JN.1 Virus
JN.1 Virus: ಹೊಸದಾಗಿ ಗುರುತಿಸಲಾದ JN.1 ವೈರಸ್‌ನ ಸಂಭಾವ್ಯ ಹರಡುವಿಕೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಪೂರ್ವಭಾವಿಯಾಗಿ ಪರಿಹರಿಸುವ ಪ್ರಯತ್ನದಲ್ಲಿ, ರಾಜ್ಯದ ಆರೋಗ್ಯ ಇಲಾಖೆಯು T3 ಫಾರ್ಮುಲಾ ಎಂದು ಕರೆಯಲ್ಪಡುವ ಸಮಗ್ರ ತಡೆಗಟ್ಟುವ ಕ್ರಮವನ್ನು ಹೊರತಂದಿದೆ. ಆರೋಗ್ಯ ಅಧಿಕಾರಿಗಳು ಜಾಗತಿಕವಾಗಿ JN.1 ವೈರಸ್‌ನ ಹೊರಹೊಮ್ಮುವಿಕೆಯನ್ನು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಸಂಭಾವ್ಯ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಈ ಕ್ರಮವು ಬರುತ್ತದೆ.

Table of Contents
ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿದೆ. ಇದುವರೆಗೂ 34 ಒಮಿಕ್ರಾನ್‌ನ ಉಪತಳಿಯ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಅಲರ್ಟ್ ಜಾರಿ ಮಾಡಲಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕು ಆಗಿರುವ ಕಾರಣ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
T3 ಸೂತ್ರಕ್ಕೆ ಮುಂದಾದ ಇಲಾಖೆ :
ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಆರೋಗ್ಯ ಇಲಾಖೆT3 ಸೂತ್ರ ಪಾಲಿಸುವುದಕ್ಕೆಮುಂದಾಗಿದೆ. T3 ಎಂದರೆ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‌ಮೆಂಟ್. ಈ ಮೂರು ಅಂಶಗಳನ್ನಿಟ್ಟುಕೊಂಡು JN.1 ತಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. T3 ಸೂತ್ರದಿಂದ ಹೆಚ್ಚು ವೈರಸ್ ಹರಡದಂತೆ ತಡೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ರಾಜ್ಯ ಆರೋಗ್ಯ ಇಲಾಖೆ.
ಇನ್ನು ಓದಿ: ಅಮೆಜಾನ್ ಕ್ರಿಸ್‌ಮಸ್ ಸೇಲ್ 2023: ಈ LED ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್!
ಮುಂಜಾಗೃತ ಕ್ರಮವಾಗಿ ಪ್ಲ್ಯಾನ್:
ಈ ಹಿಂದೆಕೋವಿಡ್ ಸಮಯದಲ್ಲೂಇದೇ ಸೂತ್ರದ ಮೂಲಕ ಕೇಸ್‌ಗಳನ್ನು ಪತ್ತೆಹಚ್ಚಲಾಗಿತ್ತು. ಈ ಮೂಲಕ ಸೋಂಕು ಕಾಣಿಸಿಕೊಂಡರೆ ಅತಿವೇಗವಾಗಿ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಮಯದಲ್ಲೂ ಈ ಸೂತ್ರ ಜಾರಿಗೆ ತರಲಾಗಿತ್ತು. ಇದೀಗ ಮುಂಜಾಗೃತ ಕ್ರಮವಾಗಿ ಆರಂಭದಲ್ಲೇ ಈ ಸೂತ್ರಕ್ಕೆ ಪ್ಲ್ಯಾನ್ ಮಾಡಲಾಗಿದೆ.

60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ :
ಇನ್ನು ರಾಜ್ಯದಲ್ಲಿ ಜೆನ್1 ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮಕ್ಕೆ ಮುಂದಾಗಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮೂರನೇ ಲಸಿಕೆ ಹಾಕಿಸಿಕೊಳ್ಳದೇ ಇರುವ ವೃದ್ಧರು ಕೂಡಲೇ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಲಾಗಿದೆ.
Join Telegram GroupJoin Now
WhatsApp GroupJoin Now
ಬೂಸ್ಟರ್ ಡೋಸ್ ಅಭಿಯಾನ :
ಅರವತ್ತು ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಸೂಚನೆ
ನೀಡಲಾಗಿದೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೂಸ್ಟರ್ ಡೋಸ್ ಸಂಬಂಧ ಇನ್ನೆರಡು ದಿನದಲ್ಲಿ ಅಭಿಯಾನ ಶುರುವಾಗಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು.

WHO ಪ್ರಕಾರ, ಪ್ರಸ್ತುತ ಲಸಿಕೆಗಳು JN.1 ಮತ್ತು SARS-CoV-2
WHO ಪ್ರಕಾರ, ಪ್ರಸ್ತುತ ಲಸಿಕೆಗಳು JN.1 ಮತ್ತು SARS-CoV-2 ನ ಇತರ ಪರಿಚಲನೆಯ ರೂಪಾಂತರಗಳಿಂದ ತೀವ್ರವಾದ ರೋಗ ಮತ್ತು ಸಾವಿನ ವಿರುದ್ಧ ರಕ್ಷಿಸುವುದನ್ನು ಮುಂದುವರೆಸುತ್ತವೆ. ಜಾಗತಿಕ ಆರೋಗ್ಯ ಸಂಸ್ಥೆಯು ಸಾಕ್ಷ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಗತ್ಯವಿರುವಂತೆ JN.1 ಅಪಾಯದ ಮೌಲ್…
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಈ ತಿಂಗಳ ಆರಂಭದಲ್ಲಿ ಜೆಎನ್.1 ಸಬ್‌ವೇರಿಯಂಟ್ ಯುಎಸ್‌ನಲ್ಲಿ ಡಿಸೆಂಬರ್ 8 ರ ಹೊತ್ತಿಗೆ ಸುಮಾರು 15 ರಿಂದ 29 ಪ್ರತಿಶತದಷ್ಟು ಪ್ರಕರಣಗಳನ್ನು ಹೊಂದಿದೆ ಎಂದು ಹೇಳಿದೆ. ಕಳೆದ ವಾರ, ಚೀನಾ ಏಳು ಸೋಂಕುಗಳನ್ನು ಪತ್ತೆ ಮಾಡಿದೆ ಕೋವಿಡ್…
SARS-CoV-2 ನ ಹೊಸ ರೂಪಾಂತರಗಳೊಂದಿಗೆ ವ್ಯವಹರಿಸುವಾಗ ತಜ್ಞರು ಸಮತೋಲಿತ ದೃಷ್ಟಿಕೋನವನ್ನು ಪ್ರತಿಪಾದಿಸುತ್ತಾರೆ.
ಮಾಸ್ಕ್‌ಗಳ ಬಳಕೆ, ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕಿಕ್ಕಿರಿದ ಅಥವಾ ಕಳಪೆ ಗಾಳಿ ಇರುವ ಪ್ರದೇಶಗಳನ್ನು ತಪ್ಪಿಸುವುದು ಮತ್ತು ಸರಿಯಾದ ಕೆಮ್ಮು ಶಿಷ್ಟಾಚಾರವನ್ನು ಅನುಸರಿಸುವುದು ಸೇರಿದಂತೆ JN.1 ರ ವಿರುದ್ಧ ಅಸ್ತಿತ್ವದಲ್ಲಿರುವ ಮುನ್ನೆಚ್ಚರಿಕೆ ಕ್ರಮಗ…
- ವಿರಾಟ್ ಕೊಹ್ಲಿ RCB ಯಲ್ಲಿ ಮತ್ತೆ ನಾಯಕನಾಗಿ ಮರಳಲು ಸಜ್ಜು – IPL 2025 ಗೆ ಮುಹೂರ್ತ - October 30, 2024
- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಮತ್ತೆ ನರ್ಸಿಂಗ್ ಸೀಟುಗಳು ಖಾಲಿ! ಭರ್ತಿಗೆ ಅದೇಶ ನೀಡಿದ ಸರ್ಕಾರ - April 24, 2024
- ಕರ್ನಾಟಕದಲ್ಲಿ 500+ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ! ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. - March 28, 2024
Leave a Reply