rtgh

ಮೈಸೂರು ದಸರಾ ಟಿಕೆಟ್ : ಮೈಸೂರು ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ, ಕಾರ್ಡ್ ಬಳಕೆ ಹೇಗೆ?


Spread the love

ಪ್ರತಿ ವರ್ಷ, ಭಾರತದ ಕರ್ನಾಟಕದಲ್ಲಿರುವ ಮೈಸೂರು ನಗರವು ತನ್ನ ವಿಶ್ವ-ಪ್ರಸಿದ್ಧ ಮೈಸೂರು ದಸರಾ ಉತ್ಸವದ ಸಮಯದಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ವೈಭವದ ಭವ್ಯವಾದ ಪ್ರದರ್ಶನದೊಂದಿಗೆ ಜೀವಂತವಾಗಿರುತ್ತದೆ. ಈ ವರ್ಷ, ಹಬ್ಬವು ಇನ್ನಷ್ಟು ಅದ್ಭುತವಾಗಿದೆ ಎಂದು ಭರವಸೆ ನೀಡುತ್ತದೆ, ಕೆಟ್ಟದ್ದರ ವಿರುದ್ಧ ಒಳ್ಳೆಯ ವಿಜಯವನ್ನು ಆಚರಿಸುತ್ತದೆ ಮತ್ತು ಪ್ರದೇಶದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುತ್ತದೆ.

Mysore Dussehra Ticket Mysore Dussehra Gold Card Launch
Mysore Dussehra Ticket Mysore Dussehra Gold Card Launch

ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ದಸರಾ ಮಹೋತ್ಸವ ವೀಕ್ಷಿಸಲು ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಪ್ರವಾಸಿಗರಿಗೆ ಅನುಕೂಲವಾಗಲೆಂದು ಜಿಲ್ಲಾಡಳಿತ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಬಿಡುಗಡೆ ಮಾಡಲಿದೆ.

ಗೋಲ್ಡ್ ಕಾರ್ಡ್‌ನ್ನು ಆನ್‌ಲೈನ್‌ನಲ್ಲಿ ಮಾತ್ರ ಪಡೆಯಬಹುದಾಗಿದೆ.

ಗೋಲ್ಡ್ ಕಾರ್ಡ್ ಖರೀದಿಗೆ ಆರು ಸಾವಿರ ರೂಪಾಯಿ ನೀಡಬೇಕಿದೆ, ಒಬ್ಬರಿಗೆ ಎರಡು ಗೋಲ್ಡ್ ಕಾರ್ಡ್ ಪಡೆಯಲು ಮಾತ್ರ ಅವಕಾಶ ನೀಡಲಾಗದೆ.

ಆನ್‌ಲೈನ್‌ನಲ್ಲಿ ಗೋಲ್ಡ್ ಕಾರ್ಡ್ ಖರೀದಿ ಮಾಡಿದ ನಂತರ ಕಾರ್ಡ್‌ನ್ನು ಯಾವಾಗ ಪಡೆಯಬಹುದು ಎನ್ನುವ ಎಸ್‌ಎಂಎಸ್ ಬರುತ್ತದೆ. ಐಡಿ ನೀಡಿ ಗೋಲ್ಡ್ ಕಾರ್ಡ್ ಪಡೆಯಬಹುದಾಗಿದೆ. ಗೋಲ್ಡ್ ಕಾರ್ಡ್ ಪಡೆದವರು ಯಾವುದೇ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದಾಗಿದೆ. ಜಂಬೂ ಸವಾರಿ ಮೆರವಣಿಗೆಯನ್ನು ನೋಡಲು ಅವಕಾಶ ಸಿಗುತ್ತದೆ. ಅರಮನೆ ಮುಂದೆ ವಿಐಪಿ ಲಾಂಜ್‌ನಲ್ಲಿ ಕೂರಲು ಅವಕಾಶ ನೀಡಲಾಗುತ್ತದೆ.

how to get gold card dasara in kannada

ಟಿಕೆಟ್‌ ಮತ್ತು ಗೋಲ್ಡ್‌ ಕಾರ್ಡ್‌ ಖರೀದಿಗಾಗಿ https://www.mysoredasara.gov.in/ ವೆಬ್‌ಸೈಟ್‌ ಸಂಪರ್ಕಿಸಬಹುದಾಗಿದೆ.

ಆನ್‌ಲೈನ್‌ ಮೂಲಕ ಗೋಲ್ಡ್‌ ಕಾರ್ಡ್‌, ಟಿಕೆಟ್‌ ಖರೀದಿಸಿದ ನಂತರ, ಖರೀದಿಸಿದವರಿಗೆ ಗೋಲ್ಡ್‌ ಕಾರ್ಡ್‌ ಟಿಕೆಟ್‌ ಸ್ವೀಕರಿಸುವ ಸ್ಥಳ, ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಗಳನ್ನು ಅವರ ಮೊಬೈಲಿಗೆ ಎಸ್‌ಎಂಎಸ್‌ ಮೂಲಕ ಮತ್ತು ಇ-ಮೇಲ್‌ ಐಡಿಗೆ ಕಳುಹಿಸಲಾಗುವುದು. ಅದಕ್ಕನುಸಾರವಾಗಿ ಖರೀದಿಸಿದವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಐಡಿ ಹಾಜರುಪಡಿಸಿ ಗೋಲ್ಡ್‌ ಕಾರ್ಡ್‌ ಟಿಕೆಟ್‌ ಪಡೆದುಕೊಳ್ಳಬಹುದಾಗಿದೆ. ಆನ್‌ಲೈನ್‌ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್‌ ಕಾರ್ಡ್‌ ಮತ್ತು ಟಿಕೆಟ್‌ ಮಾರಾಟ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನಿದು ದಸರಾ ಗೋಲ್ಡ್‌ ಕಾರ್ಡ್‌?

ಮೈಸೂರು ದಸರಾದಲ್ಲಿ ನೀಡುವ ಗೋಲ್ಡ್‌ ಕಾರ್ಡ್‌ನಿಂದ ನೀವು ಯಾವುದೇ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಮೈಸೂರು ಅರಮನೆ ಮುಂದೆ ವಿಐಪಿ ಲಾಂಜ್‌ನಲ್ಲಿ ಕುಳಿತು ಜಂಬೂ ಸವಾರಿ ಮೆರವಣಿಗೆಯನ್ನು ನೋಡುವ ಅವಕಾಶ ಇದರಲ್ಲಿರಲಿದೆ. ಇದರ ಬೆಲೆ 6 ಸಾವಿರ ರೂ. ಆಗಿದ್ದು, ದಸರಾದ ಯಾವುದೇ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರವೇಶ ಸಿಗಲಿದ್ದು, ವೀಕ್ಷಿಸಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಜಿಲ್ಲಾಡಳಿತ ಈ ವ್ಯವಸ್ಥೆ ಮಾಡಿದೆ.


Spread the love

Leave a Reply

Your email address will not be published. Required fields are marked *