rtgh

Yuva Nidhi : ಪದವಿ ಮತ್ತು ಡಿಪ್ಲೋಮ ಆದವರೇ ಈ ದಾಖಲೆ ಸಿದ್ಧಪಡಿಸಿಕೊಳ್ಳಿ, ಈ ದಾಖಲೆ ಇದ್ದರೆ ಮಾತ್ರ ಹಣ ಜಮಾ.


ಯುವಕರನ್ನು ಸಬಲೀಕರಣಗೊಳಿಸಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮಹತ್ವದ ಕ್ರಮದಲ್ಲಿ, ಕರ್ನಾಟಕವು ಯುವ ಉದ್ಯಮಿಗಳಿಗೆ ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಆರ್ಥಿಕ ಉಪಕ್ರಮವಾದ “ಯುವ ನಿಧಿ” ಅನ್ನು ಪರಿಚಯಿಸಿದೆ. ಈ ರೋಮಾಂಚಕ ಬೆಳವಣಿಗೆಯನ್ನು ನಾವು ಅನ್ವೇಷಿಸುತ್ತಿರುವಾಗ, ಈ ಉಪಕ್ರಮವನ್ನು ನಿಯಂತ್ರಿಸುವ ನಿಯಮಗಳು ಮತ್ತು ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

rules and regulations of yuva nidhi in karnataka
rules and regulations of yuva nidhi in karnataka

2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯ್ನ್ನು ನೀಡುವುದಾಗಿ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದ್ದು, ಇನ್ನೇನು ಯುವ ನಿಧಿ (yuva Nidhi) ಅನುಷ್ಠಾನ ಕಾರ್ಯ ಮಾತ್ರ ಭಾಕಿ ಇದೆ. ಸದ್ಯ ಈ ಯುವ ನಿಧಿ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

ಇನ್ನು ಓದಿ : ಆಧಾರ್ ಕಾರ್ಡ್ ಉಚಿತ ʻನವೀಕರಣʼಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ! ಬೇಗ ಅಪ್ ಡೇಟ್ ಮಾಡಿಸಿ

ಯುವ ನಿಧಿ ಜಾರಿಗೆ ಸರ್ಕಾರದ ಗ್ರೀನ್ ಸಿಗ್ನಲ್
ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೀಗ ಈ ಯುವ ನಿಧಿ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ಲಾಭವನ್ನು ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ. ಈ ದಾಖಲೆಗಳು ಇಲ್ಲವಾದರೆ ನಿಮ್ಮ ಖಾತೆಗೆ ಯುವನಿಧಿ ಯೋಜನೆಯ ಹಣ ಜಮಾ ಆಗುವುದಿಲ್ಲ.

ಈ ತಿಂಗಳಿನಲ್ಲಿ ನಿರುದ್ಯೋಗ ಭತ್ಯೆಯ ಹಣ ಜಮಾ
ರಾಜ್ಯದಲ್ಲಿ ಜನವರಿ ತಿಂಗಳಿನಲ್ಲಿ ನಿರುದ್ಯೋಗ ಭತ್ಯೆಯಾದ ಯುವನಿಧಿ ಯೋಜನೆ ಜಾರಿಯಾಗಲಿದೆ ಎಂದು ಸಿಎಂ Siddaramaiah ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

“ಈ ಬಾರಿಯ ಬಜೆಟ್ ನಲ್ಲಿ ನಮ್ಮ ಸರಕಾರ ಘೋಷಿಸಿರುವ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ 4 ಗ್ಯಾರಂಟಿ ಯೋಜನೆ ಜಾರಿಯಾಗಿದ್ದು, ಜನವರಿಯಲ್ಲಿ ಯುವ ನಿಧಿ ಜಾರಿಯಾಗಲಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಪದವಿ ಮತ್ತು ಡಿಪ್ಲೋಮ ಆದವರು ಈ ದಾಖಲೆ ಸಿದ್ಧಪಡಿಸಿಕೊಂಡು, ನಿರುದ್ಯೋಗ ಭತ್ಯೆಯ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಿ.

ಪದವಿ ಮತ್ತು ಡಿಪ್ಲೋಮ ಆದವರೇ ಈ ದಾಖಲೆ ಸಿದ್ಧಪಡಿಸಿಕೊಳ್ಳಿ
•ಆಧಾರ್ ಕಾರ್ಡ್
•ಆದಾಯ ಪ್ರಮಾಣಪತ್ರ
•ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
•ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ
•ಮೊಬೈಲ್ ಸಂಖ್ಯೆ
•ಇಮೈಲ್ ಐಡಿ
•ಭಾವಚಿತ್ರ
•ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ


Leave a Reply

Your email address will not be published. Required fields are marked *