
ಸಾಮಾನ್ಯವಾಗಿ ಕಾರನ್ನು ಖರೀದಿ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಇದೀಗ 7 ಸೀಟರ್ ಹೊಂದಿರುವ ಅಗ್ಗದ ಬೆಲೆಯ ಮಾರುತಿ ಕಂಪನಿಯ ಕಾರು ಒಂದು ಬಿಡುಗಡೆ ಆಗಿದೆ.
ಮಾರುತಿ ಸುಜುಕಿ ಬಲೆನೊ ಮೇ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು. ಮಾರುತಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ವ್ಯಾಗನಾರ್ ಮೂರನೇ ಸ್ಥಾನದಲ್ಲಿದೆ. ಹ್ಯಾಚ್ ಬ್ಯಾಕ್ ಗಳು ಮತ್ತು ಎಸ್ ಯು ವಿ ಗಳ ಹೊರತಾಗಿ 7 ಆಸನಗಳ ಕಾರುಗಳು ದೇಶದಲ್ಲಿ ಅತಿ ಹೆಚ್ಚು ಬಿಕರಿಯಾಗುತ್ತಿದೆ.

ಪ್ರಮುಖ ಲಿಂಕ್‌ಗಳು:
ಇತ್ತೀಚಿನ ಸುದ್ದಿ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು | APPLY HERE ಕ್ಲಿಕ್ |
ಮಾರುತಿ ಸುಜುಕಿ ಇಕೋ ಕಾರಿನ ಬೆಲೆ
ಮಾರುತಿ ಏರಿಟಿಗಾ ದೀರ್ಘಕಾಲದಿಂದಲೂ ಉತ್ತಮ ಮಾರಾಟವನ್ನು ಕಾಣುತ್ತಲೇ ಇದೆ. ಆದರೆ 2023 ರ ಮೇ ತಿಂಗಳ್ಳಿ ಅಗ್ಗದ 7 ಸೀಟರ್ ಕಾರು ಒಂದು ಏರಿಟಿಗಾವನ್ನು ಹಿಂದಿಕ್ಕಿದೆ. ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಈ ಕಾರಿನ ಬೆಲೆ 5 .5 ಲಕ್ಷಕ್ಕಿಂತಲೂ ಕಡಿಮೆ ಎನ್ನಲಾಗುತ್ತಿದೆ. ಮಾರುತಿ ಸುಜುಕಿ ಇಕೋ ಮೇ ತಿಂಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ 7 ಆಸನಗಳ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು 12800 ಯುನಿಟ್ ಗಳನ್ನೂ ಮಾರಾಟ ಮಾಡಲಾಗಿದೆ.
ಹೇಳುವುದಾದರೆ ಈ ಕಾರು ಮಾರಾಟದಲ್ಲಿ 7 ನೇ ಸ್ಥಾನದಲ್ಲಿದೆ. ಎರಡನೇ ಅತಿ ಹೆಚ್ಚು ಮಾರಾಟವಾದ 7 ಆಸನಗಳ ಕಾರು ಮಾರುತಿ ಎರ್ಟಿಗಾ. ಮೇ ತಿಂಗಳಲ್ಲಿ 10500 ಯುನಿಟ್ ಏರಿಟಿಗ ಕಾರುಗಳು ಮಾರಾಟವಾಗಿದೆ.

ಮಾರುತಿ ಸುಜುಕಿ ಇಕೋ ಕಾರಿನ ವಿಶೇಷತೆ
ನಂಬರ್ ಒನ್ ಸ್ಥಾನದಲ್ಲಿರುವ ಮಾರುತಿ ಇಕೋ ಬೆಲೆ 5 .27 ಲಕ್ಷ ರೂಪಾಯಿಗಳನ್ನು ಆರಂಭವಾಗುತ್ತದೆ ಎನ್ನಲಾಗಿದೆ. ಈ ಕಾರು 6 ಮತ್ತು 7 ಸೀಟರ್ ಆಯ್ಕೆಗಳನ್ನು ಹೊಂದಿದೆ. ಮಾರುತಿ ಸುಜುಕಿ ಇಕೋ 1.2 lk ಸರಣಿ ಡ್ಯುಯಲ್ ಜೆಟ್, ಡ್ಯುಯಲ್ vvt ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.
ಇದು 80 .76 ps ಪವರ್ ಮತ್ತು 104 .4 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಪವರ್ ಟ್ರೇನ್ ಹಿಂದಿನ ಮಾದರಿಗಿಂತ 10 ಪ್ರತಿಶತದಷ್ಟು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ CNG ಆಯ್ಕೆಯು ಲಭ್ಯವಿದೆ. cng ಯೊಂದಿಗೆ ಎಂಜಿನ್ 71 .65 ps ಪವರ್ ಮತ್ತು 95 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಟೂರ್ ರೂಪಾಂತರವು ಪೆಟ್ರೋಲ್ ಮತ್ತು cng ಎರಡರಲ್ಲೂ 20.20 ಕಿಮೀ 27 .05 ಕಿಮೀ ಮೈಲೇಜ್ ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು cng ಎರಡರಲ್ಲೂ 19.71 ಕಿಮೀ ಮತ್ತು 26.78 ಕಿಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ 5.21 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.