rtgh

ಫೆ.26, 27 ರಂದು ರಾಜ್ಯಮಟ್ಟದ ಉದ್ಯೋಗ ಮೇಳ! ಕೂಡಲೇ ಆನ್ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಿ


ಬೆಂಗಳೂರು : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.26 ಮತ್ತು 27 ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಅಯೋಜಿಸಲಾಗಿದ್ದು, ನಿರುದ್ಯೋಗಿ ಯುವಕರು ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Job Mela

ಈ ಮೇಳದಲ್ಲಿ ಸುಮಾರು 500 ಕಂಪನಿಗಳು ಭಾಗವಹಿಸುತ್ತಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿವೆ. ಈ ಮೇಳದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಎಲ್ಲಾ ವಿದ್ಯಾರ್ಹತೆಯ ವಿದ್ಯಾರ್ಥಿಗಳು ಜೊತೆಗೆ ಖಾಸಗಿ ವಲಯದ ಯಾವುದೇ ನಿಯೋಜಕರು (ಕಂಪನಿಗಳು) ಭಾಗವಹಿಸಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸುವ ಸಲುವಾಗಿ ವಿವಿಧ ಇಲಾಖೆಗಳ (ಉನ್ನತ ಶಿಕ್ಷಣ, ಬೃಹತ್ ಕೈಗಾರಿಕೆ, ಕೌಶಲ್ಯಾಭಿವೃದ್ದಿ ಇಲಾಖೆ, ಯುವಸಬಲೀಕರಣ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇತ್ಯಾದಿಗಳು) ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಆ ಸಮಿತಿ ಮಾರ್ಗದರ್ಶನದಂತೆ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಅಯೋಜಿಸಲಾಗಿದೆ.

ಇದನ್ನೂ ಸಹ ಓದಿ: ಮಹಿಳೆಯರಿಗೆ ಹೊಡಿತು ಜಾಕ್‌ಪಾಟ್: ಗೃಹಲಕ್ಷ್ಮಿಯರ ಖಾತೆಗೆ ಇನ್ಮುಂದೆ 4 ಸಾವಿರ ಬರಲಿದೆ!!

ನೋಂದಣಿ ಹೇಗೆ..?

ಅಭ್ಯರ್ಥಿಗಳು ಹಾಗೂ ಕಂಪನಿಗಳು ಈ https://udyogamela.skillconnect.kaushalkar.com/ ವೆಬ್ಸೈಟ್ನಲ್ಲಿ ಮುಂಚಿತವಾಯೇ ನೋಂದಣಿ ಮಾಡಿಕೊಳ್ಳಬಹುದು.

1) https://skillconnect.kaushalkar.com/new ಭೇಟಿ ನೀಡಿ
ಹಂತ 2 : ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ
ಹಂತ 3 : ಉದ್ಯೋಗ ಮೇಳ ಎನ್ನುವುದರ ಮೇಲೆ ಕ್ಲಿಕ್ ಮಾಡಿ
ಹಂತ 4: ಅಭ್ಯರ್ಥಿ ನೋಂದಣಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ
ಹಂತ 5 : ಅರ್ಜಿಯನ್ನು‌ ಓದಿ, ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿ
ಉದ್ಯೋಗ ಮೇಳ ನಡೆಯುವ ಸ್ಥಳ : ಅರಮನೆ ಮೈದಾನ, ಬೆಂಗಳೂರು

ಹೆಚ್ಚಿನ ಮಾಹಿತಿ ತಿಳಿಯಲು ಆಯಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಸಂಪರ್ಕಿಸಬಹುದು ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ರಾಜ್ಯ ಸರ್ಕಾರದ ‘ಆಶಾಕಿರಣ’ ಯೋಜನೆ: 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ.!

ರೈತರಿಗೆ ರಾಜ್ಯ ಬಜೆಟ್‌ ನಿಂದ ಭರ್ಜರಿ ಕೊಡುಗೆ!! ಕೃಷಿ ಅಭಿವೃದ್ಧಿಗಾಗಿ ವಿನೂತನ ಯೋಜನೆಗಳ ಘೋಷಣೆ!


Leave a Reply

Your email address will not be published. Required fields are marked *