ಗುಣಮಟ್ಟದ ಆರೋಗ್ಯ ಸೇವೆಯ ಪ್ರವೇಶವು ಮೂಲಭೂತ ಹಕ್ಕಾಗಿ ಉಳಿದಿರುವ ಜಗತ್ತಿನಲ್ಲಿ, ಆರೋಗ್ಯದ ಅಸಮಾನತೆಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಸರ್ಕಾರದ ಉಪಕ್ರಮಗಳನ್ನು ನೋಡುವುದು ಹೃದಯವಂತವಾಗಿದೆ. ಅಪ್ಪು ಹೃದಯ ಜ್ಯೋತಿ ಯೋಜನೆಯು ಎಪಿಎಲ್ (ಬಡತನ ರೇಖೆಯ ಮೇಲೆ) ಮತ್ತು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್ ಹೊಂದಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ನಾಗರಿಕರ ಜೀವನವನ್ನು ಬೆಳಗಿಸಲು ವಿನ್ಯಾಸಗೊಳಿಸಲಾದ ಅಂತಹ ಭರವಸೆಯ ದಾರಿದೀಪವಾಗಿದೆ.
ಸದ್ಯ ರಾಜ್ಯ ಸರ್ಕಾರ ಜನರಿಗೆ ಒಂದರ ಮೇಲೆ ಮತ್ತೊಂದು ಹೊಸ ಹೊಸ ಯೋಜನೆಯನ್ನು ಪರಿಚಯಿಸುತ್ತಲೇ ಇದೆ. ಜನಸಮಾನ್ಯರು ರಾಜ್ಯ ಸರ್ಕಾರದ ಯೋಜನೆಗಳ ಸ್ವಭಾವನ್ನು ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಜನರಿಗಾಗಿ ಆರೋಗ್ಯ ಯೋಜನೆಗಳು ರೂಪುಗೊಂಡಿದೆ. ಬಡವರಿಗೆ ತಮ್ಮ ಆರೋಗ್ಯದಲ್ಲಿ ಯಾವುದೇ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ವಿವಿಧ ಆರೋಗ್ಯ ಯೋಜನೆಯನ್ನು ಪರಿಚಯಿಸಿದೆ.
ಅಪ್ಪುವಿನ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ಯೋಜನೆ ಜಾರಿ
ಇನ್ನು ಇತ್ತೀಚೆಗಂತೂ ಹೃದಯಾಘಾತದಿಂದ ಮೃತಾ ಪಡುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ಹಿಂದೆಲ್ಲ ವೃದ್ದರು ಹೃದಯಾಘಾತದಿಂದ ಮೃತ ಪಡುತ್ತಿದ್ದಾರೆ ಸದ್ಯ ಸಾನ್ನ ಮಕ್ಕಳಿಂದ ಹಿಡಿದುಯುವಕ ಯುವತಿಯರಿಗೂ ಕೂಡ ಅತಿ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತ ಹೆಚ್ಚುತ್ತಿದೆ.
ಇನ್ನು ರಾಜ್ಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಮೃತ ಪಟ್ಟ ನಂತರದ ದಿನದಿಂದ ಎಲ್ಲರಲ್ಲೂ ಹೃದಯಾಘಾತದ ಭೀತಿ ಹೆಚ್ಚಾಗುತ್ತಿದೆ ಎನ್ನಬಹುದು. ಸದ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಯೋಜನೆ ಹೂಡಿದೆ. ಈ ಯೋಜನೆಯಡಿ ರಾಜ್ಯದ ಜನತೆಯ ಆರೋಗ್ಯವನ್ನು ಕಾಪಾಡುವ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಈ ನೂತನ ಯೋಜನೆ ಯಾವುದು? ಈ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ತಿಳಿಯೋಣ.
ಇನ್ನು ಓದಿ : ಈರುಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆ.ದೀಪಾವಳಿ ಹಬ್ಬಕ್ಕೆ ಅಡುಗೆ ಮಾಡುವುದು ಬಹಳ ಕಷ್ಟ .
ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ
ರಾಜ್ಯದಲ್ಲಿ “ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ” ಯೋಜನೆನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಹಬ್ ಅಂಡ್ ಸ್ಫೋಕ್ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳಗಳನ್ನು ಅಳವಡಿಸುವ ಮೂಲಕ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಹಬ್ ಅಂಡ್ ಸ್ಪೋಕ್ ಮಾದರಿ ಹೃದಯಾಘಾತವನ್ನು ತಡೆಯಲು ಮುಖ್ಯವಾಗಿ ಸಹಾಯವಾಗಲಿದೆ. ಯಾರಿಗೆ ಎದೆನೋವು ಕಾಣಿಸಿಕೊಂಡರು ಹತ್ತಿರದ ಸ್ಪೋಕ್ ಕೇಂದ್ರಕೆ ಭೇಟಿ ನೀಡುವ ಮೂಲಕ ಉಚಿತವಾಗಿ ECG ಮಾಡಿಸಿಕೊಳ್ಳಬಹುದು.
APL ಮತ್ತು BPL ಕಾರ್ಡ್ ಇದ್ದವರಿಗೆ ಇನ್ನುಮುಂದೆ ಆಸ್ಪತ್ರೆಯಲ್ಲಿ ಈ ಸೇವೆ ಉಚಿತ
ಈ ಯೋಜನೆಯಡಿ ಸ್ಪೆಷಾಲಿಟಿ ಆಸ್ಪತ್ರೆಗಳ ಹಬ್ ಕೇಂದ್ರಗಳಲ್ಲೂ ಕೂಡ BPL ರೇಷನ್ ಕಾರ್ಡ್ ಹೊಂದಿರುವವರು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇನ್ನು APL ಕಾರ್ಡ್ ಹೊಂದಿರುವವರು ಆಯುಷ್ಮನ್ ಭಾರತ್ ಕಾರ್ಡ್ ನ್ ಅಡಿಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯುಬಹುದು. ಈ ಯೋಜನೆಯಡಿ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಇನ್ನೇನು ಶೀಘ್ರದಲ್ಲೇ ರಾಜ್ಯ ಸರ್ಕಾರ ಈ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ.