rtgh

Breaking News.! ತಪ್ಪಾದ ನಂಬರ್ ಗೆ ರಿಚಾರ್ಜ್ ಮಾಡಿದಾಗ ಚಿಂತಿಸುವ ಅಗತ್ಯ ಇಲ್ಲ, ಸುಲಭವಾಗಿ ಹಣ ಮರಳಿ ಪಡೆಯಬಹುದು.


ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಯ ಅಪ್ಲಿಕೇಶನ್ ಬಳಕೆ ಹೆಚ್ಚುತ್ತಿದೆ. ಗೂಗಲ್ ಪೇ, ಫೋನ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಈ ಯುಪಿಐ ವಹಿವಾಟುಗಳು (UPI Payment) ಬಳಕೆದಾರರಿಗೆ ಸಾಕಷ್ಟು ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿವೆ.

mobile recharge update
mobile recharge update

ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳಿಂದ ಹಿಡಿದು ಮೊಬೈಲ್ ರಿಚಾರ್ಜ್ (Mobile Recharge) ಗಳನ್ನೂ ಕೂಡ ಯುಪಿಐ ಅಪ್ಲಿಕೇಶನ್ ಗಳ ಮೂಲಕ ಮಾಡಿಕೊಳ್ಳಬಹುದಾಗಿದೆ. ಇನ್ನು ಒಂದುವೇಳೆ ನೀವು ತಪ್ಪಾದ ಮೊಬೈಲ್ ಸಂಖ್ಯೆಗೆ ರಿಚಾರ್ಜ್ ಮಾಡಿದ್ದಲ್ಲಿ ಅದನ್ನು ಮರುಪಾವತಿ ಮಾಡಿಕೊಳ್ಳಬಹುದು.

ಯುಪಿಐ ಮೂಲಕ ಮೊಬೈಲ್ ರಿಚಾರ್ಜ್

ಯುಪಿಐ ಅಪ್ಲಿಕೇಶನ್ ಗಳನ್ನು ಹಲವು ರೀತಿಯ ಆಯ್ಕೆಗಳು ಸಿಗುತ್ತವೆ. ಮೊಬೈಲ್ ರಿಚಾರ್ಜ್, ಟಿವಿ ರಿಚಾರ್ಜ್, ಕರೆಂಟ್ ಬಿಲ್, ವಾಟರ್ ಬಿಲ್, ಗ್ಯಾಸ್ ಬಿಲ್ ಸೇರಿದಂತೆ ವಿವಿಧ ರೀತಿಯ ರಿಚಾರ್ಜ್ ಗಳನ್ನೂ ಮಾಡಬಹುದು.

ಇನ್ನು ರಿಚಾರ್ಜ್ ಮಾಡುವ ಸಮಯದಲ್ಲಿ ನೀವು ಕೆಲವೊಮ್ಮೆ ತಪ್ಪಾದ ಸಂಖ್ಯೆ ರಿಚಾರ್ಜ್ ಮಾಡುವುದು ಸಾಮಾನ್ಯವಾದ ವಿಷಯ. ನಂಬರ್ ಆಯ್ಕೆ ಮಾಡುವ ಸಮಯದಲ್ಲಿ ತಪ್ಪಾದ ನಂಬರ್ ಆಯ್ಕೆ ಮಾಡಿದರೆ ನಿಮ್ಮ ರಿಚಾರ್ಜ್ ಬೇರೆಯವರಿಗೆ ತಲುಪುತ್ತದೆ. ಈ ತಪ್ಪನ್ನು ನೀವು ಸುಲಭ ವಿಧಾನದ ಮೂಲಕ ಸರಿಪಡಿಸಿಕೊಳ್ಳಬಹುದು.

ತಪ್ಪಾಗಿ ರಿಚಾರ್ಜ್ ಮಾಡಿದಾಗ ಏನು ಮಾಡಬೇಕು

*ಮೊದಲಿಗೆ ನೀವು ಬಳಸುತ್ತಿರುವ ಸಿಮ್ ಕಾರ್ಡ್ (Sim Card) ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು.

*ನೀವು ತಪ್ಪಾಗಿ ರಿಚಾರ್ಜ್ ಮಾಡಿದ ನಂಬರ್ ಗಳ ವಿವರಗಳನ್ನು ಟೆಲಿಕಾಂ ಆಪರೇಟರ್ ಗಳಿಗೆ ನೀಡಬೇಕು.

*ಎಷ್ಟು ಮೊತ್ತದ ರಿಚಾರ್ಜ್, ಯಾವ ಕಂಪನಿಯ ಸಿಮ್ ಕಾರ್ಡ್ ಹಾಗು ಯಾವ ಆಪ್ ನಿಂದ ರಿಚಾರ್ಜ್ ಮಾಡಿದ್ದೀರಿ ಎನ್ನುವ ಎಲ್ಲಾ ವಿವರಗಳನ್ನು ನೀಡಬೇಕು.

*ಟೆಲಿಕಾಂ ಆಪರೇಟರ್ ಗಳಿಗೆ ನೀವು ಇಮೇಲ್ ನ ಮೂಲಕ ಸೂಕ್ತ ವಿವರಗಳನ್ನು ನೀಡಬೇಕಾಗುತ್ತದೆ.

*ಇನ್ನು ಟೆಲಿಕಾಂ ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ವಾಟ್ಸಾಪ್, ಕಸ್ಟಮರ್ ಕೇರ್ ಪೋರ್ಟಲ್ ಅಥವಾ ಪ್ಲೇ ಸ್ಟೋರ್ ನಿಂದ ಗ್ರಾಹಕ ಸೇವಾ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ದೂರನ್ನು ಸಲ್ಲಿಸಬಹುದು.

👉ಮೊಬೈಲ್ ರೀಚಾರ್ಜ್ ಆಫರ್ಸ್ Check online


Leave a Reply

Your email address will not be published. Required fields are marked *