ ಜನಪ್ರಿಯ ನಾಟಕಗಳು. ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಮುಂತಾದುವುಗಳು ಅವರ ಕವನ ಸಂಕಲನಗಳು. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನೂ ಸಹ ರಚಿಸಿದ್ದಾರೆ. ‘ನೆನಪಿನ ದೋಣಿ’ ಇವರ ಆತ್ಮಕಥೆ.

# ದ.ರಾ. ಬೇಂದ್ರೆ:
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ದ.ರಾ. ಬೇಂದ್ರೆ)ಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. “ನಾಕುತಂತಿ” ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ. ಇದಕ್ಕಾಗಿ ಬೇಂದ್ರೆಯವರಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿತು. ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿ ಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು. ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.

# ಶಿವರಾಮ ಕಾರಂತ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಇವರ ‘ಮೂಕಜ್ಜಿ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.

# ಮಾಸ್ತಿ ವೆಂಕಟೇಶ ಅಯ್ಯಂಗಾರ:
ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ ‘ಸಣ್ಣಕಥೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು. ಇವರಿಗೆ ಮೈಸೂರು ಅರಸರು ‘ರಾಜಸೇವಾಸಕ್ತ’ ಎಂಬ ಬಿರುದನ್ನು ನೀಡಿದರು. ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು ‘ಚಿಕ್ಕ ವೀರ ರಾಜೇಂದ್ರ’ ಕಾದಂಬರಿ. ಇನ್ನೊಂದು ‘ಚೆನ್ನಬಸವ ನಾಯಕ’, ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ,ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು. ಗೌಡರ ಮಲ್ಲಿ, ರಾಮನವಮಿ,ಮೂಕನ ಮಕ್ಕಳು, ಸುನೀತಾ,ಬಿನ್ನಹ, ತಾವರೆ ಮಲಾರ,ಚೆಲುವು,ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು.

# ಡಾ.ವಿ.ಕೃ.ಗೋಕಾಕ್‌:
ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ.ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು. ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (1990) ಲಭಿಸಲು ಕಾರಣವಾದ ಕೃತಿ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು, 12 ಖಂಡಗಳನ್ನು ಹೊಂದಿದೆ.

# ಡಾ. ಯು.ಆರ್. ಅನಂತಮೂರ್ತಿ:
ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಡಾ. ಯು.ಆರ್. ಅನಂತಮೂರ್ತಿಯವರು. ಅನಂತಮೂರ್ತಿಯವರು ಸಣ್ಣಕತೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. 1955ರಲ್ಲಿ ‘ಎಂದೆಂದೂ ಮುಗಿಯದ ಕತೆ’ ಎಂಬ ಕಥಾಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕಗಳ ಕಥೆಗಳು(ಸಮಗ್ರ) ಇವು ಇವರ ಕಥಾಸಂಕಲನಗಳು. ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಇವರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು, ಇವುಗಳು ವಿಮರ್ಶೆಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇವರ ಕವನಸಂಕಲನಗಳು.

# ಗಿರೀಶ್ ಕಾರ್ನಾಡ:
ಗಿರೀಶ್ ಕಾರ್ನಾಡರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೆರ್ನ ಎಂಬಲ್ಲಿ ಜನಿಸಿದರು. ಗಿರೀಶರ ಮೊದಲನೆ ಕೃತಿ ‘ಯಾಯಾತಿ’ ಎಂಬ ನಾಟಕ. ಈ ನಾಟಕವು ಇವರಿಗೆ ದೊಡ್ಡಮಟ್ಟದಲ್ಲಿ ಪ್ರಶಂಸೆ ಮತ್ತು ಪ್ರಚಾರವನ್ನು ತಂದುಕೊಟ್ಟಿತು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ ಇವು ಪೌರಣಿಕ ನಾಟಕಗಳಾದರೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್ ನಾಟಕಗಳು ಐತಿಹಾಸಿಕ ಹಿನ್ನಲೆಯುಳ್ಳವು. ಜಾನಪದ ವಸ್ತುಗಳನ್ನು ಒಳಗೊಂಡ ನಾಟಕಗಳು ಹಯವದನ, ನಾಗಮಂಡಲ. ಸಾಮಾಜಿಕ ನಾಟಕ ಅಂಜುಮಲ್ಲಿಗೆ, ಗಿರೀಶ್ ಕಾರ್ನಾಡರ್ ನಾಟಕಗಳು ಇಂಗ್ಲಿಷ್, ಹಿಂದಿ, ಮರಾಠಿ ಹಾಗೂ ಭಾರತೀಯ ಭಾಷೆಗಳಲ್ಲಿ ಪ್ರದರ್ಶನಗೊಂಡಿವೆ. ನಾಟಕಗಳ ರಚನೆಯ ಜೊತೆಗೆ ಇವರು ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ರಂಗಗಳಲ್ಲಿ ಅಭಿನಯ ಮತ್ತು ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ.

# ಡಾ. ಚಂದ್ರಶೇಖರ ಕಂಬಾರ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ 2 ಜನವರಿ 1937ರಂದು ಡಾ. ಚಂದ್ರಶೇಖರ ಕಂಬಾರರು ಜನಿಸಿದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕಂಬಾರರು ರಚಿಸಿರುವ ಪ್ರಮುಖ ಕೃತಿಗಳೆಂದರೆ, ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕುಕ್ಕು ಹಾಡುಗಳೆ, ಚಕೋರಿ ಇವು ಕಾವ್ಯಗಳು. ನಾಟಕಗಳು – ಬೆಂಬತ್ತಿದ ಕಣ್ಣು, ನಾರ್ಸಿಸಸ್, ಜೋಕುಮಾರ ಸ್ವಾಮಿ, ಚಾಳೇಶ, ಕಿಟ್ಟಿಯ ಕತೆ, ಜೈ ಸಿದ ನಾಯಕ, ಕಾಡು ಕುದುರೆ, ನಾಯೀ ಕತೆ ಮುಂತಾದುವು. ಕಾದಂಬರಿ – ಅಣ್ಣ ತಂಗಿ, ಕರಿಮಾಯಿ, ಜೀಕೆ ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವಾ ಮತ್ತು ಅರಮನೆ. ಜಾನಪದ- ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಸಂಗ್ಯಾಬಾಳ್ಯಾ, ಬಣ್ಣಿಸಿ ಹಾಡವ್ವ ನನ ಬಳಗ, ಬಯಲಾಟಗಳು, ಮಾತಡೋ ಲಿಂಗವೇ ಮುಂತಾದವುಗಳು. ಇತರೆ- ಕನ್ನಡ ನಾಟಕ ಸಂಪುಟ, ನೆಲದ ಮರೆಯ ನಿದಾನ.


Leave a Reply

Your email address will not be published. Required fields are marked *