rtgh

ಗಣಿಕೆ ಸೊಪ್ಪ, ಕಾಕಿ ಸೊಪ್ಪು ಇದರ ಪ್ರಯೋಜನಗಳು ಅನೇಕ ಖಾಯಿಲೆಗೆ ರಾಮ ಬಾಣ. ಗಣಿಕೆ ಹಣ್ಣು ಸಿಕ್ಕರೆ ಇವತ್ತೆ ತಿನ್ನಿ


ganike soppu in kannada
ganike soppu in kannada

ಕಾಕಿ ಸೊಪ್ಪು, ಗಣಿಕೆ ಸೊಪ್ಪ, ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್

ಇಂಗ್ಲಿಷ್ ನಲ್ಲಿ ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್ ಎಂದು ಕರೆಯಲಾಗುವ ಮಾನತಕ್ಕಲ್ಲಿ ತನ್ನ ಔಷಧೀಯ ಮೌಲ್ಯದಿಂದ ಮನೆಮದ್ದು ಎಂದು ಹೆಸರುವಾಸಿಯಾಗಿದೆ.ಇದನ್ನು ಕನ್ನಡದಲ್ಲಿ ಕಾಕೆ ಹಣ್ಣು, ಗಣಿಕೆ ಸೊಪ್ಪು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.

ಪಿತ್ತಕೋಶ ಕ್ಯಾನ್ಸರ್ ಚಿಕಿತ್ಸೆಗೆ ಗಣಿಕೆ ಸೊಪ್ಪಿನಿಂದ ಪ್ರತ್ಯೇಕಿಸಲಾದ ಸಂಯುಕ್ತವನ್ನು ಇದೀಗ ಅಮೆರಿಕದ ಪುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ಗಮನಿಸಿದ್ದು, ಇದನ್ನು ಪತ್ತೆ ಹಚ್ಚಿದ ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ವಿಜ್ಞಾನಿಗಳ ತಂಡಕ್ಕೆ ಧನ್ಯವಾದ ಸಲ್ಲಿಸಿದೆ.

ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ಹಿರಿಯ ವಿಜ್ಞಾನಿ ಡಾ. ರೂಬಿ ಜಾನ್ ಅಂಟೊ ಮತ್ತು ಆಕೆಯ ವಿದ್ಯಾರ್ಥಿ ಡಾ. ಲಕ್ಷ್ಮಿ ಆರ್ ನಾಥ್, ಗಣಿಕೆ ಸೊಪ್ಪಿನಲ್ಲಿರುವ ಔಷಧ ಅಂಶ ಉಟ್ರೋಸೈಡ್-ಬಿನ್ನು ಕಂಡುಹಿಡಿದಿದ್ದಾರೆ.ಪ್ರಸ್ತುತ ಪಿತ್ತಕೋಶ ಕ್ಯಾನ್ಸರ್ ಗಾಗಿ ಮಾತ್ರ ಈ ಔಷಧ ಬಳಸಲು ಎಫ್ ಡಿಎ ಅನುಮೋದನೆ ನೀಡಿದೆ. ನಾವು ಅಭಿವೃದ್ಧಿಪಡಿಸಿದ ಸಂಯುಕ್ತದಲ್ಲಿ ಒಂದಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. 

ಪಿತ್ತಕೋಶ ಕ್ಯಾನ್ಸರ್ ಸೇರಿದಂತೆ ಪಿತ್ತಕೋಶ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಂಶೋಧನೆಯು ಪ್ರಮುಖ ಪ್ರಗತಿಯಾಗಿದೆ ಎಂದು ಆರ್ ಜಿ ಸಿಬಿ ನಿರ್ದೇಶಕ ಡಾ. ಚಂದ್ರಬಾಸ್ ನಾರಾಯಣ ಹೇಳಿದ್ದಾರೆ. ಪಿತ್ತಕೋಶ ಕಾಯಿಲೆಯಿಂದ ವಾರ್ಷಿಕವಾಗಿ ಅಂದಾಜು 8 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದು, ಪ್ರತಿ ವರ್ಷ 9 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಗಣಿಕೆ ಸೊಪ್ಪ ಪ್ರಯೋಜನಗಳು

-ಮುಟ್ಟಿನ ಸಮಯದಲ್ಲಿ ಅರ್ಧ ಕಪ್‌ ಗಣಿಕೆ ಸೊಪ್ಪಿನ ರಸ ಸೇವಿಸಿದರೆ ಈ ಸಮಯದಲ್ಲಿ ಬರುವ ಹೊಟ್ಟೆ ನೋವು ಶಮನವಾಗುತ್ತದೆ.

ಗಣಿಕೆ ಸೊಪ್ಪನ್ನು ಮಜ್ಜಿಗೆ ಜತೆ ಸೇವಿಸಿದರೆ ಚರ್ಮದ ತುರಿಕೆ ಗಂದೆಗಳು ಮತ್ತು ಉರಿ ಕಡಿಮೆಯಾಗುತ್ತವೆ.

-ದೇಹದಲ್ಲಿ ನೀರು ತುಂಬಿ ಊತವಿದ್ದರೆ ಗಣಿಕೆ ಸೊಪ್ಪಿನ ಕಷಾಯ ಸೇವಿಸಿದರೆ ದೇಹದ ಊತ ಕಡಿಮೆಯಾಗುತ್ತದೆ.

-ಸರ್ಪಸುತ್ತು ಆಗಿರುವ ಜಾಗಕ್ಕೆ ಗಣಿಕೆ ಸೊಪ್ಪಿನ ಪೇಸ್ಟ್‌ ಗೆ ತುಪ್ಪ ಬೆರೆಸಿ ಹಚ್ಚಿದರೆ ಉರಿ, ನೋವು ಕಡಿಮೆಯಾಗುತ್ತವೆ.

-ಗಣಿಕೆ ಹಣ್ಣುಗಳ ಬೀಜಗಳಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ತಿಕ್ಕಿದರೆ ಕಲೆಗಳು ನಿವಾರಣೆಯಾಗುತ್ತವೆ.

-ಗಾಯ ಅಥವಾ ಹುಣ್ಣಾಗಿದ್ದರೆ ಗಣಿಕೆ ಸೊಪ್ಪಿನ ಕಷಾಯವನ್ನು ಹತ್ತಿಯಲ್ಲಿ ಅದ್ದಿ ಗಾಯದ ಮೇಲೆ ಇಟ್ಟರೆ ಗಾಯ ಬೇಗ ಗುಣವಾಗುತ್ತದೆ.

-ಗಣಿಕೆ ಸೊಪ್ಪನ್ನು ಬಾಯಲ್ಲಿ ಇಟ್ಟುಕೊಂಡು ಜಗಿದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

-ಗಣಿಕೆ ಹಣ್ಣಿನ ತಿರುಳನ್ನು ನಿಯಮಿತವಾಗಿ ಸೇವಿಸಿದರೆ ಆಸ್ತಮಾ ಮತ್ತು ಹೆಚ್ಚು ಬಾಯಾರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

-ರಿಂಗ್‌ ವರ್ಮ್‌(ಹುಳು ಕಡ್ಡಿ) ಇದ್ದರೆ ಗಣಿಕೆ ಹಣ್ಣಿನ ಪೇಸ್ಟ್‌ ಅನ್ನು ಆ ಜಾಗಕ್ಕೆ ಲೇಪ ಮಾಡಿದರೆ ಗುಣವಾಗುತ್ತದೆ.

ಗಣಿಕೆ ಸೊಪ್ಪನ್ನು ಮಜ್ಜಿಗೆ ಜತೆ ಸೇವಿಸಿದರೆ ಚರ್ಮದ ತುರಿಕೆ ಗಂದೆಗಳು ಮತ್ತು ಉರಿ ಕಡಿಮೆಯಾಗುತ್ತವೆ…


Leave a Reply

Your email address will not be published. Required fields are marked *