rtgh

Kantara Chapter 1: ಅಬ್ಬಬ್ಬಾ ಏನಿದು! ರಿಷಬ್ ಮುಖ ನೋಡಿ ಗೂಸ್​ಬಂಪ್ಸ್! BGM ಸೂಪರ್ ಎಂದ ಜನ.


ನಟ ರಿಷಬ್ ಶೆಟ್ಟಿ 2022 ರ ಕನ್ನಡ ಸೂಪರ್‌ಹಿಟ್ ಚಲನಚಿತ್ರ ಕಾಂತಾರವನ್ನು ನಟಿಸಿ ನಿರ್ದೇಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಕರ್ನಾಟಕದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದ ನಂತರ, ಚಿತ್ರವು ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಯಿತು ಮತ್ತು ಭಾರತದಾದ್ಯಂತ ಸ್ವೀಕಾರವನ್ನು ಪಡೆಯಿತು. ಈಗ, ಕಾಂತಾರ ಲೆಜೆಂಡ್: ಅಧ್ಯಾಯ 1 ಎಂಬ ಶೀರ್ಷಿಕೆಯ ಕಾಂತಾರ 2 ರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ, ಕಾಂತಾರ ಆಧರಿಸಿದ ದಂತಕಥೆಯ ಜನ್ಮಕ್ಕೆ ಒಂದು ಸ್ನೀಕ್ ಪೀಕ್ ನೀಡುತ್ತದೆ.

kantara 2 chapter 1 first look released
kantara 2 chapter 1 first look released

ಕಾಂತಾರ ಚಾಪ್ಟರ್ 1 ಟೀಸರ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ರಿಷಬ್ ಅಕ್ಷರಶಃ ಥ್ರಿಲ್ ಕೊಟ್ಟಿದ್ದಾರೆ. ತಮ್ಮ ಮೇಲೆ ಜನ ಇಟ್ಟುಕೊಂಡ ನಿರೀಕ್ಷೆ ಉಳಿಸಿದ್ದಾರೆ ಎನ್ನುವುದೇ ನೆಟ್ಟಿಗರ ಮಾತು.

ಕಾಂತಾರದಂತಹ ಬ್ಲಾಕ್​ಬಸ್ಟರ್ ಸಿನಿಮಾ ಮಾಡಿದ ನಂತರ ಅದರ ಕನೆಕ್ಟೆಡ್ ಮೂವಿ ಮಾಡುವುದು ದೊಡ್ಡ ಸವಾಲಾಗಿತ್ತು.

ಕಾಂತಾರ 2 ಫಸ್ಟ್ ಲುಕ್ Click Here ✅✅✅

ಯಾಕೆಂದರೆ ಕಾಂತಾರ ಮೂವಿ ಸೃಷ್ಟಿಸಿದ ನಿರೀಕ್ಷೆ ಅಷ್ಟಿಷ್ಟಲ್ಲ. ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಕಾಂತಾರ ಟೀಮ್ ಜನರ ನಿರೀಕ್ಷೆಯನ್ನು ಸಕ್ಸಸ್​ಫುಲ್ ಆಗಿ ಮುಟ್ಟಿದೆ.

ಸಿನಿಮಾದ ಟೀಸರ್ ನೋಡಿ ಜನರು ಪಾಸಿಟಿವ್ ಆಗಿಯೇ ರಿಯಾಕ್ಟ್ ಮಾಡುತ್ತಿದ್ದಾರೆ. ಇದು ಟೀಸರ್ ಅಲ್ಲ, ಇದು ಗೂಸ್​ಬಂಪ್ಸ್ ಎಂದಿದ್ದಾರೆ. ಇನ್ನೂ ಕೆಲವರು ಈ ಸಿನಿಮಾಗೆ ರೋಲ್​ಗೆ ಆಸ್ಕರ್ ಪಕ್ಕಾ ಎಂದಿದ್ದಾರೆ.

ಇನ್ನೂ ಬಹಳಷ್ಟು ಜನರು ಈ ಸಿನಿಮಾ ಭಾರತೀಯ ಚಿತ್ರರಂಗವನ್ನು ವಿಶ್ವಾದ್ಯಂತ ಮತ್ತೊಂದು ಲೆವೆಲ್​ಗೆ ತಲುಪಿಸಲಿದೆ ಎಂದಿದ್ದಾರೆ.

ಸಿನಿಮಾ ಖಂಡಿತಾವಾಗಿಯೂ ಮೊದಲ ಸಿನಿಮಾವನ್ನು ಮೀರಿಸುತ್ತದೆ. ಅದರಲ್ಲಿ ಸಂದೇಹವೇ ಇಲ್ಲ. ಅದಕ್ಕಿಂತ ದುಪ್ಪಟ್ಟು ಗಳಿಸುತ್ತದೆ. ಸಿನಿಮಾ ಥಿಯೇಟರ್​ನಲ್ಲಿ ನೋಡೋಕೆ ಕಾಯ್ತಿದ್ದೀವಿ ಎಂದಿದ್ದಾರೆ ನೆಟ್ಟಿಗರು.

ರಿಷಬ್ ಶೆಟ್ಟಿಯ ಮುಖ ನೋಡುತ್ತಲೇ ಗೂಸ್​ಬಂಪ್ಸ್ ಬರುತ್ತದೆ. ಎಂಥಾ ಸಿನಿಮಾಟೋಗ್ರಫಿ, ಎಂಥಾ ಕ್ಯಾಪ್ಚರಿಂಗ್ ಎಂದು ನೆಟ್ಟಿಗರು ಹೊಗಳಿದ್ದಾರೆ. ಟೀಸರ್​ಗೆ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ.


Leave a Reply

Your email address will not be published. Required fields are marked *