rtgh

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ 2023. ಅ.15 ರಂದು ಭಾರತ-ಪಾಕಿಸ್ತಾನ ಪಂದ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!


ಬಹು ನಿರೀಕ್ಷಿತ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಮಂಗಳವಾರ ಪ್ರಕಟಿಸಲಾಗಿದೆ. ಅಕ್ಟೋಬರ್‌ 5 ರಿಂದ ಭಾರತದ ಆತಿಥ್ಯದಲ್ಲಿ ಒಡಿಐ ವಿಶ್ವಕಪ್‌ ಟೂರ್ನಿ ಆರಂಭವಾಗಲಿದ್ದು, ಇದೇ ತಿಂಗಳು 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖೀ ಸೆಣಸಲಿವೆ. ನವೆಂಬರ್‌ 11 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಭಾರತ ತಂಡ ಮೊದಲನೇ ಕ್ವಾಲಿಫೈಯರ್‌ ತಂಡದ ವಿರುದ್ದ ಸೆಣಸಲಿದೆ.

odi world cup 2023 ind vs pak match schedule and venue information in kannada
odi world cup 2023 ind vs pak match schedule and venue information in kannada

odi world cup 2023 ind vs pak match kannada

ಹೈಲೈಟ್ಸ್‌: ಭಾರತ-ಪಾಕಿಸ್ತಾನ

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ.
ಅಕ್ಟೋಬರ್‌ 15 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಕಾದಾಟ ನಡೆಸಲಿವೆ.
ನವೆಂಬರ್‌ 11 ರಂದು ಬೆಂಗಳೂರಿನಲ್ಲಿ ಮೊದಲನೇ ಕ್ವಾಲಿಫೈಯರ್‌ ವಿರುದ್ಧ ಭಾರತ ಸೆಣಸಲಿದೆ.

 ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) 2023ರ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಮಂಗಳವಾರ (ಜೂನ್‌ 27) ಪ್ರಕಟಿಸಿದೆ. ಅಕ್ಟೋಬರ್‌ 5 ರಿಂದ ಒಡಿಐ ವಿಶ್ವಕಪ್‌ ಅಭಿಯಾನ ಅಧಿಕೃತವಾಗಿವಾಗಿ ಆರಂಭವಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್‌ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೆಣಸಲಿವೆ.

ಒಟ್ಟು 46 ದಿನಗಳ ಕಾಲ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯು ಭಾರತದ 14 ಮೈದಾನಗಳಲ್ಲಿ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಅಕ್ಟೋಬರ್‌ 5 ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ 2019ರ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ರನ್ನರ್‌ ಅಪ್‌ ನ್ಯೂಜಿಲೆಂಡ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ರೋಹಿತ್‌ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಅಕ್ಟೋಬರ್‌ 8 ರಂದು ಚೆನ್ನೈ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಐದು ಬಾರಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಸೆಣಸಲಿದೆ. ಏಕದಿನ ವಿಶ್ವಕಪ್‌ ಸೂಪರ್‌ ಲೀಗ್‌ಗೆ ಈಗಾಗಲೇ 8 ತಂಡಗಳು ಅರ್ಹತೆ ಪಡೆದಿದ್ದು, ಇನ್ನುಳಿದ ಎರಡು ಸ್ಥಾನಗಳಿಗೆ ಕ್ವಾಲಿಫೈಯರ್‌ನಲ್ಲಿ ಸೆಣಸುತ್ತಿರುವ ಎರಡು ತಂಡಗಳು ಅರ್ಹತೆ ಪಡೆಯಲಿವೆ.
ಪ್ರತಿಯೊಂದು ತಂಡ ರೌಂಡ್‌ ರಾಬಿನ್‌ ಮಾದರಿಯಲ್ಲಿ ಎಲ್ಲಾ ತಂಡಗಳ ವಿರುದ್ದ ಒಟ್ಟು 9 ಪಂದ್ಯಗಳನ್ನು ಆಡಲಿದೆ. ಸೂಪರ್ ಲೀಗ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ.

2023ರ ಏಕದಿನ ವಿಶ್ವಕಪ್‌ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ICC ODI World Cup Schedule

ಅ. 15ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ಟೂರ್ನಿಯ ಕೇಂದ್ರ ಬಿಂದುವಾದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 15 ರಂದು ಅಗಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೆಣಸಲಿವೆ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡ ನವೆಂಬರ್‌ 11 ರಂದು ಮೊದಲನೇ ಕ್ವಾಲಿಫೈಯರ್‌ ತಂಡದ ವಿರುದ್ದ ಸೆಣಸಲಿದೆ.

ವಿಶ್ವಕಪ್‌’ನಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ

 • ಅಕ್ಟೋಬರ್ 8: ಭಾರತ ವಿರುದ್ಧ ಆಸ್ಟ್ರೇಲಿಯಾ, ಚೆನ್ನೈ
 • ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ, ನವದೆಹಲಿ
 • ಅಕ್ಟೋಬರ್ 14: ಭಾರತ ವಿರುದ್ಧ ಪಾಕಿಸ್ತಾನ, ಅಹಮದಾಬಾದ್
 • ಅಕ್ಟೋಬರ್ 19: ಭಾರತ ವಿರುದ್ಧ ಬಾಂಗ್ಲಾದೇಶ, ಪುಣೆ
 • ಅಕ್ಟೋಬರ್ 22: ಭಾರತ vs ನ್ಯೂಜಿಲೆಂಡ್, ಧರ್ಮಶಾಲಾ
 • ಅಕ್ಟೋಬರ್ 29: ಭಾರತ vs ಇಂಗ್ಲೆಂಡ್, ಲಕ್ನೋ
 • ನವೆಂಬರ್ 2: ಭಾರತ ವಿರುದ್ಧ ಶ್ರೀಲಂಕಾ, ಮುಂಬೈ
 • ನವೆಂಬರ್ 5: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
 • ನವೆಂಬರ್ 12: ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ಬೆಂಗಳೂರು

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಪಂದ್ಯಗಳು

ಕನ್ನಡಿಗರ ಹೆಮ್ಮೆಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬುದಕ್ಕೆ ಉತ್ತರ ಇಲ್ಲಿದೆ. ಈ ಬಾರಿಯ ವಿಶ್ವಕಪ್ ನ ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಅವುಗಳಲ್ಲಿ ಟೀಂ ಇಂಡಿಯಾ ತಂಡ ಕೇವಲ 1 ಪಂದ್ಯ ಮಾತ್ರ ಆಡಲಿದೆ.

ನ. 11ರಂದು ನಡೆಯಲಿರುವ ಪಂದ್ಯದಲ್ಲಿ ಭಾರತದ ಪಂದ್ಯ ನಡೆಯಲಿದ್ದು ಆ ಪಂದ್ಯದಲ್ಲಿ ಟೂರ್ನಿಯ ಮೊದಲ ಕ್ವಾಲಿಫೈಯರ್ ಸ್ಥಾನಮಾನ ಪಡೆದ ತಂಡವೊಂದು ಮುಖಾಮುಖಿಯಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಯ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿದ್ದು, ಒಂದು ಪಂದ್ಯ ಮಾತ್ರ ಹಗಲಲ್ಲಿ ನಡೆಯುವ ಪಂದ್ಯವಾಗಲಿದೆ. ಅವುಗಳ ವೇಳಾಪಟ್ಟಿ ಹೀಗಿದೆ.

 • ಅ. 20: ಆಸ್ಟ್ರೇಲಿಯಾ – ಪಾಕಿಸ್ತಾನ
 • ಅ. 26: ಇಂಗ್ಲೆಂಡ್ – ಕ್ವಾಲಿಫೈಯರ್ 2
 • ನ. 4 – ನ್ಯೂಜಿಲೆಂಡ್ – ಪಾಕಿಸ್ತಾನ (ಹಗಲು ಪಂದ್ಯ)
 • ನ. 9 – ನ್ಯೂಜಿಲೆಂಡ್ – ಕ್ವಾಲಿಫೈಯರ್ 2
 • ನ. 11 – ಭಾರತ ಮತ್ತು ಕ್ವಾಲಿಫೈಯರ್ 1

Leave a Reply

Your email address will not be published. Required fields are marked *