ಹಲೋ ಸ್ನೇಹಿತರೆ ನಿಮಗೆ ಗೊತ್ತಿರುವಂತೆ ಈ ವರ್ಷ ಬರಗಾಲವಾಗಿದೆ ಏಕೆಂದರೆ ಮಳೆಯ ಅಭಾವದಿಂದಾಗಿ ರೈತರು ಕಂಗೆಟ್ಟಿದ್ದು ರೈತರು ಬೆಳೆಯುವ ಉತ್ಪನ್ನಗಳ ಇಳುವರಿ ಕೂಡ ಕಡಿಮೆಯಾಗಿದೆ ಹೀಗಾಗಿ ದೇಶದಲ್ಲಿ ಎಲ್ಲಾ ಉತ್ಪನ್ನಗಳ ಬೆಲೆಯು ಜಾಸ್ತಿಯಾಗಿದೆ ಅದರಲ್ಲಿ ಮೆಣಸಿನಕಾಯಿ ಕೂಡ ಒಂದು ಬನ್ನಿ ಈ ಲೇಖನದಲ್ಲಿ ನಾವು ನಿಮಗೆ ಕಂಪ್ಲೀಟ್ ಡೀಟೇಲ್ಸ್ ನೀಡಲಿದ್ದೇವೆ.
ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ಇಳುವರಿಯು ಕೂಡ ಕಡಿಮೆ ಆಗಿ ಮೆಣಸಿನಕಾಯಿಯ ಬೆಲೆ ಗಗನಕ್ಕೇರಿದೆ. ಈ ಮೂಲಕ ಗ್ರಾಹಕರು ಸಹ ಕಂಗಾಲಾಗಿದ್ದಾರೆ.
ಬಿಸಿಲಿನ ತೀವ್ರತೆಯಿಂದ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಗಳ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿರುವ ಹಿನ್ನೆಲೆ ಪೂರೈಕೆಯಾಗಿದೆ ಕಡಿಮೆಯಾಗಿದೆ. ಇದರಿಂದಾಗಿಯೇ ಸಹಜವಾಗಿ ತರಕಾರಿಗಳ ಬೆಲೆಯು ಏರಿಕೆಯನ್ನು ಕಂಡಿದೆ.
ಇನ್ನು ಬೀನ್ಸ್ ಗಳು, ಗೆಡ್ಡೆಕೋಸು ಮತ್ತು ಬೀಟ್ರೂಟ್ ಹಾಗೂ ಹೀರೇಕಾಯಿ ಮುಂದಾದ ಎಲ್ಲಾ ತರಕಾರಿಗಳ ದರವೂ ಏರಿಕೆ ಆಗಿದೆ. ಅದರ ಜೊತೆ ಹಸಿ ಮೆಣಸಿನಕಾಯಿ ರೇಟ್ ಸಹ ಹೆಚ್ಚಳವಾಗಿದೆ. ಕಳೆದ ವಾರ 60 ರಿಂ 80 ರೂಪಾಯಿ ಇದ್ದ ಮೆಣಸಿನಕಾಯಿ ಬೆಲೆ, ಈ ವಾರ ದುಬಾರಿಯಾಗಿದೆ. 120 ರೂಪಾಯಿ ತಲುಪಿದೆ. ಕೊಳ್ಳುವಾಗಲೇ ಗ್ರಾಹಕರಿಗೆ ಖಾರವಾಗಿದೆ.
ಇದೇ ರೀತಿ ರಾಜ್ಯದ ಅನೇಕ ಭಾಗಗಳಲ್ಲಿ ಬಿಸಿಲು ಮುಂದುವರೆದರೆ ತರಕಾರಿ ರೇಟ್ ಇನ್ನೂ ಹೆಚ್ಚಳವಾಗಲಿದೆ. ಸದ್ಯ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬೀನ್ಸ್ ಬೆಲೆಯು ಕೆಜಿಗೆ 250 ರೂಪಾಯಿಯ ಗಡಿ ದಾಟಿದೆ. ಉಳಿದ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಇನ್ನು ಬೆಂಗಳೂರಲ್ಲಿ ಸದ್ಯ ಉತ್ತಮವಾಗಿ ಮಳೆಯಾಗುತ್ತಿದೆ. ಕಳೆದ ವಾರ ಎಳನೀರು ಬೆಲೆಯೂ ಸಹ ಹೆಚ್ಚಾಗಿತ್ತು. ಈಗಲೂ ಅನೇಕ ಕಡೆ 50 ರೂಪಾಯಿಗೆ ಒಂದು ಎಳನೀರು ಮಾರಾಟವಾಗುತ್ತಿದೆ.
ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿ ಹೋಗ್ತಾ ಇದ್ದಾರೆ. ಒಂದೆಡೆ ಬಿಸಿಲು ಸುಡ್ತಾ ಇದ್ದರೆ ಇನ್ನೊಂದೆಡೆ ಜೇಬು ಸುಡ್ತಿದೆ ಎಂದು ಚಿಂತೆ ಪಡುತ್ತಿದ್ದಾರೆ.
ಇತ್ತೀಚಿನ ಕೆಲವು ಕೃಷಿ ಉತ್ಪನ್ನಗಳ ಧಾರಣೆಗಳು:
ರಾಜ್ಯಮಟ್ಟದ ದೈನಂದಿನ ವರದಿ Click Here
ಮಾರುಕಟ್ಟೆವಾರು ದೈನಂದಿನ ವರದಿ Click Here