rtgh

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿದಿದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ.


ದೇಶಾದ್ಯಂತ ಭಕ್ತರು ಕೃಷ್ಣ ಜನ್ಮಾಷ್ಟಮಿಯಂದು ಉಪವಾಸವನ್ನು ಆಚರಿಸುತ್ತಾರೆ. ಇಡೀ ದಿನವನ್ನು ಭಗವಂತನ ಸ್ಮರಣೆಯಲ್ಲಿ ಕಳೆಯುತ್ತಾರೆ. ಮಧ್ಯರಾತ್ರಿಯ ನಂತರ ಉಪವಾಸವನ್ನು ಮುರಿಯಲಾಗುತ್ತದೆ. ಭಕ್ತರು ದಿನವಿಡೀ ಭಗವಂತನ ನಾಮವನ್ನು ಜಪಿಸುತ್ತಾರೆ, ಭಕ್ತಿ ಮತ್ತು ಸಮರ್ಪಣೆಯ ಮನೋಭಾವದಿಂದ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಕೃಷ್ಣನಿಗೆ ಸಂಬಂಧಪಟ್ಟ ಸ್ತೋತ್ರಗಳನ್ನು ಪಠಿಸುತ್ತಾರೆ

krishna janmashtami 2023 kannada
krishna janmashtami 2023 kannada

ಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣನ ಜನನವನ್ನು ನೆನಪಿಸುವ ಹಬ್ಬವಾಗಿದೆ. ಜೊತೆಗೆ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶ್ರೀಕೃಷ್ಣನು ಈ ದಿನದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಹಾಗಾಗಿ ಈ ದಿನವನ್ನು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಸೆಪ್ಟೆಂಬರ್ 06, 2023 ರಂದು ಸಂಜೆ 15:37 ಕ್ಕೆ ಆರಂಭವಾಗಿ ಮತ್ತು ಸೆಪ್ಟೆಂಬರ್ 07, ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ಹಬ್ಬವನ್ನು ಎರಡೂ ದಿನಗಳಲ್ಲಿ ಆಚರಿಸಲಾಗುತ್ತದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ಸಾಕಷ್ಟು ಮಹತ್ವದ್ದಾಗಿದೆ ಏಕೆಂದರೆ ಈ ಪೂಜೆಯ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡಲು ವಿಸ್ತಾರವಾದ ಪೂಜಾ ವಿಧಿಗಳನ್ನು ನೀಡಿದ್ದು ಕೃಷ್ಣ ಜನ್ಮಾಷ್ಟಮಿಯ ದಿನ ಯಾವ ರೀತಿಯ ಪೂಜಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

  • ಬೆಳಿಗ್ಗೆ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಹಾಕಿಕೊಳ್ಳಿ.
  • ಶ್ರೀ ಕೃಷ್ಣನ ಪಲ್ಲಟ ಅಥವಾ ತೊಟ್ಟಿಲನ್ನು ಅಲಂಕರಿಸುವ ಮೂಲಕ ಮತ್ತು ಪೂಜಾ ಸ್ಥಳವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ.
  • ಬೇಕಾದಲ್ಲಿ ರಾತ್ರಿಯೇ ಪೂಜಾ ಸಿದ್ಧತೆಗಳನ್ನು ಮಾಡಿಕೊಳ್ಳಿ.
  • ಗೌರವಪೂರ್ವಕವಾಗಿ ಕೃಷ್ಣನ ವಿಗ್ರಹವನ್ನು ಪಲ್ಲಟ ಅಥವಾ ಪೀಠದ ಮೇಲೆ ಇರಿಸಿ. ಇಲ್ಲದವರು ಮರದ ಚೌಕಿಯನ್ನು ಸಹ ಬಳಸಬಹುದು.
  • ದೇವರ ಪಾದ ತೊಳೆದು ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ. ಭಗವಂತನಿಗೆ ಅರ್ಪಣೆ ಮಾಡಿದ ನಂತರ ಆ ನೀರನ್ನು ಕುಡಿಯಿರಿ. ಇದನ್ನು ಅಚಮನ್ ಅಥವಾ ಆಚಮನ ಎಂದು ಕರೆಯಲಾಗುತ್ತದೆ.
  • ಬಳಿಕ ಐದು ಪದಾರ್ಥಗಳಾದ ತುಪ್ಪ, ಜೇನುತುಪ್ಪ, ಹಾಲು, ಮೊಸರು ಮತ್ತು ಗಂಗಾಜಲವನ್ನು ವಿಗ್ರಹದ ಮೇಲೆ ಅಭಿಷೇಕ ಮಾಡಿ. ಇದನ್ನು ಸಂಗ್ರಹಿಸಿ ನಂತರ ಪಂಚಾಮೃತವಾಗಿ ಪ್ರಸಾದವಾಗಿ ಬಡಿಸಿ.
  • ಬಳಿಕ ದೇವರ ವಿಗ್ರಹವನ್ನು ಹೊಸ ಬಟ್ಟೆಗಳು ಮತ್ತು ಪರಿಕರಗಳಿಂದ ಅಲಂಕರಿಸಿ. ಹಳದಿ ಬಟ್ಟೆ ಇದ್ದರೆ ಉತ್ತಮ. ಬಳಿಕ ದೇವರಿಗೆ ಪವಿತ್ರ ಚಂದನವನ್ನು ಲೆಪಿಸಿ.
  • ನಿಮ್ಮ ಮನೆಯಲ್ಲಿ ಆಭರಣಗಳು, ಕಿರೀಟ, ಮೋರ್ ಪಂಖ್ ಮತ್ತು ಬಾನ್ಸುರಿ ಇದ್ದಲ್ಲಿ ಅದೆಲ್ಲದರಿಂದ ಭಗವಂತನನ್ನು ಅಲಂಕರಿಸಿ. ತುಳಸಿ ಎಲೆಗಳು ಮತ್ತು ಹೂವುಗಳನ್ನು ದೇವರಿಗೆ ಅರ್ಪಿಸಿ. ಧೂಪದ್ರವ್ಯ ಬೆಳಗಿಸಿ. ಎಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿಸಿ.
  • ತೆಂಗಿನಕಾಯಿ, ಪಾನ್, ವೀಳ್ಯದೆಲೆ, ಕುಂಕುಮ ಮತ್ತು ಅರಿಶಿನವನ್ನು ಒಳಗೊಂಡಿರುವ ತಾಂಬೂಲವನ್ನು ದೇವರಿಗೆ ಅರ್ಪಿಸಿ. ಬಳಿಕ ಆರತಿಯನ್ನು ಮಾಡಿ, ಭಗವಂತನಲ್ಲಿ ನಮ್ಮ ಕುಟುಂಬವನ್ನು ಎಲ್ಲಾ ದುಷ್ಟರಿಂದ ರಕ್ಷಿಸು ಎಂದು ಪ್ರಾರ್ಥಿಸಿ.

ಶ್ರೀ ಕೃಷ್ಣ ಜನ್ಮಾಷ್ಟಮಿ ದಿನಕ್ಕೆ  ಸಂಬಂಧಿಸಿದ ಕೆಲವು ಪ್ರಮುಖ ಆಚರಣೆಗಳು:

ದೇಶಾದ್ಯಂತ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಇಡೀ ದಿನವನ್ನು ಭಗವಂತನ ಸ್ಮರಣೆಯಲ್ಲಿ ಕಳೆಯಲಾಗುತ್ತದೆ, ಮತ್ತು ಮಧ್ಯರಾತ್ರಿಯ ನಂತರ ಉಪವಾಸವನ್ನು ಮುರಿಯಲಾಗುತ್ತದೆ. ಭಕ್ತರು ದಿನವಿಡೀ ಭಗವಂತನ ನಾಮವನ್ನು ಜಪಿಸುತ್ತಾರೆ, ಭಕ್ತಿ ಮತ್ತು ಸಮರ್ಪಣೆಯ ಮನೋಭಾವದಿಂದ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಕೃಷ್ಣನಿಗೆ ಸಂಬಂಧಪಟ್ಟ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ವಿಶೇಷವಾಗಿ ಕೃಷ್ಣ ದೇವಾಲಯಗಳಲ್ಲಿ ಭಜನೆಗಳಿಂದ ಭಗವಂತನನ್ನು ಸ್ತುತಿಸುತ್ತಾ ಹಾಡಲಾಗುತ್ತದೆ, ಇದು ಸುತ್ತಲೂ ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸುತ್ತದೆ. ಕೃಷ್ಣನ ಜೀವನ ಘಟನೆಗಳು ಮತ್ತು ಅವನ ವಿವಿಧ ಲೀಲೆಗಳನ್ನು ಚಿತ್ರಿಸುವ ಸ್ಕಿಟ್ ಗಳನ್ನು ಎಲ್ಲೆಡೆ ಆಯೋಜಿಸಲಾಗುತ್ತದೆ. ಕೃಷ್ಣನ ರಾಸ ಲೀಲೆಯನ್ನು ಕೃಷ್ಣ ಮತ್ತು ಅವನ ಗೋಪಿಯರ ವೇಷ ಧರಿಸಿದ ಮಕ್ಕಳು ಪ್ರದರ್ಶಿಸುತ್ತಾರೆ. ಕೃಷ್ಣನ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಭಗವಾನ್ ಕೃಷ್ಣನಿಗೆ ಬೆಣ್ಣೆ ಅತ್ಯಂತ ಪ್ರೀಯ, ಆದ್ದರಿಂದ ಇದು ದಿನದ ಪ್ರಮುಖ ಭಕ್ಷ್ಯವಾಗಲೇ ಬೇಕು. ಈ ದಿನ ಕೃಷ್ಣನ ಬೋಧನೆಗಳು ಮತ್ತು ಜೀವನದ ನಿಜವಾದ ಅರ್ಥವನ್ನು ನೆನಪಿಸಲು ಭಗವದ್ಗೀತೆಯ ಪಾಠಗಳನ್ನು ಎಲ್ಲರೂ ಪಠಣ ಮಾಡುತ್ತಾರೆ.


Leave a Reply

Your email address will not be published. Required fields are marked *