ಸ್ನೇಹಿತರೆ ನಿಮಗೆ ಗೊತ್ತಿರುವಂತೆ ಗೃಹಲಕ್ಷ್ಮಿ ಯೋಜನೆಯು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಒಂದು ಯೋಜನೆಯಾಗಿದೆ ಈ ಯೋಜನೆಯಲ್ಲಿ ಹಲವಾರು ಮಹಿಳೆಯರು ಸೌಲಭ್ಯವನ್ನು ಪಡೆದಿದ್ದಾರೆ ಇದೀಗ ಈ ಒಂದು ಯೋಜನೆಗೆ ಹೊಸ ಲಿಂಕನ್ನು ಬಿಡುಗಡೆ ಮಾಡಲಾಗಿದೆ ಏಕೆಂದರೆ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಜಮಯಾಗುವುದರ ಬಗ್ಗೆ ತಿಳಿದುಕೊಳ್ಳಲು ಈ ಒಂದು ಹೊಸ ಲಿಂಕನ್ನು ನೀಡಲಾಗಿದೆ ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಹೊಸ ಲಿಂಕ್ ಬಿಡುಗಡೆ ಮಾಡಿದ್ದು ನೀವು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಸ್ಟೇಟಸ್ ತಿಳಿಯಬಹುದು. ಅದರಲ್ಲೂ ಮೊಬೈಲ್ ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಮನೆಯಲ್ಲಿಯೇ ಕುಳಿತು ಈ ಕೆಲಸ ಮಾಡಬಹುದು.
ಕೆಲವು ತಾಂತ್ರಿಕ ದೋಷಗಳಿಂದಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿಲ್ಲ. ಈ ಹಿಂದೆ ಟ್ಯಾಕ್ಸ್ ಪೇ ಮಾಡುವ ಗೃಹಿಣಿಯರು ಕೂಡ ಅರ್ಜಿ ಸಲ್ಲಿಸಿದ್ದು ಅಂತವರ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ. ಇನ್ನು ಟ್ಯಾಕ್ಸ್ ಪೇಯರ್ ಅಲ್ಲದೆ ಇದ್ದರೂ ಕೆಲವು ಸರ್ವ ಸಮಸ್ಯೆಯಿಂದಾಗಿ ಹಲವರ ಹೆಸರು ಇದರಲ್ಲಿ ಆಡ್ ಆಗಿದೆ.
ಸರ್ಕಾರ ತನ್ನ ಈ ತಪ್ಪನ್ನು ಬಹುತೇಕ ಸರಿಪಡಿಸಿಕೊಂಡಿದ್ದು ಫಲಾನುಭವಿಗಳ ಖಾತೆಗೆ ಹಣ ಬರುವಂತೆ ಮಾಡುತ್ತಿದೆ ಎನ್ನಬಹುದು. ಇಷ್ಟ ಆಗಿ ನಿಮ್ಮ ಖಾತೆಗೆ ಹಣ ಯಾಕೆ ಬರುತ್ತಿಲ್ಲ ಎನ್ನುವುದನ್ನು ವಿಚಾರ ಮಾಡಿದ್ದೀರಾ?
* ಈ ಕೆವೈಸಿ ಖಾತೆಗೆ ಆಗಿದ್ಯಾ? ಚೆಕ್ ಮಾಡಿ
* ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
* ಹತ್ತು ವರ್ಷ ಹಳೆಯದಾಗಿದ್ದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಂಡು ಅದನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿಸಿ.
* ಖಾತೆಯಲ್ಲಿ ಇನ್ನೂ ಸಮಸ್ಯೆ ಸರಿ ಹೋಗದಿದ್ದರೆ ಹೊಸ ಖಾತೆಯನ್ನು ಅಂಚೆ ಕಚೇರಿಯಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆರಂಭಿಸಿ
* ಎಲ್ಲ ದಾಖಲೆಗಳು ಸರಿಯಾಗಿ ಇದ್ದು ಅರ್ಜಿ ಸ್ವೀಕಾರ ಗೊಳ್ಳದೆ ಇದ್ದರೆ ಹೊಸದಾಗಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿ.
ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಿ:
- ರಾಜ್ಯ ಸರ್ಕಾರದ ಮಾಹಿತಿ ಕಣಜ ಎನ್ನುವ ವೆಬ್ಸೈಟ್ ಗೆ ಭೇಟಿ ನೀಡಿ. ಅದರಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಎನ್ನುವ ಆಯ್ಕೆ ಮಾಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ಲವೋ ಹಾಗೂ ಗೃಹಲಕ್ಷ್ಮಿ ಹಣ ಬಂದಿದ್ಯೋ ಇಲ್ಲವೋ ಎಂದು ಇಲ್ಲಿ ಚೆಕ್ ಮಾಡಬಹುದು.
- ಇನ್ನು ಎರಡನೆಯದಾಗಿ ನಿಮ್ಮ ಮೊಬೈಲ್ ನಲ್ಲಿ DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಅದರಲ್ಲಿ ಆಧಾರ್ ಸಂಖ್ಯೆಯನ್ನು ಕೊಟ್ಟು ಪಾಸ್ವರ್ಡ್ ಸೆಟ್ ಮಾಡಿ.
- ನಂತರ ಅಪ್ಲಿಕೇಶನ್ ಒಳಗಡೆ ಪ್ರವೇಶಿಸಿ, ನಾಲ್ಕು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ ಪಾವತಿ ಸ್ಥಿತಿಯನ್ನು ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಖಾತೆಗೆ ಡಿಬಿಟಿ ಆಗಿರುವ ಎಲ್ಲಾ ಯೋಜನೆಯ ಬಗ್ಗೆ ಮಾಹಿತಿ ಸಿಗುತ್ತದೆ.
- ಇನ್ನು ಮೂರನೆಯದಾಗಿ https://dbtbharat.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಿ.
ಒಂದ್ ತಿಂಗಳು ಬಂದಿಲ್ಲ
Lakshmi Yojana
Gruh Lakshmi Yojana