ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ ಏನೆಂದರೆ ಸರ್ಕಾರವು ಜನದಟ್ಟಣೆ ಹೆಚ್ಚಿರುವುದರಿಂದ ಕೆಲವೊಂದು ರೈಲುಗಳನ್ನು ಕೆಲವೊಂದು ಪ್ರದೇಶಗಳಿಗೆ ಬಿಡಲಾಗಿದೆ ಬನ್ನಿ ನಾವು ಇದರ ಬಗ್ಗೆ ಕಂಪ್ಲೀಟ್ ಡಿಟನ್ನು ನೀಡಲಿದ್ದೇವೆ.
ಹೌದು ಸ್ನೇಹಿತರೆ, ಸರ್ಕಾರವು ಕೆಲವೊಂದು ರೈಲುಗಳನ್ನು ಬಿಟ್ಟಿದ್ದು ಇದರಿಂದ ಜನತೆಗೆ ತುಂಬಾ ಅನುಕೂಲವಾಗಿದೆ ಏಕೆಂದರೆ ಈಗಿನ ಬೆಲೆಯಲ್ಲಿ ಪ್ರೈವೇಟ್ ಬಸ್ಸುಗಳು ರೇಟ್ ಕೂಡ ತುಂಬಾ ಜಾಸ್ತಿಯಾಗಿದೆ ಒಂದು ಪ್ರಶ್ನೆಯಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ತುಂಬಾ ಹಣವನ್ನು ಕೇಳುತ್ತಾರೆ ಇದರಿಂದ ರೈಲು ಒಂದು ಸುಗಮ ಹಾಗೂ ಕಡಿಮೆ ವೆಚ್ಚದಲ್ಲಿ ನಾವು ಬೇರೆ ಸ್ಥಳಕ್ಕೆ ತಲುಪಬಹುದಾಗಿದೆ ಮತ್ತು ಹೆಣ್ಣು ಮಕ್ಕಳಿಗೆ ಇದು ತುಂಬಾ ಅನುಕೂಲವಾಗಿದೆ.
ನೈರುತ್ಯ ರೈಲ್ವೆಗೆ ಸಂಬಂಧಿಸಿದಂತೆ ಬೇಸಿಗೆ ಕಾಲದ ಹೆಚ್ಚುವರಿ ದಟ್ಟಣೆ ನಿಭಾಯಿಸಲು 24 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿತ್ತು. ಸದ್ಯ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆ ಆ ರೈಲುಗಳ ಓಡಾಟ ಕೊನೆಯ ದಿನವನ್ನು ವಿಸ್ತರಣೆ ಮಾಡಲಾಗಿದೆ. ಯಾವೆಲ್ಲಾ ರೈಲು? ಎಲ್ಲಿಯವರೆಗೂ ವಿಸ್ತರಣೆ ಮಾಡಲಾಗುತ್ತಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು: ಪ್ರಯಾಣಿಕರ ದಟ್ಟಣೆ ಹಿನ್ನೆಲೆ ಕರ್ನಾಟಕದಲ್ಲಿ ಸಂಚರಿಸುವ ರಾಜ್ಯ, ಅಂತರ್ ರಾಜ್ಯಕ್ಕೆ ಸಂಬಂಧಿಸಿದ 24 ರೈಲುಗಳ ಓಡಾಟ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಬೇಸಿಗೆ ಅವಧಿಯಲ್ಲಿ ರಾಜ್ಯದ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳನ್ನು ಆರಂಭಿಸಲಾಗಿತ್ತು. ಈ ರೈಲುಗಳು ತಾತ್ಕಾಲಿಕ ಅವಧಿಗೆ ಸಂಚಾರ ನಡೆಸುತ್ತಿದ್ದವು. ಸದ್ಯ ಪ್ರಯಾಣಿಕರ ಬೇಡಿಕೆ ಹಾಗೂ ಸಂಚಾರ ದಟ್ಟಣೆಯಿಂದ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.
ಯಾವೆಲ್ಲಾ ರೈಲುಗಳ ಸೇವೆ ವಿಸ್ತರಣೆ?
ರೈಲು ಸಂಖ್ಯೆ | ರೈಲಿನ ಹೆಸರು | ಎಲ್ಲಿಯವರೆಗೂ ವಿಸ್ತರಣೆ |
06590 | ಬೀದರ್-SMVT ಬೆಂಗಳೂರು | 17.06.2024 |
06589 | SMVT ಬೆಂಗಳೂರು-ಬೀದರ್ | 16.06.2024 |
06564 | ಮಾಲ್ಡಾ ಟೌನ್-SMVT ಬೆಂಗಳೂರು | 12.06.2024 |
06563 | SMVT ಬೆಂಗಳೂರು-ಮಾಲ್ಡಾ ಟೌನ್ | 09.06.2024 |
06218 | ಗಯಾ-ಯಶವಂತಪುರ | 17.06.2024 |
06217 | ಯಶವಂತಪುರ-ಗಯಾ | 15.06.2024 |
06570 | ಗುವಾಹಟಿ-SMVT ಬೆಂಗಳೂರು | 12.06.2024 |
06569 | SMVT ಬೆಂಗಳೂರು-ಗುವಹಾಟಿ | 09.06.2024 |
06586 | ಹೌರಾ-SMVT ಬೆಂಗಳೂರು | 15.06.2024 |
06585 | SMVT ಬೆಂಗಳೂರು-ಹೌರಾ | 14.06.2024 |
06508 | ಖರಗ್‌ಪುರ-SMVT ಬೆಂಗಳೂರು | 17.06.2024 |
06507 | SMVT ಬೆಂಗಳೂರು-ಖರಗ್‌ಪುರ | 14.06.2024 |
06222 | ಮುಜಫರ್‌ಪುರ-ಮೈಸೂರು | 13.06.2024 |
06221 | ಮೈಸೂರು- ಮುಜಫರ್‌ಪುರ | 10.06.2024 |
06282 | ಅಜ್ಮೀರ್-ಮೈಸೂರು | 18.06.2024 |
06281 | ಮೈಸೂರು-ಅಜ್ಮೀರ್ | 15.06.2024 |
06226 | ಯೋಗ ನಗರಿ ರಿಷಿಕೇಶ-ಎಸ್‌ಎಸ್‌ಎಸ್ ಹುಬ್ಬಳ್ಳಿ | 13.06.2024 |
06225 | ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ | 10.06.2024 |
07316 | ಮುಜಫರ್‌ಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ | 14.06.2024 |
07315 | ಹುಬ್ಬಳ್ಳಿ-ಮುಜಫರ್‌ಪುರ | 11.06.2024 |
07312 | ಅಹಮದಾಬಾದ್- ಹುಬ್ಬಳ್ಳಿ | 17.06.2024 |
07311 | ಹುಬ್ಬಳ್ಳಿ-ಅಹಮದಾಬಾದ್ | 16.06.2024 |
07306 | ಗೋಮತಿ ನಗರ- ಹುಬ್ಬಳ್ಳಿ | 18.06.2024 |
07305 | ಹುಬ್ಬಳ್ಳಿ-ಗೋಮತಿ ನಗರ | 15.06.2024 |
ರೈಲ್ವೆಯಿಂದ 22 ಮಕ್ಕಳ ರಕ್ಷಣೆ
ನೈರುತ್ಯ ರೈಲ್ವೆ ಸುರಕ್ಷತಾ ದಳ ‘ನನ್ಹೆ ಫರಿಸ್ತೆಹ್’ ಯೋಧಿಜಧಿನೆಯಡಿ ಏಪ್ರಿಲ್ ತಿಂಗಳಲ್ಲಿನಾಲ್ವಧಿರು ಬಾಲಕಿಯರೂ ಸೇರಿದಂತೆ 22 ಮಕ್ಕಳನ್ನು ರಕ್ಷಣೆ ಮಾಡಿದೆ. ವಿವಿಧ ಕಾರಣಗಳಿಂದ ತಮ್ಮ ಕುಟಂಬದಿಂದ ಬೇರ್ಪಟ್ಟ ನಾನಾ ರಾಜ್ಯಗಳ 18 ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರ ಕುಟುಂಬಗಳಿಗೆ ಸುರಕ್ಷಿತವಾಗಿ ಕಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ‘ಆಪರೇಷನ್ ಉಪಲಬ್ದ್’ ಯೋಜನೆಯಡಿ ಕಾಯ್ದಿರಿಸುವ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ 24 ದಲ್ಲಾಳಿಗಳನ್ನು ಬಂಧಿಸಿ, 2.88 ಲಕ್ಷ ರೂ. ಮೌಲ್ಯದ 94 ಲೈವ್ ಕಾಯ್ದಿರಿಸಿದ ಟಿಕೆಟ್, 10.79 ಲಕ್ಷ ರೂ. ಮೌಲ್ಯದ ಬಳಸಿದ ಟಿಕೆಟ್ ಹಾಗೂ ‘ಆಪರೇಷನ್ ನಾರ್ಕೋಸ್’ ಯೋಜನೆಯಡಿ ಆರು ಪ್ರಕರಣಗಳಿಂದ 49.90 ಲಕ್ಷ ರೂ.ಮೌಲ್ಯದ 50,885 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ