rtgh

ಡಿ. 1 ರಿಂದ ಆಸ್ತಿ ಪತ್ರಗಳಿಗೆ ಜಾರಿಗೆ ಬರಲಿದೆ ಹೊಸ ನಿಯಮ, ಸ್ವಂತ ಆಸ್ತಿ ಮತ್ತು ಜಮೀನು ಇದ್ದವರಿಗೆ ಹೊಸ ರೂಲ್ಸ್.


new rule will come into effect for property deeds
new rule will come into effect for property deeds

ರಿಯಲ್ ಎಸ್ಟೇಟ್ ಜಗತ್ತಿನಲ್ಲಿ, ನಿಯಮಗಳು ಮತ್ತು ಕಾನೂನುಗಳಲ್ಲಿನ ಬದಲಾವಣೆಗಳು ಆಸ್ತಿ ವಹಿವಾಟಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ನೀವು ಮನೆಮಾಲೀಕರಾಗಿರಲಿ, ರಿಯಲ್ ಎಸ್ಟೇಟ್ ವೃತ್ತಿಪರರಾಗಿರಲಿ ಅಥವಾ ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬಯಸುವವರಾಗಿದ್ದರೆ, ಆಸ್ತಿ ಪತ್ರಗಳಿಗೆ ಹೊಸ ನಿಯಮಗಳ ಬಗ್ಗೆ ತಿಳಿಸುವುದು ಬಹಳ ಮುಖ್ಯ.

ದೇಶದಲ್ಲಿ Reserve Bank Of India ಅನೇಕ ರೀತಿಯ ಬ್ಯಾಂಕಿಂಗ್ ನಿಯಮವನ್ನು ಬದಲಿಸಿದೆ. RBI ಇತ್ತೀಚಿಗೆ ಗ್ರಾಹಕರಿಗೆ ನೀಡುವ ಸಾಲದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈ ವರೆಗೆ ಗ್ರಾಹಕರಿಗೆ ಎದುರಿಗಿರುವ ಕೆಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು RBI ಹೊಸ ಹೊಸ ನಿಯಮ ರೂಪಿಸುತ್ತಿದೆ.

ಇದೀಗ RBI ಬ್ಯಾಂಕ್ ನಲ್ಲಿ ಇರಿಸಿದ ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬ್ಯಾಂಕ್ ನಲ್ಲಿ ಸ್ವಂತ ಆಸ್ತಿ ಮತ್ತು ಜಮೀನು ಅಡಮಾನವಾಗಿರಿಸಿದವರಿಗೆ RBI ಮಹತ್ವದ ಮಾಹಿತಿ ಹೊರಡಿಸಿದೆ. ಈ ಮೂಲಕ ಬ್ಯಾಂಕುಗಳಿಗೆ ಸಾಲ ಮರುಪಾವತಿಗೆ ಹೊಸ ನಿಯಮವನ್ನು ಪರಿಚಯಿಸಿದೆ.

ಸಾಲ ಮರುಪಾವತಿಗೆ RBI ಹೊಸ ನಿಯಮ

ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಇನ್ನು ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅಡಮಾನವಾಗಿ ಇರಿಸಿಕೊಂಡ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸಬೇಕಿದೆ.

ಡಿ. 1 ರಿಂದ ಆಸ್ತಿ ಪತ್ರಗಳಿಗೆ ಜಾರಿಗೆ ಬರಲಿದೆ ಹೊಸ ನಿಯಮ
December 1 ರಿಂದ RBI ನ ಈ ಹೊಸ ನಿಯಮ ಜಾರಿಗೆ ಬರಲಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎಂದು ಆದೇಶ ಹೊರಡಿಸಿದೆ. ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

ಸ್ವಂತ ಆಸ್ತಿ ಮತ್ತು ಜಮೀನು ಇದ್ದವರಿಗೆ ಹೊಸ ರೂಲ್ಸ್
ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ. ನಿಗದಿತ ದಿನಗಳ ಒಳಗೆ ಬ್ಯಾಂಕ್ ಸಾಲಗಾರರಿಗೆ Property Documents ಗಳನ್ನೂ ನೀಡದಿದ್ದರೆ ದಿನಕ್ಕೆ 5000 ರೂ ದಂಡವನ್ನ ನೀಡಬೇಕಾಗುತ್ತದೆ.

ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ 30 ದಿನಗಳ ವಿಸ್ತರಣೆಯನ್ನು ನೀಡಲಾಗುತ್ತದೆ. RBI ಈ ಸೂಚನೆಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 21, 35A ಮತ್ತು 56, Reserve Bank Of India Act 1934 ರ ಸೆಕ್ಷನ್ 45JA ಮತ್ತು 45L ಮತ್ತು National Housing Bank Act 1987 ರ ಸೆಕ್ಷನ್ 30A ಅಡಿಯಲ್ಲಿ ನೀಡಿದೆ.


Leave a Reply

Your email address will not be published. Required fields are marked *