rtgh

ರೈತರಿಗೆ ಸಿಹಿ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು: ಯುಗಾದಿ ನಂತರ ಉತ್ತಮ ಮಳೆ, ಬೆಳೆ ಮುನ್ಸೂಚನೆ


ಕೋಲಾರ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಪ್ರಸಕ್ತ ವರ್ಷದಲ್ಲಿ ಉತ್ತಮವಾದ ಮಳೆ ಬೆಳೆಯಾಗಲಿದೆ ಎಂದು ಅರಸೀಕೆರೆ ಹಾರೋಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

Kodi Shree Swamiji

ಕೋಲಾರ ಜಿಲ್ಲೆಯ ಮಾಲೂರಿನ ಅಗ್ರಹಾರ ಬೀದಿಯಲ್ಲಿ ಪುರಾತನ ದಕ್ಷಿಣಾಮುಖಿ ಸಾಹಸಾಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಯುಗಾದಿ ಹಬ್ಬದವರೆಗೆ ಯಾವುದೇ ರಾಜಕೀಯ ಬದಲಾವಣೆಯಾಗುವ ಸಾಧ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ತೊಂದರೆಯಿದೆ. ಜಲ ದುರಂತ, ಬೆಂಕಿ ದುರಂತ, ಯುದ್ಧಗಳು ಸಂಭವಿಸಿ ಅನೇಕ ಸಾವು ನೋವುಗಳು ಉಂಟಾಗಲಿದೆ. ಕೋಮುವಾದ ಹೆಚ್ಚಾಗುತ್ತದೆ ಎಂದು ನುಡಿದರು.

ಯುಗಾದಿ ಹಬ್ಬದ ನಂತರದಲ್ಲಿ ಅನೇಕ ವಲಯದಲ್ಲಿ ಬದಲಾವಣೆ ಆಗಲಿದ್ದು, ಮೋಡ ಕವಿಯುತ್ತದೆ. ಆಕಾಶ ಮಳೆ ಸುರಿಸುತ್ತದೆ. ಭೂಮಿಯು ಉತ್ತಮವಾದ ಬೆಳೆ ನೀಡಲಿದ್ದು, ರೈತರು ಬೆಳೆಗೆ ಹಾಕಿದ ಬಂಡವಾಳಕ್ಕೆ ಯಾವುದೇ ಮೋಸವಾಗುವುದಿಲ್ಲ. ಜಗತ್ತಿನ ಒಬ್ಬ ಧಾರ್ಮಿಕ ಮುಖಂಡನ ಸಾವು ಸಂಭವಿಸುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಇ-ಶ್ರಮ್ ಕಾರ್ಡ್‌ನ ಹೊಸ ಕಂತು ಬಿಡುಗಡೆ! ತಕ್ಷಣ ನಿಮ್ಮ ಖಾತೆ ಚೆಕ್‌ ಮಾಡಿ

ಪ್ಯಾನ್‌ ಕಾರ್ಡ್‌ ಬಳಕೆದಾರರೇ ಹುಷಾರ್.!!‌ ಇನ್ಮುಂದೆ ಈ ಕೆಲಸ ಮಾಡಿದ್ರೆ ಬೀಳುತ್ತೆ 10 ಸಾವಿರ ದಂಡ


Leave a Reply

Your email address will not be published. Required fields are marked *