rtgh

Breaking News! ತೈಲ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆ, ಸರ್ಕಾರದ ವಿರುದ್ಧ ಜನರ ಆಕ್ರೋಶ!


ನಮಸ್ಕಾರ ಸ್ನೇಹಿತರೆ ರಾಜ್ಯದ ಜನತೆಗೆ ತುಂಬಾ ಬೇಸರದ ಸುದ್ದಿ, ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಆಘಾತ ನೀಡಿದೆ. ನಂದಿನಿ ಹಾಲಿ ದರ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ. ನಂದಿನಿ ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಹೇಳಿದೆ. ಇದರಿಂದ ಜನರು ತುಂಬಾ ಆಕ್ರೋಶವನ್ನು ಹೊರಹಾಕಿದ್ದಾರೆ.

Milk price hike followed by oil price hike
Milk price hike followed by oil price hike

ಬನ್ನಿ ಸ್ನೇಹಿತರೆ ನಾಳೆಯಿಂದ ಹಾಲಿನ ದರವು ಈ ರೀತಿಯಾಗಿ ಇರಲಿದೆ ಈ ಕೆಳಗೆ ನಾವು ಹಾಲಿನವನ್ನು ನೀಡಿದ್ದೇವೆ.

ಸರ್ಕಾರ ಕೇವಲ ಹಾಲಿನ ದರ ಏರಿಕೆ ಮಾಡಿಲ್ಲ ಆದ್ರೆ.. 50 ಮಿಲಿ ಹೆಚ್ಚು ಹಾಲನ್ನು ನೀಡುತ್ತಿದೆ.. ಹೌದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಒದಗಿಸಲು ನಂದಿನಿ ಹಾಲಿನ ಪ್ರತಿ ಪ್ಯಾಕೆಟ್ ಈಗ 50 ಮಿಲಿ ಹೆಚ್ಚು ಹಾಲನ್ನು ಹೊಂದಿರುತ್ತೆ. ಅಂದ್ರೆ, ಅರ್ಧ-ಲೀಟರ್ ಪ್ಯಾಕೆಟ್ ಈ ಮೊದಲು 500 ಮಿಲಿ ಹಾಲು ಬರುತಿತ್ತು. ಇನ್ಮುಂದೆ 550 ಮಿಲಿ ಲೀಟರ್‌ ಹಾಲು ಇರಲಿದೆ. ಬೆಲೆ ಏರಿಕೆಯ ಜೊತೆಗೆ ಗ್ರಾಹಕರಿಗೆ ಹಾಲಿನ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳ ಮಾಡಿದೆ.. ಹಾಲಿನ ದರದಲ್ಲಿ ಮಾತ್ರ ಹೆಚ್ಚಳ ಮಾಡಲಾಗಿದೆ. ಮೊಸರು, ಮಜ್ಜಿಗೆ ಸೇರಿದಂತೆ ಇತರೆ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ. ಹಾಗಾದ್ರೆ ಹಾಲಿನ‌ ಹೊಸ ದರ ಹೇಗಿದೆ..? ಅನ್ನೋದನ್ನ ನೋಡೋದಾದ್ರೆ..

ಹಾಲಿನ‌ ಹೊಸ ದರ ಹೇಗಿದೆ?

ಹಾಲಿನ ಮಾದರಿ ಹಳೇ ದರ ಹೊಸ ದರ
1 ಲೀಟರ್‌ 1 ಲೀಟರ್‌
ನೀಲಿ ಪ್ಯಾಕೆಟ್ 42 ರೂ. 44 ರೂ.
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರೂ. 45 ರೂ.
ಆರೆಂಜ್ ಪ್ಯಾಕೆಟ್ 46 ರೂ. 48 ರೂ.
ಆರೆಂಜ್ ಸ್ಪೆಷಲ್ 48 ರೂ. 50 ರೂ.
ಶುಭಂ ಹಾಲು 48 ರೂ. 50 ರೂ.
ಸಮೃದ್ದಿ ಹಾಲು 51 ರೂ 53 ರೂ.
ಶುಭಂ(ಟೋನ್ಡ್ ಹಾಲು) 49 ರೂ. 51 ರೂ.
ಸಂತೃಪ್ತಿ ಹಾಲು 55 ರೂ. 57 ರೂ.
ಶುಭಂ ಗೋಲ್ಡ್ 49 ರೂ. 51ರೂ.
ಶುಭಂ ಡಬಲ್ ಟೋನ್ಡ್ ಹಾಲು 41ರೂ. 43 ರೂ.

ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್, ಕರ್ನಾಟಕ ಹಾಲು ಮಂಡಳಿಯು ದೇಶದಲ್ಲಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಪ್ರತಿ ನಿತ್ಯ 98.17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿಯೇ ಇದು 1 ಕೋಟಿ ಲೀಟರ್ ಸಂಗ್ರಹದ ಮೈಲುಗಲ್ಲನ್ನು ತಲುಪಲಿದೆ. ಇದು ಹೊಸ ದಾಖಲೆಯಾಗಲಿದೆ. ಇದಕ್ಕೆ ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಕಾರಣ ಎಂದರು.

ಸದ್ಯದ ಶೇಖರಣೆಯಲ್ಲಿ 30 ಲಕ್ಷ ಲೀಟರ್ ಅನ್ನು ಪೌಡರ್‌ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಹಿನ್ನಡೆ ಆಗುತ್ತಿದೆ. ಆದರೆ ಇದರಿಂದಾಗಿ 27 ಲಕ್ಷ ಹಾಲು ಉತ್ಪಾದಕರು ಮತ್ತು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿನಂತೆ. ಈ ಕಾರಣದಿಂದ ಹಾಲಿನ ದರ ಹೆಚ್ಚಿಸಿದರೂ, ಅದರ ಜತೆಗೆ ಪ್ಯಾಕೆಟ್‌ಗಳಲ್ಲಿನ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸಿದ್ದೇವೆ ಎಂದು ಹೇಳಿದರು.
ಹಾಲಿನ ದರ ಏರಿಕೆಯಿಂದ ಹೋಟೆಲ್‌ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಿನ ದರ ಏರಿಕೆ ಮಾಡಿದ್ರೆ ಟೀ ಕಾಫಿ ಬೆಲೆಯನ್ನು ಏರಿಕೆ ಮಾಡಬೇಕಾಗುತ್ತೆ, ಇದರಿಂದ ಜನರಿಗೂ ಹೊರೆ ಬೀಳಲಿದೆ.. ಇದರ ಜೊತೆ ನಮ್ಮ ಉದ್ಯಮಕ್ಕೂ ಹೊಡೆತ ಬೀಳುತ್ತೆ ಎಂದು ಕಿಡಿಕಾರಿದ್ದಾರೆ.. ಒಟ್ಟಿನ್ನಲ್ಲಿ ತೈಲ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆ ಮಾಡಿದ್ದು ಕರ್ನಾಟಕದ ಜನತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.


Leave a Reply

Your email address will not be published. Required fields are marked *