ತಂತ್ರಜ್ಞಾನವು ಸಾಮಾಜಿಕ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿರುವ ಯುಗದಲ್ಲಿ, ಡಿಜಿಟಲ್ ವಿಭಜನೆಯು ಗಮನಾರ್ಹ ತಡೆಗೋಡೆಯಾಗಿ ಮುಂದುವರಿಯುತ್ತದೆ. ಈ ಡಿಜಿಟಲ್ ಯುಗದಲ್ಲಿ ಗ್ರಾಮೀಣ ಸಮುದಾಯಗಳು ತಮ್ಮನ್ನು ತಾವು ಹಿಂದುಳಿದಿರುವುದನ್ನು ಕಂಡುಕೊಳ್ಳುತ್ತವೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಈ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಗಳು ವೇಗವನ್ನು ಪಡೆಯುತ್ತಿವೆ, ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ, ಧನಾತ್ಮಕ ಬದಲಾವಣೆಯ ಅಲೆಗೆ ನಾಂದಿ ಹಾಡುತ್ತಿದೆ.
ಸದ್ಯ ರಾಜ್ಯದಲ್ಲಿ ಒಂದೊಂದೇ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ ಎನ್ನಬಹುದು. ರಾಜ್ಯದ ಜನರ ಹಿತಕ್ಕಾಗಿ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಾ ಜನರಿಗೆ ಒಂದು ರೀತಿಯಲ್ಲಿ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಇತ್ತೀಚಿಗೆ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ.
ಗ್ರಾಮೀಣ ಪ್ರದೇಶದ ಜನರ ಅಭಿವೃದ್ದಿಗಾಗಿ ಸರ್ಕಾರ ಹೊಸ ಹೊಸ ಯೋಜನೆಯನ್ನು ನೀಡುತ್ತಿದೆ. ಸದ್ಯ ಗ್ರಾಮೀಣ ಭಾಗದ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಜನತೆಗಾಗಿ ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶವನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ ಎನ್ನಬಾಹುದು.
ರಾಜ್ಯದ ಗ್ರಾಮೀಣ ಜನತೆಗೆ ಸಿಹಿ ಸುದ್ದಿ
ಸದ್ಯ ರಾಜ್ಯ ಸರ್ಕಾರ ಗ್ರಾಮೀಣ ಜನರಿಗಾಗಿ ವಿವಿಧ ಯೋಜನೆಯನ್ನು ರೂಪಿಸಿದ್ದು, ಇದೀಗ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ವರ್ಷದ December ಅಂತ್ಯದೊಳಗೆ 35 ಗ್ರಾಮ ಪಂಚಾಯತ್ (Gram Panchayat) ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಂಪೂರ್ಣ “ಡಿಜಿಟಲ್ ಸಾಕ್ಷರತೆ” ಸಾಧಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಗ್ರಾಮಗಳು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಮಸ್ಥರು ನಿತ್ಯದ ಚಟುವಟಿಕೆಗಳಿಗೆ ಡಿಜಿಟಲ್ ಜ್ಞಾನವನ್ನು ಹೊಂದಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸಾಕ್ಷರತೆ (Digital Literacy) ಕಾರ್ಯಕ್ರಮ ಅನುಷ್ಠಾನ
ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಆಯ್ದ 35 ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಸಾಕ್ಷರತೆ ತರಬೇತಿ (Digital Literacy Training) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಗ್ರಾಮದ ಪದವೀಧರರನ್ನು ಗುರುತಿಸಿ, ವಾರ್ಡ್ ಹಂತದಲ್ಲಿ ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು ಕಾರ್ಯಕ್ರಮದ ಮಾಹಿತಿ ನೀಡಲಾಗುತ್ತದೆ. ಸ್ವಯಂ ಸೇವಕರು ತಮ್ಮ ಗ್ರಾಮಸ್ಥರಿಗೆ ಡಿಜಿಟಲ್ ತರಬೇತಿ ನೀಡುತ್ತಾರೆ. ಈ ನೊತ್ತಿನಲ್ಲಿ ಗ್ರಂಥಾಲಯಗಳಿಗೆ ಸ್ಮಾರ್ಟ್ ಫೋನ್, ಲಾಪ್ ಟಾಪ್, ಮಾನಿಟರ್, ಇಂಟರ್ ನೆಟ್ ಸೌಲಭ್ಯವನ್ನು ನೀಡಾಲಾಗಿದೆ.