rtgh

Ration Card: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ! ನಾಳೆ 1 ದಿನ ಹೊಸ ‘BPL, APL ಕಾರ್ಡ್’ ಗೆ ಅರ್ಜಿ ಸಲ್ಲಿಕೆಗೆ ಅವಕಾಶ.


Spread the love

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸರ್ಕಾರವು ಹೊಸ ಅವಕಾಶವನ್ನು ಪ್ರಕಟಿಸಿದೆ. ಈ ಉಪಕ್ರಮವು ಆಹಾರ ಧಾನ್ಯಗಳು ಮತ್ತು ಇತರ ಅಗತ್ಯಗಳ ವಿತರಣೆಯನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ, ಈ ಹಿಂದೆ ತಮ್ಮ ಪಡಿತರ ಕಾರ್ಡ್ ಸ್ಥಿತಿಯೊಂದಿಗೆ ಸವಾಲುಗಳನ್ನು ಎದುರಿಸಿದವರಿಗೆ ಬೆಂಬಲವನ್ನು ನೀಡುತ್ತದೆ. ಈ ಉತ್ತೇಜಕ ಅವಕಾಶದ ವಿವರಗಳನ್ನು ನಾವು ಅನ್ವೇಷಿಸುತ್ತೇವೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತೇವೆ.

Opportunity to apply for new ration card
Opportunity to apply for new ration card

ನಾಳೆ ಒಂದು ದಿನ ರಾಜ್ಯಾದ್ಯಂತ ಹೊಸ ‘BPL, APL ಕಾರ್ಡ್’ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಹೊಸ ರೇಷನ್ ಕಾರ್ಡ್ ಗೆ ಡಿಸೆಂಬರ್.3ರಂದು ರಾಜ್ಯಾಧ್ಯಂತ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ .ಕರ್ನಾಟಕ ಒನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇವುಗಳನ್ನು ಹೊರತುಪಡಿಸಿ ಬೇರೆ ಇನ್ಯಾವುದೇ ಆನ್ಲೈನ್ ಸೆಂಟರ್ಗಳಲ್ಲಿಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲೇ ಹೊಸ ಕಾರ್ಡ್ ವಿತರಣೆ ಮಾಡುವುದಾಗಿ ತಿಳಿಸಿದೆ.

ಅರ್ಜಿಸಲ್ಲಿಸಲು ಏನೆಲ್ಲಾ ದಾಖಲಾತಿ ಬೇಕು..?

1) ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ, ಗ್ರಾಮದ ಹೆಸರು.

2 )ಮನೆಯ ವಿದ್ಯುತ್ ಬಿಲ್

3) ಕುಟುಂಬದ ಸದಸ್ಯರ ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.

4) ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.

5) ಮೊಬೈಲ್ ನಂಬರ್

6)ನಿವಾಸದ ಪೂರ್ಣ ವಿಳಾಸ , ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ

7)ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು 6 ವರ್ಷ ಮೇಲ್ಪಟ್ಟವರಿಗೆ ಪ್ರಸಕ್ತ ಸಾಲಿನ ಜಾತಿ ಪ್ರಮಾಣಪತ್ರ ಅದು ಐದು ವರ್ಷಕ್ಕಿಂತ ಒಳಗೆ ಇರುವಂತ ದಾಖಲೆಗಳನ್ನು ನೀಡಬೇಕು .


Spread the love

Leave a Reply

Your email address will not be published. Required fields are marked *