rtgh

ಚೇತರಿಸಿಕೊಂಡ ಶುಭಮನ್ ಗಿಲ್ ಅಹಮದಾಬಾದ್‌ಗೆ; ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವರೇ?.

Shubman Gill has recovered from dengue fever

Spread the love

ಕ್ರೀಡಾ ಜಗತ್ತಿನಲ್ಲಿ, ಗೆಲುವುಗಳು ಮತ್ತು ಸವಾಲುಗಳು ಸಾಮಾನ್ಯವಾಗಿ ಜೊತೆಜೊತೆಯಲ್ಲಿ ಸಾಗುತ್ತವೆ. ಇತ್ತೀಚೆಗೆ, ಭಾರತದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರಾದ ಶುಭಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿರುವಾಗ ಕ್ರಿಕೆಟ್ ಜಗತ್ತು ತಬ್ಬಿಬ್ಬಾಯಿತು. ಆದಾಗ್ಯೂ, ಶುಭ್ಮನ್ ಗಿಲ್ ಗಮನಾರ್ಹ ಚೇತರಿಕೆ ಕಂಡಿದ್ದಾರೆ ಎಂಬುದು ಒಳ್ಳೆಯ ಸುದ್ದಿ.

Shubman Gill has recovered from dengue fever
Shubman Gill has recovered from dengue fever

ಡೆಂಗಿ ಜ್ವರದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಇಂದು (ಬುಧವಾರ) ಅಹಮದಾಬಾದ್‌ಗೆ ತೆರಳಲಿದ್ದಾರೆ. ಆದರೆ, ಶನಿವಾರ ಪಾಕಿಸ್ತಾನ ತಂಡದ ವಿರುದ್ಧ ನಡೆಯಲಿರುವ ವಿಶ್ವಕಪ್‌ ಪಂದ್ಯದಲ್ಲಿ ಕಣಕ್ಕಿಳಿಯುವರೇ ಎಂಬುದು ಇನ್ನೂ ಖಚಿತವಾಗಿಲ್ಲ.

ಭಾರತ ಕ್ರಿಕೆಟ್‌ ತಂಡ ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಸೆಣಸಾಟ ನಡೆಸುತ್ತಿದೆ.

‘ಶುಭಮನ್‌ ಗಿಲ್‌ ಸಂಪೂರ್ಣವಾಗಿ ಗುಣಮುಖರಾಗಿದ್ದು, ಚೆನ್ನೈನಿಂದ ಅಹಮದಾಬಾದ್‌ಗೆ ತೆರಳಲು ಸಜ್ಜಾಗಿದ್ದಾರೆ. ನಾಳೆ ಅವರು ಮೊಟೆರಾದಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳುವರೇ ಎಂಬುದು ಇನ್ನೂ ಖಚಿತವಾಗಿಲ್ಲ. ಅವರು ಚೇತರಿಸಿಕೊಂಡಿದ್ದರೂ, ಪಾಕಿಸ್ತಾನ ಎದುರು ಕಣಕ್ಕಿಳಿಯುವರೇ ಎಂಬುದು ಖಾತ್ರಿಯಾಗಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕಳೆದವಾರ ಗಿಲ್‌ ಅವರ ಪ್ಲೇಟ್‌ಲೆಟ್‌ ಪ್ರಮಾಣ 70 ಸಾವಿರಕ್ಕೆ ಇಳಿದಿತ್ತು. ಹೀಗಾಗಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ಲೇಟ್‌ಲೆಟ್‌ ಪ್ರಮಾಣ 1 ಲಕ್ಷಕ್ಕಿಂತ ಹೆಚ್ಚಾದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ವಿಶ್ವಕಪ್‌ ಟೂರ್ನಿಯಲ್ಲಿ ಗಿಲ್‌ ಈಗಾಗಲೇ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅಕ್ಟೋಬರ್‌ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯ ಹಾಗೂ ಇಂದು (ಅ.11) ನಡೆಯುತ್ತಿರುವ ಪಂದ್ಯದಿಂದ ಹೊರಗುಳಿದಿದ್ದಾರೆ.

ಗಿಲ್‌ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ಇಶಾನ್‌ ಕಿಶನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು.


Spread the love

Leave a Reply

Your email address will not be published. Required fields are marked *