rtgh

ಈರುಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆ.ದೀಪಾವಳಿ ಹಬ್ಬಕ್ಕೆ ಅಡುಗೆ ಮಾಡುವುದು ಬಹಳ ಕಷ್ಟ .

Record rise in onion prices

Spread the love

Record rise in onion prices
Record rise in onion prices

ಪ್ರಪಂಚದಾದ್ಯಂತದ ಅಡುಗೆಮನೆಗಳಲ್ಲಿ ಈರುಳ್ಳಿ ಪ್ರಧಾನವಾಗಿದೆ, ಲೆಕ್ಕವಿಲ್ಲದಷ್ಟು ಭಕ್ಷ್ಯಗಳಿಗೆ ಸುವಾಸನೆ ಮತ್ತು ವಿನ್ಯಾಸವನ್ನು ಸೇರಿಸುತ್ತದೆ. ಆದಾಗ್ಯೂ, ಇತ್ತೀಚಿನ ಮುಖ್ಯಾಂಶಗಳಲ್ಲಿ ಈರುಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆಯು ಪ್ರಾಬಲ್ಯ ಸಾಧಿಸಿದೆ, ಇದು ಗ್ರಾಹಕರು ಮತ್ತು ರೈತರನ್ನು ಸಮಾನವಾಗಿ ಅನುಭವಿಸುವಂತೆ ಮಾಡಿದೆ.

ಸದ್ಯ ದೇಶದಲ್ಲಿ ಈರುಳ್ಳಿ ಬೆಲೆ ಜನರ ನಿದ್ದೆಯನ್ನು ಕೆಡಿಸುತ್ತಿದೆ ಎನ್ನಬಹುದು. ಹೌದು, ಕಳೆದ ಎರಡು ವಾರದಿಂದ ಈರುಳ್ಳಿ ಬೆಲೆಯಲ್ಲಿ ಬಹುತೇಕ ಏರಿಕೆ ಆಗುತ್ತಲೇ ಇದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಜನರು ಟೊಮೇಟೊ ದರದ ಏರಿಕೆಯ ಬಗ್ಗೆ ಚಿಂತಿಸುವಂತಾಗಿದ್ದು, ಸದ್ಯ ಟೊಮೊಟೊ ದರ ಯಥಾಸ್ಥಿತಿ ತಲಿಪಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಇದೀಗ ಟೊಮೊಟೊ ದರ ಇಳಿಕೆ ಆಗಿದೆ ಎನ್ನುವ ಖುಷಿಯಲ್ಲಿದ್ದ ಜನತೆಗೆ ಈರುಳ್ಳಿ ದರ ಏರಿಕೆ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ನಿಜಕೂ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ ಎನ್ನಬಹುದು.

ಬೆಲೆ ಏರಿಕೆಯ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್
ಪ್ರಸ್ತುತ ದಿನ ನಿತ್ಯ ಬಳಕೆಯ ವಸ್ತುಗಳಿಂದ ಹಿಡಿದು ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ ಎನ್ನಬಹುದು. ಜನರು ಈರುಳ್ಳಿ ದರದ ಏರಿಕೆ ಕಂಡು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ದಿನದಿಂದ ಈರುಳ್ಳಿ ಬೆಲೆ ದ್ವಿಗುಣಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆಜಿಗೆ 120 ರಿಂದ 150 ರೂ. ತಲುಪುತ್ತಿದೆ. ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 30 ರಿಂದ 40 ರೂ. ಆಗಿತ್ತು. ಎರಡು ದಿನಗಳ ಹಿಂದೆ ದಿಡೀರ್ 80 ರಿಂದ 100 ರೂ. ತಲುಪಿದೆ.

ಈರುಳ್ಳಿ ಬೆಲೆಯ ಏರಿಕೆಗೆ ಕಾರಣವೇನು
ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಈರುಳ್ಳಿ ದರದ ಏರಿಕೆಯ ಕಾರಣದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಜನರು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊನೆಯ ಸ್ಟಾಕ್ ಅನ್ನು ಸಂಗ್ರಹಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇದು ಕೊರತೆಯನ್ನು ಸೃಷ್ಟಿಸಿದ್ದು, ಬೆಳೆಯನ್ನು ಹೆಚ್ಚಿಸುತ್ತಿದೆ ಎನ್ನಬಹುದು. ಇದೆ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆ ಕಂಡುಬಂದರೆ ಮುಂದಿನ ದಿನದಲ್ಲಿ ಈರುಳ್ಳಿ ದರ 120 ರಿಂದ 150 ರೂ. ತಲುಪುವಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

ಈರುಳ್ಳಿ ದರದ ಏರಿಕೆಯ ವಿವರ ಇಲ್ಲಿದೆ
ಈರುಳ್ಳಿಯನ್ನು ಸಗಟು ಮಾರುಕಟ್ಟೆಗಳಲ್ಲಿ ಪ್ರತಿ KG ಗೆ 20 ರಿಂದ 25 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ KG ಗೆ 35 ರಿಂದ 50 ರೂ. ಇತ್ತೀಚಿನ ಏರಿಕೆಯ ನಂತರ, ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಪ್ರತಿ KG ಗೆ 45 ರಿಂದ 50 ರೂ.ಗೆ ಏರಿದೆ. ಸದ್ಯ ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ಪ್ರತಿ KG ಗೆ 80 ರಿಂದ 100 ರೂ.ಗಳ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *