rtgh

OnePlus 10 Pro: ಒನ್ ಪ್ಲಸ್ ಮೊಬೈಲ್ ಮೇಲೆ ಆಕರ್ಷಕ ಆಫರ್ ಘೋಷಣೆ, ಕಡಿಮೆ ಬೆಲೆಗೆ ಖರೀದಿಸಿ ಒನ್ ಪ್ಲಸ್ ಮೊಬೈಲ್!


OnePlus 10 Pro

OnePlus ತನ್ನ ಅದ್ಭುತ ಸ್ಮಾರ್ಟ್‌ಫೋನ್ ಬಿಡುಗಡೆಯೊಂದಿಗೆ ಭವಿಷ್ಯದಲ್ಲಿ ಬದುಕಲು ನಿಮ್ಮನ್ನು ಆಹ್ವಾನಿಸುತ್ತದೆ: OnePlus 10 Pro 5G. ಸುಪ್ರಸಿದ್ಧ ಬ್ರಾಂಡ್ OnePlus ನ ಈ ಭರವಸೆಯ ಸ್ಮಾರ್ಟ್‌ಫೋನ್ ಜ್ವಾಲಾಮುಖಿ ಕಪ್ಪು ಮತ್ತು ಎಮರಾಲ್ಡ್ ಫಾರೆಸ್ಟ್ ಎಂಬ ಎರಡು ಸಮ್ಮೋಹನಗೊಳಿಸುವ ಬಣ್ಣಗಳಲ್ಲಿ ಬರುತ್ತದೆ. ಇದು 8GB RAM ಮತ್ತು 128 GB ಸಂಗ್ರಹಣೆಯ ಬಹುಮುಖ ಸಂರಚನೆಯನ್ನು ಹೊಂದಿದೆ ಮತ್ತು ನಿಮಗೆ ವೇಗದ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

oneplus 10 pro 5g smartphone features and specifications
oneplus 10 pro 5g smartphone features and specifications

OnePlus 10 Pro 5G Smartphone Feature

ಒನ್‌ಪ್ಲಸ್‌ ಸಂಸ್ಥೆಯ ಈ ಮೊಬೈಲ್‌ 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ OLED ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಎರಡನೇ ತಲೆಮಾರಿನ ಲೋ-ಟೆಂಪ್‌ರೇಚರ್‌ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನವನ್ನು ಆಧರಿಸಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್‌ ನೀಡಲಿದೆOnePlus 10 Pro ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 ಜೆನ್‌ 1 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 10 ಪ್ರೊ 5G ಚಿಪ್ಸೆಟ್

ಮುಂದಿನ ಪೀಳಿಗೆಯ Snapdragon® 8 Gen 1 5G ಮೊಬೈಲ್ ಪ್ಲಾಟ್‌ಫಾರ್ಮ್ ಪ್ರಮುಖ-ವೇಗವಾಗಿದೆ. LPDDR5 RAM ಮತ್ತು UFS3.1 ನೊಂದಿಗೆ ಜೋಡಿಸಲಾಗಿದೆ, ನಿಮ್ಮ ಬೆರಳ ತುದಿಯಲ್ಲಿ ಸಲೀಸಾಗಿ ವೇಗದ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಅನ್‌ಲಾಕ್ ಮಾಡಿ.

ಇನ್ನು ಓದಿ: ಅದ್ಭುತ 200MP ಕ್ಯಾಮೆರಾದ Redmi Note 13 5G Series ಲಾಂಚ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

ಒನ್‌ಪ್ಲಸ್‌ 10 ಪ್ರೊ 5G (OnePlus 10 Pro 5G) ಮೊಬೈಲ್ ನ ಕ್ಯಾಮೆರಾ ರಚನೆ

ಒನ್‌ಪ್ಲಸ್‌ನ ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಒನ್‌ಪ್ಲಸ್‌ 10 ಪ್ರೊ 5G (OnePlus 10 Pro 5G) ಮೊಬೈಲ್ ನ ಬ್ಯಾಟರಿ ಪವರ್

ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

OnePlus 10 Pro 5G Smartphone Price

ಒನ್‌ಪ್ಲಸ್‌ 10 ಪ್ರೊ 5G ಮೊಬೈಲ್ ಇ ಕಾಮರ್ಸ್‌ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಶೇ. 28% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 8GB RAM + 128GB ವೇರಿಯಂಟ್‌ ದರವು 47,689ರೂ. ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಇದರ ಜೊತೆಗೆ ಕೆಲವು ಬ್ಯಾಂಕ್‌ ಆಫರ್‌ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯ ಆಗಲಿದೆ.


Leave a Reply

Your email address will not be published. Required fields are marked *